ಹಿರಿಯ ಯಕ್ಷಗಾನ ಕಲಾವಿದ ಮಜ್ಜಿಗೆಬೈಲು ಆನಂದ ಶೆಟ್ಟಿ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿರಿಯ ಯಕ್ಷಗಾನ ಕಲಾವಿದ ಮಜ್ಜಿಗೆಬೈಲು ಆನಂದ ಶೆಟ್ಟಿ ನಿಧನ

Share This
ಕುಂದಾಪುರ: ಬಡಗುತಿಟ್ಟಿನ ಹಿರಿಯ ವೇಷಧಾರಿಗಳಾದ ಮಜ್ಜಿಗೆಬೈಲು ಆನಂದ ಶೆಟ್ಟಿ (78) ಜು.10ರಂದು ಕುಂದಾಪುರ ತಾಲೂಕಿನ ಯಡಾಡಿಯ ಸ್ವಗೃಹದಲ್ಲಿ ರಾತ್ರಿ ನಿಧನರಾದರು.
ಪರಂಪರೆಯ ಪ್ರಾತಿನಿಧಿಕ ಪುರುಷ ಮತ್ತು ಎರಡನೆ ವೇಷಧಾರಿಯಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪೆರ್ಡೂರು, ಮಾರಣಕಟ್ಟೆ, ಸಾಲಿಗ್ರಾಮ, ಗೂಳಿಗರಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಹೀಗೆ ನಾಲ್ಕು ದಶಕಗಳ ಕಲಾಸೇವೆಗೈದ ಸಜ್ಜನ ಕಲಾವಿದರಾಗಿದ್ದರು.

ಯಕ್ಷಗಾನ ಕಲಾರಂಗ, ಜಾಗತಿಕ ಬಂಟ ಪ್ರತಿಷ್ಠಾನ ಸಹಿತ ಹಲವಾರು ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಪತ್ನಿ ,ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. 

ಬಡಗು ತಿಟ್ಟಿನ ಈ ಪ್ರಾತಿನಿಧಿಕ ಕಲಾವಿದನ ನಿಧನಕ್ಕೆ ಉಡುಪಿಯ ಕಲಾರಂಗ ಮತ್ತು ಯಕ್ಷಾಂಗಣ ಮಂಗಳೂರು ತೀವ್ರ ಸಂತಾಪ ವ್ಯಕ್ತಪಡಿಸಿದೆ.

Pages