ಚೇಸ್ ಕನ್ನಡ ಚಿತ್ರ ಪ್ರೀಮಿಯರ್ ಶೋ ಉದ್ಘಾಟನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಚೇಸ್ ಕನ್ನಡ ಚಿತ್ರ ಪ್ರೀಮಿಯರ್ ಶೋ ಉದ್ಘಾಟನೆ

Share This
ಮಂಗಳೂರು: ಸಿಂಪ್ಲಿ ಫನ್ ಮೀಡಿಯಾ ನೆಟ್ ವಕ್೯ ಪ್ರೈ. ಲಿಮಿಟೆಡ್ ಬ್ಯಾನರ್'ನಲ್ಲಿ ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ ಚೇಸ್ ಕನ್ನಡ ಚಿತ್ರ ಪ್ರೀಮಿಯರ್ ಶೋ ಉದ್ಘಾಟನಾ ಸಮಾರಂಭ ನಗರದ ಭಾರತ್ ಮಾಲ್'ನಲ್ಲಿರುವ ಬಿಗ್ ಸಿನೆಮಾಸ್ ನಲ್ಲಿ ಜರುಗಿತು.
ಬಳಿಕ ಸಮಾರಂಭವನ್ನು ಶ್ರೀ ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ. ಪುರಾಣಿಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳನ್ನು ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸ ಬೇಕು. ಮನೋಹರ್ ಸುವರ್ಣ ಮತ್ತು ಅವರ ತಂಡ ಒಂದು ಒಳ್ಳೆಯ ಸದಭಿರುಚಿಯ ಸಿನಿಮಾ ತಯಾರಿಸಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ತುಳು ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿದಂತೆ ಸಸ್ಪೆನ್ಸ್, ಥ್ರಿಲ್ಲರ್ ಇರುವ "ಚೇಸ್" ಸಿನಿಮಾವನ್ನೂ ನೋಡಿ, ಸಿನಿಮಾ ಎಲ್ಲಾ ಕಡೆ ಭರ್ಜರಿ ಯಶಸ್ಸು ಕಾಣಲಿ. ಕನ್ನಡ ಚಿತ್ರರಂಗದಲ್ಲಿ ಇಂತಹ ವಿಭಿನ್ನ ಪ್ರಯತ್ನಗಳನ್ನು ನಾವು ಪ್ರೋತ್ಸಾಹಿಸ ಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, ವಿಲೋಕ್ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಂಪೂರ್ಣ ಥ್ರಿಲ್ಲರ್ ಸಸ್ಪೆನ್ಸ್ ಕಥಾಹಂದರವಿರುವ ಚಿತ್ರ "ಚೇಸ್" ಬಿಡುಗಡೆಯಾಗುತ್ತಿದೆ. ಇದು ನಮ್ಮವರೇ ಮಾಡಿರುವ ಹೆಮ್ಮೆಯ ಚಿತ್ರ. ಕನ್ನಡಿಗರು, ತುಳುವರು ಎಂಬ ಭೇದವಿಲ್ಲದೆ ಚಿತ್ರವನ್ನು ವೀಕ್ಷಿಸಿ ಗೆಲ್ಲಿಸಿ. ಇಂತಹ ಸಧಭಿರುಚಿಯ ಚಿತ್ರಗಳು ಇನ್ನಷ್ಟು ಬರಲಿ ಎಂದು ಅವರು ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜೀ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ವಿಶ್ವವಿದ್ಯಾನಿಲಯದ ಪಿ.ಎಲ್. ಧರ್ಮ, ಶರಣ್ ಪಂಪ್ ವೆಲ್, ಜಗದೀಶ ಶೇಣವ, ಸತೀಶ್ ಕುಂಪಲ, ಕಾರ್ಪೋರೇಟರ್ ಸುಧೀರ್ ಶೆಟ್ಟಿ, ದಯಾನಂದ ಕತ್ತಲ್ ಸಾರ್, ದೇವದಾಸ್ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ, ಶರ್ಮಿಳಾ ಕಾಪಿಕಾಡ್, ಭೋಜರಾಜ ವಾಮಂಜೂರು, ಪುರುಷೋತ್ತಮ‌ ಕೊಟ್ಟಾರಿ, ಗೋಪಾಲ ಕುತ್ತಾರ್, ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್, ನಿರ್ಮಾಪಕ ಮನೋಹರ ಸುವರ್ಣ, ಸಹನಿರ್ಮಾಪಕರಾದ ಪ್ರಶಾಂತ್ ಶೆಟ್ಟಿ, ಪ್ರದೀಪ್ ಶೆಟ್ಟಿ, ನಿರ್ದೇಶಕ ವಿಲೋಕ್ ಶೆಟ್ಟಿ, ರಾಧಿಕಾ ನಾರಾಯಣ್, ಅವಿನಾಶ್, ಶ್ವೇತಾ ಸಂಜೀವುಲ್ ಮೊ,ದಲಾದವರು ಉಪಸ್ಥಿತರಿದ್ದರು. ಮಧುರಾಜ್ ಕಾರ್ಯಕ್ರಮ‌ ನಿರ್ವಹಿಸಿದರು.

ನಾಯಕ ಮತ್ತು ನಾಯಕಿಯಿಂದ ಮಾತ್ರ ಸಿನಿಮಾ ನಡೆಯುವುದಿಲ್ಲ. ಪ್ರತಿಯೊಂದು ಪಾತ್ರಗಳು ಕಥೆಗೆ ಬಹಳ ಮುಖ್ಯ. ಚೇಜ್ ನಂತಹ ಕಂಟೆಂಟ್ ಇರುವ ಸಿನಿಮಾದಲ್ಲಿ ಹಲವು ಪಾತ್ರಗಳು ಹೇಗೆ ಪ್ರಮುಖವಾಗುತ್ತದೆ ಎಂಬುದು ಈ ಸಿನಿಮಾದಲ್ಲಿ ತಿಳಿಯುತ್ತದೆ ಎಂದು ಸಿನಿಮಾ ನಿರ್ದೇಶಕ ವಿಲೋಕ್ ಶೆಟ್ಟಿ ತಿಳಿಸಿದರು.

ಮ್ಯಾಕ್ಸ್ ಪಾತ್ರದಲ್ಲಿ ಸಾಕು ನಾಯಿ: ಇತ್ತೀಚಿನ ದಿನಗಳಲ್ಲಿ ಸಾಕು ನಾಯಿಗಳು ಸಿನಿಮಾದ ಪ್ರಮುಖ ಭಾಗವಾಗುತ್ತಿದೆ. ಈಗ ಚೇಸ್ ಸಿನಿಮಾದಲ್ಲಿಯೂ ಸಹ ಮ್ಯಾಕ್ಸ್ ಎಂಬ ನಾಯಿ ನಟಿಸಿದೆ. ಇದನ್ನು ಭಾರತದ ಏಕೈಕ ಡಾಗ್ ಸೈಕಾಲಜಿಸ್ಟ್ ಅಮೃತ್ ಶ್ರೀಧರ್ ಹಿರಿಣ್ಣಯ್ಯ ತರಬೇತುಗೊಳಿಸಿದ್ದಾರೆ. ಮ್ಯಾಕ್ಸ್ ಪಾತ್ರ ಕೂಡಾ ಚೇಸ್ ನಲ್ಲಿ ಪ್ರಮುಖವಾಗಿದೆ.

ಕಥಾಸಾರಾಂಶ: ಚಿತ್ರದ ಪ್ರಮುಖ ಪಾತ್ರಗಳು ಒಂದು ರಾತ್ರಿ ಎಲ್ಲೆಲ್ಲೋ ಇದ್ದು ಅನಿರೀಕ್ಷಿತವಾಗಿ ನಡೆಯುವ ಘಟನೆಗಳಿಂದ ಒಬ್ಬರನ್ನೊಬ್ಬರು ಭೇಟಿಯಾಗಬೇಕಾಗಿ ಬಂದಾಗ ಏನಾಗುತ್ತದೆ? ಆ ಘಟನೆಗಳೇನು? ಈ ಪಾತ್ರಗಳು ಒಂದು ಕೇಸನ್ನ ಅದಕ್ಕೆ ಕನೆಕ್ಟ್ ಆಗಿರೋ ಸುಳಿವುಗಳನ್ನ ಚೇಸ್ ಮಾಡ್ತಾ ಹೋದಾಗ ಏನೆಲ್ಲಾ ಘಟನೆಗಳು ನಡೆಯುತ್ತೆ..? ಪ್ರತಿಯೊಂದು ಕ್ರೈಂ ನಡೆದಾಗ ಅದರ‌ ಹಿಂದಿರೋ ವ್ಯಕ್ತಿಗಳನ್ನ ಚೇಸ್ ಮಾಡಿದಾಗ ಅದೆಷ್ಟು ಮಿಸ್ಟರಿಗಳು ಹೊರಗೆ ಬರುತ್ತೆ. ಅದು ಕಾಮನ್ ವ್ಯಕ್ತಿಗಳ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಅನ್ನೋದನ್ನ ಕಮರ್ಷಿಯಲ್ ವೇನಲ್ಲಿ ತೋರಿಸೋ ಪ್ರಯತ್ನ ಚೇಸ್ ಸಿನೆಮಾ ಆಗಿದೆ.

Pages