ಮೂಲ್ಕಿ: ನೂತನವಾಗಿ ಅಸ್ತಿತ್ವಕ್ಕೆ ತಂದಿರುವ ಮೂಲ್ಕಿ ತಾಲೂಕು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾಗಿ ನಿಶಾಂತ್ ಶೆಟ್ಟಿ ಕಿಲೆಂಜೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಹಿಂದೆ ಮೂಲ್ಕಿ ಮೂಲ್ಕಿ ವಲಯ ಪತ್ರಕರ್ತರ ಸಮೂಹ ಇದ್ದು, ಇದೀಗ ಮೂಲ್ಕಿ ತಾಲೂಕು ಘೋಷಣೆ ಆದ ನಂತರ ಮೂಲ್ಕಿ ತಾಲೂಕು ಪತ್ರಕರ್ತರ ಸಂಘ ಆಗಿ ಆಸ್ತಿತ್ವಕ್ಕೆ ಬಂದಿದೆ. ನಿಶಾಂತ್ ಶೆಟ್ಟಿ ಅವರು ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದು, ಕಳೆದ 12 ವರ್ಷಗಳಿಂದ ವಿವಿದ ಸುದ್ದಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದು ಪ್ರಸ್ತುತ ವಿಜಯವಾಣಿ ಮತ್ತು ನಮ್ಮಕುಡ್ಲ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೆ ಕಟೀಲು ಶಾಲಾ ಹಳೆವಿದ್ಯಾರ್ಥಿ ಸಂಘ, ಸಜ್ಜನ ಬಂಧುಗಳು ಕಿನ್ನಿಗೋಳಿ, ಧೂಮಾವತಿ ಮಿತ್ರ ಮಂಡಳಿ ಕಿಲೆಂಜೂರು, ಬಂಟರ ಸಂಘ ಮೂಲ್ಕಿ ಮತ್ತಿತರ ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ.