ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇವರು ಮೆಚ್ಚುವ ಕೆಲಸ ಮಾಡುತ್ತಿದೆ, ಐಕಳರು ಸಮಾಜ ಸೇವೆಯನ್ನು ಕರ್ತವ್ಯದಂತೆ ಮಾಡುತ್ತಿದ್ದಾರೆ : ಡಾ. ಎನ್. ವಿನಯ್ ಹೆಗ್ಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇವರು ಮೆಚ್ಚುವ ಕೆಲಸ ಮಾಡುತ್ತಿದೆ, ಐಕಳರು ಸಮಾಜ ಸೇವೆಯನ್ನು ಕರ್ತವ್ಯದಂತೆ ಮಾಡುತ್ತಿದ್ದಾರೆ : ಡಾ. ಎನ್. ವಿನಯ್ ಹೆಗ್ಡೆ

Share This
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದೆ. ಕಳೆದ 3 ವರ್ಷಗಳಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಸಮಾಜ ಸೇವೆಯನ್ನು ಕರ್ತವ್ಯದಂತೆ ಮಾಡುತ್ತಿದ್ದಾರೆ ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎನ್. ವಿನಯ್ ಹೆಗ್ಡೆ ಹೇಳಿದರು.
ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಅ.22ರಂದು ಬಂಟ್ಸ್  ಹಾಸ್ಟೇಲ್ ಬಳಿಯ ಸಿ.ವಿ. ನಾಯಕ್ ಹಾಲ್ ಸಭಾಂಗಣದಲ್ಲಿ ನಡೆದ 'ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು  ಗೌರವ ಸನ್ಮಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಸಮಾಜದ ಎಲ್ಲಾ ವರ್ಗಕ್ಕೂ ಸಹಾಯ ಮಾಡುವುದು ನಮ್ಮ ಕರ್ತವ್ಯ ನಮ್ಮ ಸಂಸ್ಥೆಯು ಪ್ರತಿ ವರ್ಷ ಐದಾರು ಕೋಟಿಯಷ್ಟು ಹಣ ಸಹಾಯ ಧನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ತನ್ನಿಂದಾಗುವ  ಸಹಕಾರ ನೀಡುವುದಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಿ ಮಾತನಾಡಿ, ದೈವಾರಾಧನೆ ಹಿಂದೂ ಸಂಪ್ರದಾಯವಲ್ಲ ಎಂದು ಹೇಳಿಕೆ ನೀಡುವ ಮೂಲಕ ನಟ ಚೇತನ್ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಸಿನಿಮಾದಲ್ಲಿ ತೋರಿಸಲಾದ ದೈವಾರಾಧನೆಯ ಬಗ್ಗೆ ಚೇತನ್ ಕೇವಲವಾಗಿ ಮಾತನಾಡಿರುವುದನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ತೀವ್ರ ಖಂಡಿಸುತ್ತದೆ ಎಂದರು.

ದೈವಾರಾಧನೆ ತುಳುನಾಡಿನ ಆಚರಣೆಯ ಒಂದು ಭಾಗ. ದೈವಾರಾಧನೆ, ನಾಗಾರಾಧನೆಗೆ ತುಳುನಾಡಿನಲ್ಲಿ ವಿಶೇಷ ಮನ್ನಣೆ ಇದೆ. ದೈವಾರಾಧನೆಯನ್ನು ಬಹಳ ಭಕ್ತಿ, ಶ್ರದ್ದೆಯಿಂದ ಪೂಜಿಸುತ್ತಾರೆ. ದೈವಾರಾಧನೆ ಮೇಲೆ ನಮಗೆ ನಂಬಿಕೆ ಇದೆ. ಇದನ್ನು ಕಾಂತಾರ ಸಿನಿಮಾದಲ್ಲಿ  ರಿಷಬ್ ಶೆಟ್ಟಿ ಬಹಳ ಚೆನ್ನಾಗಿ ತೋರಿಸಿದ್ದಾರೆ. ಆದರೆ ಚೇತನ್ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಯದೆ ಮಾತನಾಡಿರುವುದು ತಪ್ಪು. ಅವರ ಹೇಳಿಕೆ, ಮಾತುಗಳನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಚೇತನ್ ಕೂಡಲೇ ಕ್ಷಮೆಯಾಚಿಸ ಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀದೇವಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎ ಸದಾನಂದ ಶೆಟ್ಟಿ ಮಾತನಾಡಿ, ಐಕಳರ ಕಾರ್ಯ ಯಾವ ಬಂಟರು ಮಾಡಲು ಸಾಧ್ಯವಿಲ್ಲ. ಜಾಗತಿಕ ಬಂಟರ ಸಂಘವು ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ಇನ್ನೂರೈವತ್ತು ಮನೆ ನಿರ್ಮಾಣ ವಿದ್ಯಾರ್ಥಿವೇತನ ಮದುವೆಗೆ ಸಹಾಯಧನ ಇನ್ನಿತರ ಸಹಾಯ ಹಸ್ತ ನೀಡಿರುವುದು ಮೆಚ್ಚುವ ಕೆಲಸ ಅವರ ತಂಡವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಮುಂದೆಯೂ ಇಂಥ ಕಾರ್ಯಗಳು ಹೆಚ್ಚಾಗಿ ನಡೆಯಲಿ ಎಂದು ಹಾರೈಸಿದರು.

ಜಾಗತಿಕ ಬಂಟ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದ ಡಾ| ಬಿ ಆರ್ ಶೆಟ್ಟಿ ಮಾತನಾಡಿ, ದಾನಧರ್ಮ ನೀಡುವುದು ಪುಣ್ಯದ ಕೆಲಸ. ಇಂಥ ಅಪೂರ್ವ ಕಾರ್ಯವನ್ನು ಜಾಗತಿಕ ಬಂಟರ ಸಂಘವು ಐಕಳರ ಅಧ್ಯಕ್ಷತೆಯಲ್ಲಿ ಮಾಡುತ್ತಿದೆ. ಇಂತಹ ಸಮಾಜ ಕಲ್ಯಾಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಎಂದು ಹಾರೈಸಿದರು.

ಎ ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ಎ ಜೆ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಐಕಳರ ಅಧ್ಯಕ್ಷ ತೆಯಲ್ಲಿ ಕಳೆದ 3ವರ್ಷದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಸರಿಸುಮಾರು ಹದಿನೈದು ಕೋಟಿಗೂ ಹೆಚ್ಚು ದಾನ ಮಾಡಿರುವ ಯಾವುದೇ ಸಂಘ ಇಲ್ಲ. ಜನ ಮೆಚ್ಚುವ ಕಾರ್ಯ ವನ್ನು ಬಂಟರ ಸಂಘಗಳ ಒಕ್ಕೂಟ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಪುತ್ತೂರಿನ ರೈ ಎಸ್ಟೇಟ್ ಆಂಡ್ ಡೆವಲಪರ್ಸ್ ಸಿಎಂಡಿ ಅಶೋಕ್ ರೈ ಮಾತನಾಡಿ, ಬಂಟ ಸಮಾಜದಲ್ಲೂ ಆರ್ಥಿಕ ಹಿಂದುಳಿದವರಿದ್ದಾರೆ. ಬಡ ಕುಟುಂಬಕ್ಕೆ ಸಹಾಯ ಮಾಡಲು ಐಕಳರಿಗೆ ಮನವಿ ಮಾಡಿದಾಗ ತಕ್ಷಣ ನೆರವು ನೀಡಿದ್ದಾರೆ. ಅವರಿಗೆ ಎಲ್ಲರ ಸಹಕಾರ ಇರಲಿ ಮುಂದೆ ಇಂಥ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ, ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಬಂಟರಿಗೆ ಶಕ್ತಿ ತುಂಬುವ ಕೆಲಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡುತ್ತಿದೆ. ಬಡವರನ್ನು ಗುರುತಿಸಿ ಸಹಾಯ ಮಾಡುವ ಜಾಗತಿಕ ಬಂಟರ ಸಂಘದ ಕಾರ್ಯ ನಿರಂತರವಾಗಿರಲಿ. ಮುಂದಿನ ದಿನಗಳಲ್ಲಿ ತಾನು ತನ್ನಿಂದಾಗುವ ಅಳಿಲು ಸೇವೆಯನ್ನು ಒಕ್ಕೂಟಕ್ಕೆ ನೀಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಮೂಲ್ಕಿಯಲ್ಲಿ ಸ್ಥಾಪನೆಯಾಗಲಿರುವ ಜಾಗತಿಕ ಬಂಟರ ಸಂಘದ ಕಟ್ಟಡಕ್ಕೆ ಪ್ರಾಧಿಕಾರದಿಂದ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಮಟ್ಟಾರು ರತ್ನಾಕರ ಹೆಗ್ಡೆ ಅವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಐಕಳ ಹರೀಶ್ ಶೆಟ್ಟಿ ಹಾಗೂ ಅವರ ತಂಡ ಹೊಸ ರೂಪ ನೀಡಿದೆ. ಸಮಾಜದಲ್ಲಿ ಇನ್ನೂ ಕೂಡ ಮಧ್ಯಮ ವರ್ಗದ ಹಾಗೂ ಅದಕ್ಕಿಂತ ಕೆಳ ಮಟ್ಟದ ಬಡವರಿದ್ದಾರೆ. ಮುಲ್ಕಿಯಲ್ಲಿ ತಲೆಯೆತ್ತಲಿರುವ ಒಕ್ಕೂಟದ ಕಟ್ಟಡಕ್ಕೆ ತಮ್ಮ ಅಧಿಕಾರದ ಇತಿಮಿತಿಯಲ್ಲಿ  ಸಾಧ್ಯವಾದಷ್ಟು ಸಹಕಾರ ನೀಡುವ ಭರವಸೆ ನೀಡಿದರು.

ಯುವ ಮುಖಂಡ ಮಿಥುನ್ ರೈ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಬಡವರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಇಂದು ಕಾಂತಾರ ಸಿನಿಮಾದ ಮೂಲಕ ರಿಷಬ್ ಶೆಟ್ಟಿಯವರ ವಿಶ್ವವಿಖ್ಯಾತಿ ಆಗಿದ್ದಾರೆ. ಇಂತಹ ಅನೇಕ ಕ್ಷೇತ್ರದ ವಿವಿಧ ಪ್ರತಿಕ್ರಿಯೆಗಳು ನಮ್ಮ ಸಮಾಜದಲ್ಲಿವೆ ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. 

ಸಿಎ ಸದಾಶಿವ ಶೆಟ್ಟಿ ಅವರು ಮಾತನಾಡಿ, ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮೇಲೆ ತರುವ ನಿಟ್ಟಿನಲ್ಲಿ ಕಲಿಯುವ ಮಕ್ಕಳಿಗೆ  ನೀಡುವ ಮೂಲಕ ಸಹಾಯ ಮಾಡುವ ಹೊಸ ಹೊಸ ಯೋಜನೆಗೆ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳು ಕಲಿತು ಉತ್ತಮ ಶಿಕ್ಷಣ ಪಡೆದು ನಂತರ ಯಾವುದೇ ಬಡ್ಡಿಲ್ಲದೆ  ಸಂಘಕ್ಕೆ ಹಣ ಮರುಪಾವತಿ ಮಾಡಬೇಕು. ಈ ಮೂಲಕ ಮತ್ತೋರ್ವ ಅರ್ಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಧಕರಿಗೆ ಸನ್ಮಾನ: ಕ್ರಿಕೆಟ್ ಟಿ ಟ್ವೆಂಟಿ ಕನ್ನಡಿಗರ ಐಪಿಎಲ್ ರನ್ನರ್ ಆಫ್ ಡೆಲ್ಲಿ ಪೃಥ್ವಿರಾಜ್ ಶೆಟ್ಟಿ, ವಾಣಿಜ್ಯ ತೆರಿಗೆ ಅಧಿಕಾರಿ ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಪ್ರತಾಪ್ ಚಂದ್ರ ಶೆಟ್ಟಿ ಹಾಲಾಡಿ ,  ಮೈಸೂರಿನ ಪ್ರತಿಷ್ಠಿತ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿಯನ್ನು ಪಡೆದಿರುವ ವಸಂತ ಶೆಟ್ಟಿ, ಕ್ರೀಡಾಪಟುಗಳಾದ  ಅದ್ವಿತ್ ಡಿ ಶೆಟ್ಟಿ ಬಜಾಲ್, ತಸ್ಮೈ ಎಂ ಶೆಟ್ಟಿ ಕೊಡಿಯಾಲ್ ಬೈಲ್, ಸ್ವಾತಿ ಎಂ ಶೆಟ್ಟಿ ವಳಕಾಡು, ಸ್ವಾತಿ ಶೆಟ್ಟಿ ಅಜೆಕಾರು ಇವರ ಸಾಧನೆ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತಾಪ್ ಚಂದ್ರ ಶೆಟ್ಟಿ ಹಳ್ನಾಡು ಅವರು, ಜಾಗತಿಕ ಬಂಟರ ಸಂಘವು ಕಳೆದ 3 ವರ್ಷಗಳಲ್ಲಿ ಮಾಡಿರುವ ಸಾಧನೆ ಬಂಟ ಸಮಾಜ ಹೆಮ್ಮೆ ಹೆಮ್ಮೆ ಪಡುವ ವಿಷಯವಾಗಿದೆ. ಜಾಗತಿಕ ಬಂಟರ ಸಂಘವು ಬದ್ಧತೆ ಪಾರದರ್ಶಕತೆ ಉಳಿಸಿಕೊಂಡಿದ್ದು ವಿಶ್ವದ ಬಂಟರು ದೊಡ್ಡ ದೇಣಿಗೆ ನೀಡುತ್ತಿರುವುದು ಸಾಕ್ಷಿಯಾಗಿದೆ. ಎಲ್ಲಾ ಫಲಾನುಭವಿಗಳು ಈ ಸಂಸ್ಥೆಗೆ ಕೃತಜ್ಞರಾಗಿರಬೇಕು ಕೋರಿದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ  ಶಿಕ್ಷಣ, ಮದುವೆ, ಮನೆ‌ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ  ಫಲಾನುಭವಿಗಳಿಗೆ ಸರಿಸುಮಾರು (50 ಲಕ್ಷದ 67 ಸಾವಿರಕ್ಕೂ) ಅಧಿಕ ಮೊತ್ತದ ಸಹಾಯಧನದ ಚೆಕ್ ಗಳನ್ನು ವಿತರಿಸಲಾಯಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. 

ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕ ಮಾತುಗಳನ್ನಾಡಿ ಕಳೆದ 3 ವರ್ಷದಲ್ಲಿ ಸರಿಸುಮಾರು 15 ಕೋಟಿಗೂ ಅಧಿಕ ಹಣವನ್ನು ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಸಹಾಯ ಧನವಾಗಿ  ನೀಡಿರುವ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಭೋಜಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಲ್ಕೆಬೈಲು, ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಫಲಾನುಭವಿಗಳು ಜಾಗತಿಕ ಬಂಟರ ಸಂಘಗಳ ಸಿಬ್ಬಂದಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. 

ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಪಡುಪಳ್ಳಿ ಪ್ರಾರ್ಥಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್, ಪ್ರೀಯಾ ಹರೀಶ್ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

Pages