ಬೈಲು ಮೂಡುಕರೆಗುತ್ತು ಸಂಜೀವ ಶೆಟ್ಟಿ ಮೊರ್ಲ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೈಲು ಮೂಡುಕರೆಗುತ್ತು ಸಂಜೀವ ಶೆಟ್ಟಿ ಮೊರ್ಲ ನಿಧನ

Share This
ಮಂಗಳೂರು : ಬೈಲು ಮೂಡುಕರೆ ಗುತ್ತು ನಿವಾಸಿ ಸಂಜೀವ ಶೆಟ್ಟಿ ಮೊರ್ಲ (92) ಇವರು ಏಪ್ರಿಲ್ 8ರಂದು ಬೆಳಿಗ್ಗೆ ತನ್ನ ಸ್ವಗೃಹದಲ್ಲಿ ದೈವಾಧೀನರಾದರು.
ಮೃತರು ಶ್ರೀ ನರಸಿಂಹ ದಶಾವತಾರ ಯಕ್ಷಗಾನ ಮಿತ್ರ ಮಂಡಳಿಯ ಮುಂಬಯಿಯ ಅಧ್ಯಕ್ಷರಾಗಿ, ಸಿ.ಐ.ಡಿ.ಆಫೀಸು ಕ್ಯಾಂಟೀನು ಹಾಗೂ ಗಣೇಶ್ ಹೋಟೇಲಿನ ಮಾಲಕರು, ಅಪ್ರತಿಮ ಕಲಾ ಪೋಷಕರುರಾಗಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನೂ ಅಗಲಿದ್ದಾರೆ.

ಅವರು ಬಂಟ್ಸ್ ಸಂಘ ಮುಂಬಯಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಬಂಟ್ಸ್ ಸಂಘಗಳ ಮಾಜಿ ಅಧ್ಯಕ್ಷರುಗಳಾದ ಡಾ.ಬಾಲಕೃಷ್ಣ ಶೆಟ್ಟಿ, ಎಂ ಡಿ ಶೆಟ್ಟಿ ನಿಟ್ಟೆ ಸುಧಾಕರ ಶೆಟ್ಟಿ, ಮರ್ಕಾಕ ತ್ಯಂಪಣ್ಣ ಶೆಟ್ಟಿ, ಮತ್ತು ಇತರರ ಜೊತೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಅವರು ಮುಂಬೈನ ಡಿ. ಷಣ್ಮುಖಾನಂದ ಸಭಾಂಗಣ,  ಕೆ. ಪಾಟ್ಕರ್ ಸಭಾಂಗಣ, ವಿಶ್ವೇಶ್ವರ ಸಭಾಂಗಣ ಹಾಗೂ ಇತರ ಹಲವು ಭಾಗಗಳಲ್ಲಿ ದ. ಕ ಜಿಲ್ಲೆ ಹಾಗೂ ಇತರ ಭಾಗದ ಹಿರಿಯ ಕಲಾವಿದರನ್ನು ಒಂದುಗೂಡಿಸಿ ಯಕ್ಷಗಾನವನ್ನು ಆಯೋಜಿಸುತ್ತಿದ್ದರು. ಅವರು ಶ್ರೀ ನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಅಧ್ಯಕ್ಷರಾಗಿದ್ದರು. ಅವರು ಪ್ರತಿ ವರ್ಷ ಮುಂಬೈನ ಎಲ್ಲಾ ಭಾಗಗಳಲ್ಲಿ ಗಾನಸ್ಪತಿ ಮತ್ತು ನವರಾತ್ರಿ ಉತ್ಸವದಲ್ಲಿ ಯಕ್ಷಗಾನ ಮೇಳದ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು. ಅವರು ಎಲ್ಲಾ ಹಿರಿಯ ಯಕ್ಷಗಾನ ಕಲಾವಿದರು ಮತ್ತು ಕಲ್ಲಾಡಿ ವಿಠ್ಠಲ ಶೆಟ್ಟಿಯವರ ಆತ್ಮೀಯ ಗೆಳೆಯರಾಗಿದ್ದರು.

ಮೃತರ ಅಂತ್ಯ ಸಂಸ್ಕಾರ ಇಂದು ಏ.9ರಂದು  ಶನಿವಾರ ಬೆಳಿಗ್ಗೆ 11.30ಕ್ಕೆ ಅವರ ಸ್ವಗೃಹ ಬೈಲು ಮೂಡುಕರೆ ಗುತ್ತುವಿನಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಊರಿನ ಗಣ್ಯರಾದ ಏರಿಯಾರು ಹರಿಯಪ್ಪ ಶೆಟ್ಟಿ, ಮೂಡುಶೆಡ್ಡೆ ಮಂಜುನಾಥ ಶೆಟ್ಟಿ, ಮೋರ್ಲ ಚಂದ್ರಹಾಸ ಶೆಟ್ಟಿ, ಮೋರ್ಲ ಗಿರೀಶ ಆಳ್ವ, Adv ಮೋರ್ಲ ರತ್ನಾಕರ ಶೆಟ್ಟಿ ಮುಂಬೈ ಮತ್ತಿತರರು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.

Pages