ಪಾಪ್ಯುಲರ್ ಜಗದೀಶ ಸಿ. ಶೆಟ್ಟಿ ಸಂಸ್ಮರಣೆ: ಅಶಕ್ತರಿಗೆ 10 ಲಕ್ಷ ರೂ. ನೆರವು, ಪದ್ಮಶ್ರೀ ಹಾಜಬ್ಬರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಾಪ್ಯುಲರ್ ಜಗದೀಶ ಸಿ. ಶೆಟ್ಟಿ ಸಂಸ್ಮರಣೆ: ಅಶಕ್ತರಿಗೆ 10 ಲಕ್ಷ ರೂ. ನೆರವು, ಪದ್ಮಶ್ರೀ ಹಾಜಬ್ಬರಿಗೆ ಸನ್ಮಾನ

Share This
ಬಜಪೆ: ಸುಸಂಸ್ಕೃತ ವಿದ್ಯಾಭ್ಯಾಸ ನೀಡುವ ಸಲುವಾಗಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಿದ್ಧು ಮಾತ್ರವಲ್ಲದೆ ಸಮಾಜದಲ್ಲಿನ ಅಶಕ್ತರ ಪಾಲಿಗೆ ನೆರವು ನೀಡಿ ಆಧರಿಸಿ ಖುಷಿ ಕಂಡ ಅಪೂರ್ವ ವ್ಯಕ್ತಿತ್ವದ ಪಾಪ್ಯುಲರ್ ಜಗದೀಶ ಸಿ. ಶೆಟ್ಟಿ ಅವರ ಬದುಕಿನ ನಡೆ ಸದಾ ಅನುಕರಣೀಯ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ಬಜಪೆಯ ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪಾಪ್ಯುಲರ್ ಸಿ. ಜಗದೀಶ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಜರಗಿದ ಪಾಪ್ಯುಲರ್ ಜಗದೀಶ ಸಿ. ಶೆಟ್ಟಿ ಅವರ ಐದನೇಯ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದ ಪ್ರಧಾನ ಅಭ್ಯಾಗತರಾಗಿ ಮಾತನಾಡಿದರು.

10 ಲಕ್ಷ ರೂ. ಅಶಕ್ತರಿಗೆ ನೆರವು, ಹಾಜಬ್ಬರಿಗೆ ಸನ್ಮಾನ: ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಟ್ರಸ್ಟ್ ವತಿಯಿಂದ 40 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಅಶಕ್ತ ವಿಕಲ ಚೇತನ ಮಕ್ಕಳ ಶೈಕ್ಷಣಿಕ ನೆರವಿಗೆ ಹಾಗೂ 40 ಮಂದಿಸಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆಗೆ ಒಟ್ಟು 10 ಲಕ್ಷ ರೂ.ಗಳ ಸಹಾಯವನ್ನು ವಿತರಿಸಲಾಯಿತು. ಇದೇ ವೇಳೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಅವರು ಶುಭಾಶಂಸನೆಗೈದು ಮಾತನಾಡಿ, ಕಟೀಲು ದೇವಿಯ ಅನನ್ಯ ಭಕ್ತರಾಗಿದ್ದ ಜಗದೀಶ ಸಿ. ಶೆಟ್ಟಿ ಅವರು ಶಿಕ್ಷಣ ಕ್ರಾಂತಿಯ ಕನಸು ಕಂಡವರು ಎಂದರು.

ಮುಖ್ಯ ಅತಿಥಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ನಮ್ಮ ಬದುಕಿನಲ್ಲಿ ನೆನಪಿನಲ್ಲಿರುವುದು ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ. ಅದೇ ರೀತಿ ಮರವೂರು ಜಗದೀಶ ಶೆಟ್ಟಿ ಅವರು ಸಮಾಜ ನೆನಪು ಇಡುವ ಕೆಲಸ ಕಾರ್ಯ ಮಾಡಿ ಹೋಗಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯನ್ನು ಕಟ್ಟಿ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಆಶಯ ಅವರಲ್ಲಿತ್ತು. ಅದು ನೆರವೇರಿದ್ದು ಜಗದೀಶ ಶೆಟ್ಟಿಯವರ ಹೆಸರು ಜನಮಾನಸದಲ್ಲಿದೆ ಎಂದರು.

ಬಂಟ್ಸ್ ಪಾಪ್ಯುಲರ್ ಎಜುಕೇಶನ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಜಗದೀಶ ಸಿ. ಶೆಟ್ಟಿ ಅವರ ಪತ್ನಿ ಶಶಿರೇಖಾ ಜೆ. ಶೆಟ್ಟಿ ಅವರು ವೇದಿಕೆಯಲ್ಲಿದ್ದರು.
ಬಜಪೆ ಗ್ರಾಮ ಪಂಚಾಯತ್ ನ ಮಾಜೀ ಸದಸ್ಯ ಸಿರಾಜ್ ಬಜಪೆ ಮಾತನಾಡಿ, ಮರವೂರು ಜಗದೀಶ ಶೆಟ್ಟಿ ಅವರು ಬಜಪೆ ಮಳವೂರು ಪರಿಸರದಲ್ಲಿ ಸೌಹಾರ್ದ ಸಮಿತಿ ರಚಿಸಿ ಜಾತಿ ಜಾತಿಗಳ ಮಧ್ಯೆ ಸೌಹಾರ್ದ ಕಲ್ಪಿಸಿದ್ದರು. ಯಾವುದೇ ಸಂಘರ್ಷಗಳು ಇದ್ದರೂ ಠಾಣೆಯ ಮೆಟ್ಟಲೇರದೆ ಪಂಚಾತಿಕೆಯ ಮೂಲಕ ರಾಜಿ ಮಾಡಿಸುತ್ತಿದ್ದರು. ಶೆಟ್ಟಿ ಎಂದರೆ ಧೈರ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡಿದವರು ಜಗದೀಶ ಶೆಟ್ಟಿಯವರು. ಪ್ರೀತಿ, ಕರುಣೆ, ಮನುಷ್ಯತ್ವ ಏನು ಎಂಬುದನ್ನು ತಿಳಿಸಿದವರು. ಅವರ ನೆನಪು ಯಾವಗಲೂ ಶಾಶ್ವತ ಎಂದರು.

ಟ್ರಸ್ಟ್ ಸದಸ್ಯರಾದ ರಾಮಚಂದ್ರ ಶೆಟ್ಟಿ, ಸಂದೀಪ್ ರೈ, ಕೊಶಾಧಿಕಾರಿ ರತ್ನಾಕರ ಶೆಟ್ಟಿ ಎಕ್ಕಾರ್, ಕಾರ್ಯದರ್ಶಿ ಗೋಪಿನಾಥ ಹೆಗ್ಡೆ ಉಪಸ್ಥಿತರಿದ್ಧರು. ಸಹನಾ ಎಂ ಪಹಲ್ಲವಿ ಸ್ವಾಗತಿಸಿದರು. ಸಹಶಿಕ್ಷಕಿ ನಿರ್ಮಲ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

Pages