ಕೋಟಿ ಚೆನ್ನಯರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ
ಬಂಟ್ಸ್ ನ್ಯೂಸ್, ಮಂಗಳೂರು: ಕೆಲಜನರು ಹರಿಕೃಷ್ಣ ಬಂಟ್ವಾಳ ಬಂಟರ ಜೊತೆಯಲ್ಲಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಬಂಟರ ಕೈಯಲ್ಲಿದ್ದ ಪಡುಮಲೆಯ ಪ್ರಮುಖ ಜಾಗಗಳನ್ನು ಬಂಟರು ಧರ್ಮಾರ್ಥವಾಗಿ ದೈಯಿ ಬೈದೆತಿ ಅವರಿಗಾಗಿ ನೀಡಿದ್ದಾರೆ ಎಂದು ಪಡುಮಲೆ ಕೋಟಿ ಚೆನ್ನಯ ಸಂಚಯನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.
ಅವರು
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಡುಮಲೆಯ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ದಿ ಕುರಿತಂತೆ
ಮಾಹಿತಿ ನೀಡಿದರು. ಕೋಟಿ ಚೆನ್ನಯರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಈಗ ಪಡುಮಲೆಯ
ಅಭಿವೃದ್ದಿಗಾಗಿ ಎಕ್ಕರೆಗಟ್ಟಲೆ ಜಾಗ ನೀಡುತ್ತಿರುವುದು ಬಂಟರು. ಬಾಕಿಮಾರು ಗದ್ದೆಯೂ ಬಂಟರದ್ದೇ,
ಇಂದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿರುವವರು ಬಂಟರು. ವಿನೋದ್ ಆಳ್ವರು ಐತಿಹಾಸಿಕ ಕಾರಣಿಕ
ಪುರುಷರ ಜಾಗ ಅನ್ಯಧರ್ಮಿಯರ ಪಾಲಾಗುತ್ತಿದ್ದ ತಡೆದು ಖರೀದಿಸಿ ಅದನ್ನು ಟ್ರಸ್ಟಿಗೆ ಧರ್ಮಾರ್ಥವಾಗಿ
ನೀಡಲಿದ್ದಾರೆ ಎಂದು ವಿವರಣೆ ನೀಡಿದರು.
ಯಾರೂ ಎಲ್ಲಿಯೂ ಗರಡಿ
ಮಾಡಲಿ ನಮ್ಮ ಅಭ್ಯಂತರವಿಲ್ಲ, ಆದರೆ ಕೋಟಿ ಚೆನ್ನಯಯರ ಇತಿಹಾಸವನ್ನು ತಿರುಚುವ ಕೆಲಸಕ್ಕೆ ನಾವು ಅವಕಾಶ
ನೀಡುವುದಿಲ್ಲ. ಕತ್ತಲೆಯಲ್ಲಿರುವ ಕೋಟಿ ಚೆನ್ನಯರ ತಾಯಿಯ ಜನ್ಮಸ್ಥಾನ ಬೆಳಕಿಗೆ ಬರಬೇಕು. ಅವರ ಸತ್ಯಧರ್ಮದ
ನ್ಯಾಯದ ಸಂಕೇತಗಳು ಲೋಕಕ್ಕೆ ಬೆಳಕಾಗಬೇಕು. ಶಬರಿಮಲೆ, ತಿರುಮಲೆಯಂತೆ ಪಡುಮಲೆಯು ಪ್ರಾಮುಖ್ಯತೆ ಪಡೆದಿದ್ದು
ಅಂತಹ ದೈವಿಕ ಕಂಪನ ಅನುಭವ ಇಲ್ಲಿದೆ ಎಂದರು.
ಪಡುಮೆಲೆಯಲ್ಲಿ ಉಪ್ಪಳದ
ಹರೀಶ್ ಪೊದುವಾಳ್ ಅವರ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಜನ್ಮಸ್ಥಾನ ಮುಟ್ಟಬಾರದು, ತಾಯಿಗುಡಿ,
ಬೆರ್ಮೆರ್, ರಕ್ತೇಶ್ವರಿ ಗುಡಿ ಕಟ್ಟುವಂತೆ ಪ್ರಶ್ನೆಯಲ್ಲಿನ ಆದೇಶದಂತೆ ನಾವು ತಾಯಿ ದೈಯಿ ಬೈದಿತಿ
ಸಮಾಧಿ ಹಾಗೂ ಇನ್ನಿತರ ಅಭಿವೃದ್ದಿ ಕಾರ್ಯವನ್ನು ಮಾಡಿದ್ದು ಎಪ್ರಿಲ್ ತಿಂಗಳ ಅಂತ್ಯಕ್ಕೆ ಪ್ರತಿಷ್ಠಾ
ಕಾರ್ಯಗಳು ನಡೆಯಲಿವೆ. ಪಡುಮಲೆಯಲ್ಲಿ ಜನವರಿ 14ರಂದು ಟ್ರಸ್ಟಿನ ಕಚೇರಿಯು ಆರಂಭವಾಗಲಿರುವುದಾಗಿ ಮಾಹಿತಿ
ನೀಡಿದರು.
ಸುದ್ದಿಗೋಷ್ಠಿಯಲ್ಲಿ
ಪಡುಮಲೆ ಕ್ಷೇತ್ರದ ಆಡಳಿತ ಮೋಕ್ತೆಸರ ವಿನೋದ್ ಆಳ್ವ, ಟ್ರಸ್ಟಿನ ಗೌರವಾಧ್ಯಕ್ಷ ರುಕ್ಮಯ ಪೂಜಾರಿ,
ಪುತ್ತೂರು ತಾಲೂಕಿನ ಪ್ರಮುಖ ವೇದನಾಥ ಸುವರ್ಣ, ಶ್ರೀಧರ ಪಟ್ಲ, ಶೇಖರ ನಾರಾವಿ ಟ್ರಸ್ಟಿನ ಇತರ ಸದಸ್ಯರು
ಇದ್ದರು.