ಮುಂಬಯಿ: ಬಂಟರ ಸಂಘ ಮುಂಬಯಿ ಸಂಚಾಲಕತ್ವದಲ್ಲಿರುವ ಮಾತೃಭೂಮಿ ಕೋ. ಆಪರೇಟಿವ್ ಸೊಸೈಟಿ ಇದರ ನೂತನ ಕಾರ್ಯಾಧ್ಯಕ್ಷರಾಗಿ ಮುಂಬಯಿ ಹೊಟೇಲು ಉದ್ಯಮಿ, ಸಮಾಜ ಸೇವಕ ಉಳ್ತೂರು ಮೋಹನ್‌ದಾಸ್ ಶೆಟ್ಟಿ ಅಧಿಕಾರ ಸ್ವೀಕರಿಸಿಕೊಂಡರು.


ಬಂಟರ ಭವನದ ಏನಕ್ಸ್ ಕಟ್ಟಡದ ಸಭಾಗೃಹದಲ್ಲಿ ಜು. 11ರಂದು ಸಂಜೆ ನೂತನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ.ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹೇರಂಬ ಇಂಡಸ್ಟ್ರೀಸ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಉಪಸ್ಥಿತಿಯಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ನಿರ್ಗಮನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ನೂತನ ಅಧ್ಯಕ್ಷ ಉಳ್ಕೊರ್ ಮೋಹನ್‌ದಾಸ್ ಶೆಟ್ಟಿ, ಅಧಿಕಾರ ಹಸ್ತಾಂತರಿಸಿದರು.
ಮೂಲತ ಉಳ್ತೂರು ಮೋಹನದಾಸ್ ಶೆಟ್ಟಿ ಶೈಕ್ಷಣಿಕ ಚಿಂತಕರಾಗಿದ್ದು ಮುಂಬಯಿಯ ಪ್ರತಿಷ್ಠಿತ ಬಂಟರ ಸಂಘದಲ್ಲಿ ಕಳೆದ 18 ವರ್ಷಗಳಿಂದ ವಿವಿಧ ಹುದ್ದೆಗಳನ್ನಲಂಕರಿಸಿ, ಬಂಟರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಮಾತೃಭೂಮಿ ಕೋ. ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಉಪಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪ್ರಸ್ತುತ ಬಂಟರ ಸಂಘದ ಉಪಾಧ್ಯಕ್ಷರಾಗಿಯೂ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಉಳ್ಳೂರು ಕಟ್ಟೆ ಮನೆ ದಿ. ದಾರಪ್ಪ ಶೆಟ್ಟಿ, ಮತ್ತು ಭಾಗೀರತಿ ಶೆಟ್ಟಿ ದಂಪತಿಯ ಪುತ್ರರಾದ ಮೋಹನದಾಸ್ ಶೆಟ್ಟಿಯವರು ಪತ್ನಿ ಜಯಶ್ರೀ ಮೋಹನದಾಸ್ ಶೆಟ್ಟಿ ಸಾಂತೂರು ಹಾಗೂ ಎರಡು ಗಂಡು ಮಕ್ಕಳು ಸುಶಾನ್ ಮತ್ತು ಸಿಎ ಸಚಿನ್ ಶೆಟ್ಟಿ ಇವರೊಂದಿಗೆ ಮುಲುಂಡ್‌ನಲ್ಲಿ ವಾಸ್ತವದಲ್ಲಿದ್ದಾರೆ.