BUNTS NEWS, ಮುಂಬೈ: ನನ್ನ ಅಪ್ಪ ಕೆ.ಡಿ ಶೆಟ್ಟಿ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಅವರು ಮಾಡಿದ ಸೇವೆಯನ್ನು ಸರಕಾರವು ಗುರುತಿಸಿ ಗೌರವಿಸಿದೆ. ಸಮಾಜ ಸೇವೆಯು ಅವರ ರಕ್ತದ ಕಣದಲ್ಲಿದೆ. ನಾವು ಯಾವಾಗಲೂ ಅವರೊಂದಿಗಿರುವೆವು. ಅವರು ಸದಾ ಇನ್ನೊಬ್ಬರ ಕಷ್ಟದ ಬಗ್ಗೆ ಚಿಂತಿಸುವವರು ಎಂದು ಭವಾನಿ ಫೌಂಡೇಶನ್ ಟ್ರಸ್ಟಿ ಸೀಖಾ ಕೆ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಡಿ. 5 ರಂದು ನವಿಮುಂಬಯಿಯ ಸಿಬಿಡಿಯಲಿರುವ ಭವಾನಿ ಪೌಂಡೇಶನ್ ನ ಕಾರ್ಯಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಭವಾನಿ ಪೌಂಡೇಶನ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಡಿ ಶೆಟ್ಟಿ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಫೌಂಡೇಶನ್ ಟ್ರಸ್ಟಿಗಳಾದ ಧರ್ಮಪಾಲ ಯು ದೇವಾಡಿಗ, ದಿನೇಶ್ ಶೆಟ್ಟಿ, ಕರ್ನೂರು ಮೋಹನ್ ರೈ, ಪದಾಧಿಕಾರಿ ರವಿ ಉಚ್ಚಿಲ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಭಿನಂದಿಸಿದರು. ಭವಾನಿ ಪೌಂಡೇಶನ ಟ್ರಷ್ಟಿ ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಧನ್ಯವಾದ ಸಮರ್ಪಿಸಿದರು.