ಮುಂಬೈ ತುಳು-ಕನ್ನಡಿಗರ ಭಾಷೆ, ಸಂಸ್ಕೃತಿಯ ಅಭಿಮಾನವನ್ನು ಮೆಚ್ಚಿಕೊಂಡ ಸಂಸದ ಪ್ರತಾಪ್ ಸಿಂಹ
ಮುಂಬೈ: ಮೈಸೂರಿನ ಸಂಸದ ಪ್ರತಾಪ್ ಸಿಂಹ ಖಾಸಗಿ ಕಾರ್ಯಕ್ರಮಕ್ಕಾಗಿ ಜು.1ರಂದು ಮುಂಬೈ ನಗರಕ್ಕೆ ಆಗಮಿಸಿದ್ದರು. ಅವರನ್ನು ಹಿಂದೂ ಸಂಘಟಕ ಮಹೇಶ್ ಶೆಟ್ಟಿ ತೆಳ್ಳಾರು ಮತ್ತು ಬಿಜೆಪಿಯ ಮೀರಾ ಭಯಂದರ್ ಜಿಲ್ಲಾ ಉಪಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಯಗುತ್ತು ದಹಿಸರ್ ಪೂರ್ವದ ಮಹಾರಾಜ ಹೋಟೆಲ್ನಲ್ಲಿ ಗೌರವಿಸಿದರು.
ನಗರಕ್ಕೆ ಆಗಮಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹರವರು ಭಾರತ ಸರಕಾರದ ಲೋಕಸಭೆಯ ಯೋಜನಾ ವೆಚ್ಚ ಸಮಿತಿಯ ಅಧ್ಯಯನ ಶಿಬಿರವು ಮಹಾರಾಷ್ಟ್ರ ಸರಕಾರ, ಮಧ್ಯ ರೈಲ್ವೆ, ಪಶ್ಚಿಮ ರೈಲ್ವೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಸಹಭಾಗಿತ್ವದಲ್ಲಿ ಮುಂಬೈಯ ಬಾಂದ್ರಾ ತಾಜ್ ಲ್ಯಾಂಡ್ಸ್ ನಲ್ಲಿ ಜರಗಿತು. ಈ ಶಿಭಿರದಲ್ಲಿ ಲೋಕಸಭೆಯ ಯೋಜನಾ ವೆಚ್ಚ ಸಮಿತಿಯ ಸದಸ್ಯರು, ಮೈಸೂರ್ ಕೊಡಗು ಸಂಸದರಾದಂತಹ ಶ್ರೀ ಪ್ರತಾಪ್ ಸಿಂಹ ಭಾಗವಹಿಸಿದರು.
ಬಳಿಕ ಮಹೇಶ್ ಶೆಟ್ಟಿ ಅವರನ್ನು ಭೇಟಿ ಆಗುವುದಕ್ಕಾಗಿ ಬಾಂದ್ರದಿಂದ ರೈಲಿನಲ್ಲಿ ಮೀರಾ ಭಯಂದರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಚ್ಚಿದಾನಂದ್ ಶೆಟ್ಟಿಯವರೊಂದಿಗೆ ಮುಂಬೈ ರೈಲ್ವೆಯ ಪ್ರಯಾಣಿಕರ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಸಾಮಾನ್ಯ ಪ್ರಯಾಣಿಕನಂತೆ ಸತಃ ಪಶ್ಚಿಮ ರೈಲ್ವೆಯಲ್ಲಿ ಪ್ರವಾಸಗೈದು ಪ್ರಯಾಣಿಕರ ಕಷ್ಟಗಳನ್ನು ಅರಿತುಕೊಂಡರು.
ಸಂಸದರು ದಹಿಸರ್ ರ್ಪೂರ್ವದಲ್ಲಿರುವ ಹೋಟೆಲ್ ಮಹಾರಾಜ ಭೇಟಿ ನೀಡಿ ಕಾರ್ಕಳ ಬಿಜೆಪಿ ಚುನಾವಣಾ ಸಮಿತಿಯ ಅಧ್ಯಕ್ಷರು, ಮುಂಬೈಯ ಪ್ರಸಿದ್ಧ ಹೋಟೆಲ್ ಉದ್ಯಮಿ ಹಿಂದು ಸಂಘಟಕ ಮಹೇಶ್ ಶೆಟ್ಟಿ ತೆಳ್ಳಾರುಯವರನ್ನು ಭೇಟಿಯಾದರು. ಸಂಸದರನ್ನು ಮಹೇಶ್ ಶೆಟ್ಟಿಯವರು ಆತ್ಮೀಯವಾಗಿ ಬರಮಾಡಿಕೊಂಡು ಶಾಲು ಮತ್ತು ಪುಷ್ಪಗಳಿಂದ ಅಭಿನಂದಿಸಿದರು.
ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿರುವ ಮಹೇಶ್ ಶೆಟ್ಟಿ ಯವರ ಕಾರ್ಯ ವೈಖರಿಯನ್ನು ಪ್ರಶಂಸಿಸಿದ ಮುಂಬೈ ಮಹಾನಗರದಲ್ಲಿ ತುಳು ಕನ್ನಡಿಗರ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನವನ್ನು ಮೆಚ್ಚಿಕೊಂಡರು.
ಮಹೇಶ್ ಶೆಟ್ಟಿ ತೆಳ್ಳಾರುರವರು ಮುಂಬೈಯಲ್ಲಿ ಕೋವಿಡ್ ಸಮಯದಿಂದ ಹೋಟೆಲ್ ಉದ್ಯಮಿಗಳು ಅನುಭವಿಸುತ್ತಿರುವ ಕೆಲವೊಂದು ಸಮಸ್ಯೆಗಳನ್ನು ಸಂಸದರಿಗೆ ಮನದಟ್ಟು ಮಾಡಿ ಕೇಂದ್ರ ಸರಕಾರದಿಂದ ಪರಿಹಾರ ದೊರಕಿಸಿಕೊಡಲು ವಿನಂತಿಸಿದರು.