ವರದಕ್ಷಿಣೆ ಕಾಟಕ್ಕೆ ಸ್ವಾತಿ ಶೆಟ್ಟಿ ಆತ್ಮಹತ್ಯೆ: ಈ ಪಿಡುಗಿನ ವಿರುದ್ಧ ಧ್ವನಿ ಎತ್ತೋದು ಎಂದು...? - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವರದಕ್ಷಿಣೆ ಕಾಟಕ್ಕೆ ಸ್ವಾತಿ ಶೆಟ್ಟಿ ಆತ್ಮಹತ್ಯೆ: ಈ ಪಿಡುಗಿನ ವಿರುದ್ಧ ಧ್ವನಿ ಎತ್ತೋದು ಎಂದು...?

Share This
BUNTS NEWS,ಮೂಡುಬಿದಿರೆ: ತನ್ನ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ನೊಂದ ಪದವೀಧರೆ ಸ್ವಾತಿ.ಆರ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯಿಂದ ವರದಕ್ಷಿಣೆ ಪಿಡುಗು ಬಂಟ ಸಮಾಜದಲ್ಲಿ ಇನ್ನೂ ಜೀವಂತವಾಗಿರುವುದು ಸಾಬೀತಾಗಿದೆ.
ಘಟನೆಯ ಹಿನ್ನೆಲೆ: 2014ರಲ್ಲಿ ಬೆಳ್ತಂಗಡಿಯ ಸ್ವಾತಿ ಶೆಟ್ಟಿ (25) ಅವರು ಮೂಡುಬಿದಿರೆ ಮೂಡುಮಾರ್ನಾಡಿನ ಬೋಜ ಶೆಟ್ಟಿ ಅವರ ಪುತ್ರ ಶರತ್ಚಂದ್ರ ಎಂಬವರೊಂದಿಗೆ ವಿವಾಹವಾಗಿತ್ತು. ಮದುವೆಯ ಸಂದರ್ಭ 5 ಲಕ್ಷ ವರದಕ್ಷಿಣೆ ಹಾಗೂ 30 ಪವನ್ ಚಿನ್ನವನ್ನು ನೀಡಲಾಗಿತ್ತು. ಮದುವೆಯದ ನಂತರ ಸ್ವಾತಿ ಗಂಡ ಶರತ್ಚಂದ್ರ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರು. ನಂತರದ ದಿನಗಳಲ್ಲಿ ಗಂಡನ ಮನೆಯವರು ಆಕೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು ತನ್ನ ತಾಯಿಯಲ್ಲೂ ಈ ಬಗ್ಗೆ ಸ್ವಾತಿ ಹೇಳಿಕೊಂಡಿದ್ದಾರೆ.
ಕಳೆದ ಅ.13ರಂದು ಗಂಡನ ಮನೆಯವರ ಕಿರುಕುಳದಿಂದ ಬೇಸತ್ತ ಸ್ವಾತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.18ರಂದು ಸ್ವಾತಿ ಸಾವನ್ನಪ್ಪಿದ್ದಾರೆ. ಇದೀಗ ಸ್ವಾತಿ ತಾಯಿ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು ಸ್ವಾತಿ ಗಂಡನ ಮನೆಯ ಐವರ ವಿರುದ್ದ ದೂರು ದಾಖಲಾಗಿದೆ.
ಈ ಘಟನೆಯಿಂದಾಗಿ ಬಂಟ ಸಮಾಜದಲ್ಲಿ ಇನ್ನೂ ಕೂಡ ವರದಕ್ಷಿಣೆ ಪಿಡುಗು ಜೀವಂತವಾಗಿರುವುದು ಸಾಬೀತಾಗಿದ್ದು ತಲೆ ತಗ್ಗಿಸುಂತಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಬಂಟ ಸಂಘಗಳ ಮೂಲಕ ಆಗಬೇಕಾಗಿದೆ.

Pages