ಬಂಟ್ಸ್ ನ್ಯೂಸ್, ಮಂಗಳೂರು: ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರಿನ ವರ್ಷಾವಧಿ ಉತ್ಸವ – ‘ತಿಬರಾಯನ’ವೂ ಡಿ.15ರ ಮಂಗಳವಾರದಿಂದ ಡಿ.22ರ ವರೆಗೆ ನಡೆಯಲಿದೆ.
ಡಿ.15ರಂದು ರಾತ್ರಿ
10ಕ್ಕೆ ಧ್ವಜಾರೋಹಣ, ಡಿ.16ರಂದು ಬೆಳಿಗ್ಗೆ ತುಲಾಭಾರ ಸೇವೆ, ಶ್ರೀ ಉಳ್ಳಾಯ ದೈವದ ನೇಮೋತ್ಸವ, ಉರುಳು
ಸೇವೆ, ಕಂಚೀಲು ಸೇವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ, ರಾತ್ರಿ 11ಕ್ಕೆ ಶ್ರೀ ಕೊಡಮಣಿತ್ತಾಯ
ದೈವದ ನೇಮ, ರಥೋತ್ಸವ ನಡೆಯಲಿದೆ.
ಡಿ.17ರಂದು ರಾತ್ರಿ
ಶ್ರೀ ಕಾಂತೇರಿ ದೂಮಾವರಿ ದೈವದ ನೇಮ, ಡಿ.18ರಂದು ರಾತ್ರಿ ಶ್ರಿ ಸರಳ ಧೂಮಾವತಿ ದೈವದ ನೇಮ, ಡಿ.19ರಂದು
ಶ್ರೀ ಜಾರಂದಾಯ ದೈವದ ನೇಮ, ಡಿ.20ರಂದು ಶ್ರೀ ಕೈಯೂರು ಧೂಮಾವತಿ ದೈವದ ನೇಮ, ಡಿ.21ರಂದು ಶ್ರೀ ಪಿಲಿಚಾಮುಂಡಿ
ದೈವದ ನೇಮ ನಡೆಯಲಿದೆ. ಡಿ.22ರಂದು ಬೆಳಿಗ್ಗೆ ತುಲಾಬಾರ ಸೇವೆ, ಧ್ವಜಾರೋಹಣ ಹಾಗೂ ಮಧ್ಯಾಹ್ನ 2 ಗಂಟೆಗೆ
ಅನ್ನಸಂತರ್ಪಣೆ ಇದೆ.