ಸುರತ್ಕಲ್ ಬಂಟರ ಸಂಘದಲ್ಲಿ ಉಚಿತ ವೈದ್ಯಕೀಯ ಶಿಬಿರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುರತ್ಕಲ್ ಬಂಟರ ಸಂಘದಲ್ಲಿ ಉಚಿತ ವೈದ್ಯಕೀಯ ಶಿಬಿರ

Share This
ಸುರತ್ಕಲ್: ಸುರತ್ಕಲ್ ಬಂಟರ ಸಂಘ, ರೋಟರಿ ಕ್ಲಬ್ ಬೈಕಂಪಾಡಿ, ಶ್ರೀನಿವಾಸ ಆಸ್ಪತ್ರೆ ಮುಕ್ಕ ಐ ನೀಡ್ಸ್ ಆಪ್ಟಿಕಲ್ಸ್ ಸುರತ್ಕಲ್ ಇದರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ನೇತ್ರ ತಪಾಸಣೆ ಇಎನ್‌ಟಿ ಟೆಸ್ಟ್ ಮತ್ತು ತಪಾಸಣೆ ಶಿಬಿರ ಸುರತ್ಕಲ್ ಬಂಟರ ಸಂಘದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಎಂಜೆ, ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮ ಶ್ಲಾಘಿಸಿ, ಆರೋಗ್ಯ, ಜಲ ಸಿರಿ, ಮತ್ತು ವಿದ್ಯಾನಿಧಿ ಯೋಜನೆ ಇವು ರೋಟರಿಯ ಈ ವರ್ಷದ ಧ್ಯೇಯವಾಕ್ಯಗಳಾಗಿದ್ದು ಈ ಕ್ಷೇತ್ರಗಳಲ್ಲಿ ಕನಿಷ್ಟ ಒಂದು ಲಕ್ಷ ಮಂದಿಗೆ ಸೇವೆ ಸಲ್ಲಿಸುವ ಗುರಿಇದೆ ಎಂದು ಹೇಳಿದರು.

ಮುಕ್ಕ ಶ್ರೀನಿವಾಸ ವಿವಿ ಪ್ರೊ. ಛಾನ್ಸಲರ್ ಡಾ ಎ ಶ್ರೀನಿವಾಸ ರಾವ್, ರೋಟರಿ ಸಹಾಯಕ ಗವರ್ನರ್ ಬಾಲಕೃಷ್ಣ ಶೆಟ್ಟಿ, ಸುರತ್ಕಲ್ ವಿಜಯ ಮೆಡಿಕಲ್ಸ್ ನ ದಯಾನಂದ ಶೆಟ್ಟಿ, ರೋಟರಿ ವಲಯಾಧಿಕಾರಿ ಜಯ ಕುಮಾರ್, ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಡೇವಿಡ್, ಐ ನೀಡ್ಸ್ ಆಪ್ಟಿಕಲ್ಸ್ ನ ಯೋಗೀಶ್ ನಾಯಕ್, ಸುರತ್ಕಲ್ ರೋಟರಿ ಅಧ್ಯಕ್ಷ ಅಶೋಕ್ ಎನ್, ಕಾರ್ಯದರ್ಶಿ ಹರೀಶ್ ಬಿ ಶೆಟ್ಟಿ, ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಸಂಘದ ವೈದ್ಯಕೀಯ ಸಂಚಾಲಕ ಪ್ರತಾಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಐ ನೀಡ್ಸ್ ನಿಂದ ಉಚಿತ ಕನ್ನಡಕ ವ್ಯವಸ್ಥೆ ಮಾಡಲಾಗಿದೆ.

ರಾಜೇಶ್ವರಿ ಡಿ ಶೆಟ್ಟಿ ನಿರೂಪಿಸಿದರು. ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದು ನೂರಾರು ಫಲಾನುಭವಿಗಳು ಶಿಬಿರದಿಂದ ಪ್ರಯೋಜನ ಪಡೆದುಕೊಂಡರು.

Pages