ಬಂಟ್ಸ್ ನ್ಯೂಸ್, ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯಿಕ-ಸಾಂಸ್ಕೃತಿಕ
ಸಂಘಟನೆ ರಂಗಚಾವಡಿ ಮಂಗಳೂರು ವತಿಯಿಂದ ಉರ್ವಸ್ಟೋರ್ ತುಳುಭವನದ ಸಿರಿಚಾವಡಿಯಲ್ಲಿ ಡಿ.23ರ ಬುಧವಾರ
ಸಂಜೆ 4.30 ಗಂಟೆಗೆ ರಂಗಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್’ಸಾರ್ ಅವರು ವಹಿಸಲಿದ್ದಾರೆ. ಬಿಜಿಪಿ
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಕುಮಾರ್ ಗುರ್ಮೆ ಅವರು ಕಾರ್ಯಕ್ರಮ ಉದ್ಠಾಟಿಸಲಿರುವರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸಿನಿಮಾ ನಿರ್ಮಾಪಕ-ನಿರ್ದೇಶಕರಾದ ಡಾ. ಸಂಜೀವ ದಂಡೆಕೇರಿ, ಉದ್ಯಮಿ
ಯಾದವ ಕೋಟ್ಯಾನ್ ಪೆರ್ಮುದೆ, ಸಿನಿಮಾ ನಿರ್ಮಾಪಕ-ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ, ಉದ್ಯಮಿ ರಮಾನಾಥ
ಶೆಟ್ಟಿ ಬೈಕಂಪಾಡಿ, ಎನ್. ಮಾತಾ ಡೆವಲಪರ್ಸ್ ಪ್ರೈ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,
ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಮತ್ತಿತರ
ಪ್ರಮುಖರು ಭಾಗವಹಿಸಲಿದ್ದಾರೆ.
ರಂಗಚಾವಡಿ ಪ್ರಶಸ್ತಿ ಪ್ರದಾನ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯಿಕ-ಸಾಂಸ್ಕೃತಿಕ
ಸಂಘಟನೆ ರಂಗಚಾವಡಿ ಮಂಗಳೂರು ಅವರು ಸಂಗೀತ ನಿರ್ದೇಶಕ ಮುರುಳಿಧರ ಕಾಮತ್ ಅವರಿಗೆ ರಂಗಚಾವಡಿ ಗೌರವ
ಪ್ರಶಸ್ತಿ ನೀಡಿ ಸನ್ಮಾನಿಸಲಿದೆ.
ಈ ಕಾರ್ಯಕ್ರಮಕ್ಕೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್’ಸಾರ್, ರಂಗಚಾವಡಿ ಮಂಗಳೂರು
ಇದರ ಸಂಚಾಲಕರಾದ ಜಗನ್ನಾಥ ಶೆಟ್ಟಿ ಬಾಳ ಹಾಗೂ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ರಾಜೇಶ್ ಜಿ.
ಅವರು ಸರ್ವರಿಗೂ ಆದರದ ಸ್ವಾಗತವನ್ನು ಬಯಸಿದ್ದಾರೆ.