ಬೇಸಿಗೆ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮೈಗೂಡಲಿ : ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೇಸಿಗೆ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮೈಗೂಡಲಿ : ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ

Share This
ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 14 ದಿನದ ಶಕ್ತಿ ಕ್ಯಾನ್ ಕ್ರಿಯೇಟ್ ಬೇಸಿಗೆ ಶಿಬಿರವನ್ನು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಬರ್ಕೆ ಠಾಣಿ ವೃತ್ತ ನಿರೀಕ್ಷಕ ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ ಉದ್ಘಾಟಿಸಿದರು.
ನಂತರ ಉದ್ಘಾಟಣಾ ಭಾಷಣದಲ್ಲಿ ಮಾತನಾಡಿ, ಶಾಲೆಯು ಸಂಸ್ಕಾರದ ಕೇಂದ್ರವಾಗಬೇಕು. ಪ್ರತಿ ಮಗು ಶಾಲೆಯಲ್ಲಿ ಪಠ್ಯದ ಜೊತೆಗೆ ಉತ್ತಮವಾದ ಗುಣ, ನಡತೆ ಹಾಗೂ ಸಂಸ್ಕಾರವನ್ನು ಪಡೆಯಬೇಕು. ಶಕ್ತಿ ಶಾಲೆಯು 14 ದಿನಗಳ ಕಾಲ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದಲ್ಲಿ ಒಳ್ಳೆಯ ಸಂಸ್ಕಾರ ಸಿಗಬೇಕು. ಆ ಮೂಲಕ ತಂದೆ ತಾಯಿ ಹಾಗೂ ಸಮಾಜವನ್ನು ಗೌರವಿಸುವ ಗುಣ ಪ್ರತಿ ಮಗುವಿನಲ್ಲಿಯು ಬೆಳೆಯಬೇಕೆಂದು ಹೇಳಿದರು.

ಜಾನಪದ ಸಾಹಿತ್ಯದ ಮೂಲಕ ರಾಮಾಯಣ, ಮಹಾಭಾರತ, ಬಡತನ ಹಾಗೂ ಸಂಸ್ಕಾರದ ಕುರಿತು ಮನವರಿಕೆ ಮಾಡುವ ಅನೇಕ ಉತ್ತರ ಕರ್ನಾಟಕ ಶೈಲಿಯ ಜಾನಪದ ಹಾಡನ್ನು ಹಾಡುವುದರ ಮೂಲಕ ಶಿಬಿರದ ಶಿಬಿರಾರ್ಥಿಗಳು ಹಾಗೂ ಪೋಷಕರನ್ನು ಜಾಗೃತಿ ಮಾಡಿದರು. ಇಂತಹ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ. ಇದನ್ನು ಸರಿಯಾಗಿ ವಿನಿಯೋಗಿಸಿಕೊಳ್ಳುವಂತೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಮ್. ಸತ್ಯಮೂರ್ತಿ ಹೆಬ್ಬಾರ್ ಮಾತನಾಡಿ ಗಣಿತದ ಜ್ಞಾನ ಪ್ರತಿಯೊಬ್ಬರಿಗೂ ಅತಿ ಅಗತ್ಯವಿದೆ. ಗಣಿತ ಕೇವಲ ಶಾಲೆಯಲ್ಲಿ ಪಠ್ಯದಲ್ಲಿ ಅಂಕ ಪಡೆಯಲು ಸೀಮಿತವಾಗಬಾರದು. ಅದು ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಉಪಯೋಗಕ್ಕೆ ಬರುವ ವಿಷಯವಾಗಿದೆ. ಗಣಿತ ಮೂಲಕ ಹಣಕಾಸಿನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ. ಆದ್ದರಿಂದ ಗಣಿತವನ್ನು ಪ್ರೀತಿಸಬೇಕು ಹಾಗೂ ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಮಾತನಾಡಿ ಕೊರೋನಾದ ಸಮಯದಲ್ಲಿ ಅನಿವಾರ್ಯವಾಗಿ ಮೊಬೈಲ್ ವಿದ್ಯಾರ್ಥಿಗಳಿಗೆ ಕೊಡಬೇಕಾಗಿ ಬಂತು. ಆದರೆ ಇಂದು ಮಕ್ಕಳನ್ನು ಮೊಬೈಲ್‍ನಿಂದ ಹೊರತರಲು ಸಾಕಷ್ಟು ಪ್ರಯತ್ನ ಮಾಡುವ ಅವಶ್ಯಕತೆಯಿದೆ. ಇಂತಹ ಸನ್ನಿವೇಶದಲ್ಲಿ ನಾವು ಬೇಸಿಗೆ ಶಿಬಿರವನ್ನು ಆಯೋಜಿಸಿರುವುದು ನಮ್ಮಲ್ಲಿರುವ ಅನೇಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶವಾಗಿದೆ. ಆ ಮೂಲಕ ಅನೇಕ ಕಲೆಗಳಿಗೆ ಇಲ್ಲಿ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಕಾರ್ಯಕ್ರಮದ ಉದ್ದೇಶದ ಕುರಿತಂತೆ ಪ್ರಾಸ್ತಾವಿಕವಾಗಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್.ಕೆ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕನ್ನಡ ಉಪನ್ಯಾಸಕಿ ರೇಖಾ ಡಿ ಕೋಸ್ಟಾ, ನಿರೂಪಣೆಯನ್ನು ಉಪನ್ಯಾಸಕ ಶರಣಪ್ಪ ಹಾಗೂ ಧನ್ಯವಾದವನ್ನು ಪೂರ್ಣೇಶ್ ಸಮರ್ಪಿಸಿದರು.

Pages