ಬಜ್ಪೆ ಬಂಟರ ಸಂಘದ ಅಧ್ಯಕ್ಷರಾಗಿ ಮುಂಬೈ ಉದ್ಯಮಿ ಬಾಬು ಶೆಟ್ಟಿ ಪೆರಾರ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಜ್ಪೆ ಬಂಟರ ಸಂಘದ ಅಧ್ಯಕ್ಷರಾಗಿ ಮುಂಬೈ ಉದ್ಯಮಿ ಬಾಬು ಶೆಟ್ಟಿ ಪೆರಾರ ಆಯ್ಕೆ

Share This
ಮಂಗಳೂರು : ಬಜ್ಪೆ ಬಂಟರ ಸಂಘದ ಅಧ್ಯಕ್ಷರಾಗಿ ಮುಂಬೈ ಮಲಾಡ್ ಪೂರ್ವದ ಪ್ರಸಾದ್ ಹೋಟೆಲಿನ ಮಾಲಕ, ಸಮಾಜ ಸೇವಕ ಬಾಬು ಶೆಟ್ಟಿ ಪೆರಾರ ಅವರು ಮೇ.1 ರಂದು ಬಜಪೆ ಬಿ. ಸಂಜೀವ ಶೆಟ್ಟಿ ಸಭಾಗೃಹದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರವನ್ನು ಸ್ವೀಕರಿಸಿದರು.
ಪದಗ್ರಹಣ ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬೈ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಾ| ಶಂಕರ್ ಬಿ. ಶೆಟ್ಟಿ, ಅಧ್ಯಕ್ಷರು, ಫೆಡರೇಶನ್ ಹೋಟೆಲ್ & ರೆಸ್ಟೋರೆಂಟ್ ಅಸೋಶಿಯೇಶನ್, ಮಹಾರಾಷ್ಟ್ರ, ಜಗದೀಶ್ ಶೆಟ್ಟಿ, ವಕೀಲರು, ಅಧ್ಯಕ್ಷರು ಕನ್ನಡ ಸಂಘ, ಮಲಾಡ್, ಮುಂಬಯಿ, ಸಿ.ಎ. ಸುರೇಂದ್ರ ಶೆಟ್ಟಿ, ಉಪಾಧ್ಯಕ್ಷರು, ಬಾಂಬೆ ಬಂಟ್ಸ್ ಆಸೋಸಿಯೇಷನ್, ಮುಂಬಯಿ, ಮಾತೃಭೂಮಿ ಕಾಪರ್ಟಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ರತ್ನಾಕರ ಶೆಟ್ಟಿ, ಅಧ್ಯಕ್ಷರು, ಎಕ್ಕಾರು ಬಂಟರ ಸಂಘ, ಸುಧಾಕರ ಪೂಂಜ, ಅಧ್ಯಕ್ಷರು, ಸುರತ್ಕಲ್ ಬಂಟರ ಸಂಘ ಸಂತೋಷ್ ಶೇಖರ್ ಶೆಟ್ಟಿ ಕುತ್ತೆತ್ತೂರು, ಆನಂದ ಶೆಟ್ಟಿ, ಅಡ್ಯಾರು, ಅಧ್ಯಕ್ಷರು ಕಾವೂರು ಬಂಟರ ಸಂಘ, ಸಂತೋಷ್ ಶೆಟ್ಟಿ, ಅಧ್ಯಕ್ಷರು, ಗುರುಪುರ ಬಂಟರ ಮಾತೃ ಸಂಘ ಹಾಗೂ ಉಲ್ಲಾಸ್ ಆರ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ರಾಜಕುಮಾರ್ ಶೆಟ್ಟಿ, ರಾಜೀವ ಆಳ್ವ ಅದ್ಯಪಾಡಿ, ಪ್ರವೀಣ್ ಶೆಟ್ಟಿ ಮುರುಳಿಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷರಾಗಿ ಶ್ರೀಮತಿ ಅಕ್ಷಯ ಆ‌, ಶೆಟ್ಟಿ, ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮವನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಮತ್ತು ಕೋಶಾಧಿಕಾರಿ ಸುರೇಶ್ ಶೆಟ್ಟಿ ನಿರೂಪಿಸಿದರು.

ಬಾಬು ಎಸ್ ಶೆಟ್ಟಿ ಪೆರಾರ : ಮಂಗಳೂರಿನ ಬಜ್ಪೆ ಗ್ರಾಮದ ಕೃಷಿಕ ಕುಟುಂಬದ ಬಾಬು ಶೆಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಉದ್ಯೋಗವನ್ನು ಅರಸಿ ಮುಂಬೈಗೆ ತೆರಳಿ ಉದ್ಯೋಗದೊಂದಿಗೆ ರಾತ್ರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು. ಹೋಟೆಲ್ ಕಾರ್ಮಿಕನಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಹೋಟೆಲ್ ಉದ್ಯಮವನ್ನು ಅರಿತು ಮಲಾಡ್ ಪೂರ್ವದಲ್ಲಿ ಪ್ರಸಾದ್ ಹೋಟೆಲನ್ನು ಪ್ರಾರಂಭಿಸಿದರು. 

ಹೋಟೆಲ್ ವ್ಯವಹಾರದಲ್ಲಿ ಯಶಸ್ಸನ್ನು ಪಡೆದು ಮುಂಬೈ ಉಪನಗರಗಳಲ್ಲಿ ಹೋಟೆಲ್ಗಳನ್ನು ಪ್ರಾರಂಭಿಸಿದರು. ಅಲ್ಲದೆ ತಾನು ಹುಟ್ಟಿದ ಸಮಾಜದ ಋಣಸಂದಾಯಕ್ಕಾಗಿ ಮುಂಬೈಯ ಬಂಟರ ಸಂಘದಲ್ಲಿ ಸಕ್ರಿಯರಾಗಿ ತೊಡಗಿಕೊಂಡರು. ಅದರೊಂದಿಗೆ ಹೋಟೆಲ್ ಅಸೋಸಿಯೇಷನ್ ಆಹಾರನ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.

ಪ್ರಸ್ತುತ ಫೆಡರೇಶನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಶಿಯೇಶನ್, ಮಹಾರಾಷ್ಟ್ರ ಜೊತೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲಾಡ್ ಕನ್ನಡ ಸಂಘದ ಮಹಾಪೋಷಕರಾಗಿ ಕನ್ನಡದ ಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನ ಕಲೆಗೆ ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಪತ್ನಿ ಇಂದಿರಾ ಶೆಟ್ಟಿ ಓರ್ವ ಪುತ್ರ ಓರ್ವ ಪುತ್ರಿ ಚಿಕ್ಕ ಸಂಸಾರ. ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು ಸದ್ದಿಲ್ಲದೆ ಮಾಡುತ್ತಿದ್ದ ಬಾಬು ಶೆಟ್ಟಿ ಅವರು. ಬಜ್ಪೆ ಪೆರಾರದ ಬಲಾಂಡಿ ದೈವಸ್ಥಾನದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

Pages