ಭವಾನಿ ಫೌಂಡೇಶನ್ ವತಿಯಿಂದ ಅಸಹಾಯಕ ಕುಟುಂಬಗಳಿಗೆ ವಿವಿಧ ರೀತಿಯ ಸಹಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಭವಾನಿ ಫೌಂಡೇಶನ್ ವತಿಯಿಂದ ಅಸಹಾಯಕ ಕುಟುಂಬಗಳಿಗೆ ವಿವಿಧ ರೀತಿಯ ಸಹಾಯ

Share This
ಮುಂಬಯಿ: ಸಾಮಾಜಿಕ ಶೈಕ್ಷಣಿಕ ಸೇವಾ ಕಾರ್ಯಗಳ ಮೂಲಕ ಅಸಕ್ತರ ಕುಟುಂಬಗಳಿಗೆ ಆಶ್ರಯವಾಗುತ್ತಿರುವ ಭವಾನಿ ಫೌಂಡೇಶನ್ ಆರ್ಥಿಕ ಹಿಂದುಳಿದ ಎರಡು ಕುಟುಂಬ ಕುಟುಂಬಗಳಿಗೆ ಸಹಾಯ ನೀಡಿದೆ.
ನವಿಮುಂಬೈಯ ಅತಿ ಕಡು ಬಡತನದ ಅನಿತಾ ಕೈಲಾಸ್ ನರ್ವಡೆ ಹೆಸರಿನ ಮಹಿಳೆ ಸುಮಾರು ಒಂದು ವರ್ಷದ ಹಿಂದೆ ತನ್ನ ಪತಿಯನ್ನು ಕಳಕೊಂಡ ಮಹಿಳೆ ಮನೆ ಕೆಲಸ ಮಾಡಿ ಕೇವಲ ತಿಂಗಳಿಗೆ ಬರುತ್ತಿದ್ದ ಸಂಬಳದಿಂದ ಪರಿವಾರವನ್ನು ಮತ್ತು ಮಕ್ಕಳ ವಿದ್ಯಾಭ್ಯಾಸ ವಿನಿಯೋಗಿಸುತ್ತ ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚಿಗೆ ಬಳಲುತ್ತಿದ್ದು ಆಕೆ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷ ಮೀನಾ ಕೇದಾರ್ ಇವರ ಮುಖಾಂತರ ಮುಂಬೈಯ ಭವಾನಿ ಫೌಂಡೇಶನ್ ಸಂಸ್ಥಾಪಕ ಕೆ. ಡಿ. ಶೆಟ್ಟಿ ಅವರಿಗೆ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಪರಿಶೀಲಿಸಿ ಸಂಸ್ಥೆಯ ಪ್ರಮುಖರು ಅನಿತಾ ಅವರ ಸಮಸ್ಯೆಗೆ ಸ್ಪಂದಿಸಿದರು.

ಅನಿತಾ ಅವರು ಮನೆ ಕೆಲಸ ಮಾಡುತ್ತಿದ್ದು ಅವರಿಗೆ 10 ಮತ್ತು 14 ವರ್ಷ ಪ್ರಾಯದ ಇಬ್ಬರು ಮಕ್ಕಳಿರುವರು. ಈಗಾಗಲೇ ಈ ಅರ್ಜಿಯನ್ನು ಪರಿಶೀಲಿಸಿ ಭವಾನಿ ಫೌಂಡೇಶನ್ ವತಿಯಿಂದ 50,000 ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕೆ ನೀಡಿದ್ದಾರೆ. ಅಲ್ಲದೆ ಪ್ರತಿ ತಿಂಗಳು ಈ ಪರಿವಾರಕ್ಕೆ 5000 ರೂಪಾಯಿಯನ್ನು ನೀಡುವುದಾಗಿ ಭರವಸೆಯನ್ನು ನೀಡಿ ಒಂದು ಹತ್ತು ವರ್ಷದ ಮಗು ವೈದ್ಯನಾಗಬೇಕೆನ್ನುವ ಇಚ್ಛೆಗೆ ಅದರ ಪೂರ್ತಿ ವೆಚ್ಚವನ್ನು ವಹಿಸುವುದಾಗಿ ಬರುವಂತೆ ನೀಡಿದ್ದಾರೆ. ಪ್ರಸ್ತುತ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ನೋಡುವುದಾಗಿ ಫೌಂಡೇಶನ್ ವ್ಯವಸ್ಥೆ ಮಾಡಿದೆ.

ಇದಲ್ಲದೆ ರಾಯಗಡ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಗೆ ನೀರಿನ ಫಿಲ್ಟರ್ ಮತ್ತು ಪ್ರಿಂಟರನ್ನು ಭವಾನಿ ಫೌಂಡೇಶನ್ ವತಿಯಿಂದ ಇತ್ತೀಚೆಗೆ ನೀಡಲಾಯಿತು.

ಭವಾನಿ ಫೌಂಡೇಶನ್ ಮಹಾರಾಷ್ಟ್ರದ ಅಸಕ್ತ ಕುಟುಂಬಕ್ಕೆ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಎಂಬಲ್ಲಿ ಜಯಂತಿ ಸತೀಶ್ ಪೂಜಾರಿ ಇವರು ಸುಮಾರು ಎರಡು ವರ್ಷಗಳ ಹಿಂದೆ ತನ್ನ ಪತಿಯನ್ನು ಕಳಕೊಂಡಿದ್ದು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸಲು ಕಷ್ಟವಾಗಿದ್ದು ಸ್ವಂತ ಮನೆ ಇಲ್ಲದ ಕಾರಣ ಇವರಿಗೆ ಮನೆ ಕಟ್ಟಲು ಭವಾನಿ ಫೌಂಡೇಶನ್ ಮುಂಬಯಿ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು.  

ಭವಾನಿ ಫೌಂಡೇಶನ್ ಇದೀಗಾಗಲೇ ಮುಂಬಯಿ ಮಾತ್ರವಲ್ಲದೆ ದೇಶದ ಇತರೆಡೆ ಹಲವಾರು ಅಸಹಾಯಕರಿಗೆ ಸಹಾಯ ಮಾಡಿದ್ದು ಫೌಂಡೇಶನ್ನ ಇಂತಹ ಕಾರ್ಯಕ್ಕೆ ಅದರ ಎಲ್ಲ ಸದಸ್ಯರಿಗೂ ಅದರ ಮುಖ್ಯಸ್ಥರಾದರಿಗೆ ಕುಸುಮೋದರ ಡಿ. ಶೆಟ್ಟಿ ಅವರಿಗೂ ಕೃತಜ್ಞತೆ.

Pages