ಮಂಗಳೂರು: ಗುರುಪುರ ಬಂಟರ ಮಾತೃ ಸಂಘ (ರಿ) ಇವರ ನಿವೇಶನ ಖರೀದಿಗಾಗಿ ಆಯೋಜಿಸಿದ ಅದೃಷ್ಟ ಕೂಪನ್ ಬಹುಮಾನದಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ ಅವರಿಗೆ ದ್ವಿತೀಯ ಬಹುಮಾನ ಟಿವಿಎಸ್ ಬೈಕ್ ಲಭಿಸಿದೆ.
ರಾಧಾ ಶೋ ರೂಮ್ ನಲ್ಲಿ ಬೈಕಿನ ಕೀಯನ್ನು ಸಂಸ್ಥೆಯ ಮಾಲಕ ಸಿದ್ದಾರ್ಥ ಶೆಟ್ಟಿ ಅವರು ಚಿತ್ರಾ ಜೆ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಶೆಡ್ಡೆ ಸಂತೋಷ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಮಾಜೀ ಅಧ್ಯಕ್ಷ ಸುದರ್ಶನ್ ಶೆಟ್ಟಿ ಪೆರ್ಮಂಕಿ, ಜಯರಾಮ ಶೆಟ್ಟಿ ಉಳಾಯಿಬೆಟ್ಟು, ರಾಧಾ ಶೋರೂಂ ನ ರಾಜೇಶ್ ಮತ್ತು ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.