ಬೆಂಗಳೂರು: ಕರ್ನಾಟಕ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರನ್ನು, ಆರ್ ಎನ್ ಎಸ್ ವಿದ್ಯಾನಿಕೇತನ-2 ಆಡಳಿತ ಮಂಡಳಿಯ ಚೆಯರ್ ಮೆನ್ ಹಾಗೂ ಎಂಆರ್ ಜಿ ಗ್ರೂಪ್ ನ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅವರು ಭೇಟಿಯಾಗಿ ಜುಲೈ 24ರಂದು ನಡೆಯುವ ಬೆಂಗಳೂರು ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನದ-2 ಶಿಕ್ಷಣ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.


