ಮಂಗಳೂರು: 2022ರ ಫೇಮಿನಾ ಮಿಸ್ ಇಂಡಿಯಾ ಕಿರೀಟವನ್ನು ಉಡುಪಿ ಮೂಲದ ಚೆಲುವೆ 21 ವಯಸ್ಸಿನ ಸಿನಿ ಶೆಟ್ಟಿ ಪಡೆದಿದ್ದಾರೆ.
ಜು.3ರ ಭಾನುವಾರ ಮುಂಬೈನ ಜಿಯೋ ಕನ್ವೆಕ್ಷನ್ ಸೆಂಟರ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ 'ಮಿಸ್ ಇಂಡಿಯಾ'ವಾಗಿ ಆಯ್ಕೆಯಾದರು. 2020ರ 'ಮಿಸ್ ಇಂಡಿಯಾ'ವಾಗಿ ಆಯ್ಕೆಯಾಗಿದ್ದ ಮಾನಸ ವಾರಣಾಸಿ ಅವರು ಸಿನಿ ಶೆಟ್ಟಿಗೆ 'ಮಿಸ್ ಇಂಡಿಯಾ 2022'ರ ಕಿರೀಟ ತೊಡಿಸಿದರು.
ಸಿನಿ ಶೆಟ್ಟಿ ಅವರು ಅಕೌಂಟಿಂಗ್ ಹಾಗೂ ಫೈನಾನ್ಸ್'ನಲ್ಲಿ ಮಾಸ್ಟರ್ ಪದವೀಧರರು. ಪ್ರಸ್ತುತ ಸಿಎಂ ಅಭ್ಯಾಸವನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿ ಶೆಟ್ಟಿ ಅವರು 'ವಿಶ್ವ ಸುಂದರಿ' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.