ಬಂಟ್ವಾಳ: ಸಿದ್ದಕಟ್ಟೆ ವಲಯ ಬಂಟರ ಸಂಘದ ಆಶ್ರಯದಲ್ಲಿ ನಡೆದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಸಮೀಪದ ಕೊನೆರಬೆಟ್ಟುವಿನಲ್ಲಿ ವಲಯದ ಅಧ್ಯಕ್ಷ ಸಂದೇಶ್ ಶೆಟ್ಟಿ ಪೊದುಂಬರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಖ್ಯಾತ ಕಂಬಳ ಕ್ರೀಡಾಪಟು ಹಿರಿಯರದಂಥ ಬೆಳ್ಳಿಪ್ಪಾಡಿ ಸಂಜೀವ ರೈ ಉದ್ಘಾಟನೆ ಮಾಡಿದರು. ಕ್ರೀಡಾಕೂಟಕ್ಕೆ ಪ್ರಗತಿಪರ ಕೃಷಿಕರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ರದಂಥ ಆನಂದ ಶೆಟ್ಟಿ ಚಾಲನೆ ನೀಡಿದರು.
ಸಮಾರಂಭದಲ್ಲಿ ಬಂಟವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಕಾರ್ಯದರ್ಶಿ ಜಗನ್ನಾಥ ಚೌಟ, ಜತೆ ಕಾರ್ಯದರ್ಶಿ ರಂಜನ್ ಶೆಟ್ಟಿ ಅರಳ, ಮಹಿಳಾ ಅಧ್ಯಕ್ಷರು ರಮಾ ಭಂಡಾರಿ, ಮಹಿಳಾ ಜತೆ ಕಾರ್ಯದರ್ಶಿ ಮಂದಾರತಿ ಶೆಟ್ಟಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ನಿಶಾನ್ ಆಳ್ವ ಮತ್ತು ಸಂಘದ ಪ್ರಮುಖರದಂಥ ಸುರೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಶ್ರೀಧರ್ ಶೆಟ್ಟಿ,ಅರುಣಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಗಣೇಶ್ ಶೆಟ್ಟಿ, ವಿವಿಧ ವಲಯದ ಪದಾಧಿಕಾರಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಗಣ್ಯರನ್ನು ಸಿದ್ದಕಟ್ಟೆ ಬಂಟರ ಸಂಘದ ಕಾರ್ಯದರ್ಶಿ ರತೀಶ್ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಶೆಟ್ಟಿ ವಂದಿಸಿದರು.