ಮಂಗಳೂರು : ಕಳೆದ ಫೆ.27ರಂದು ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆಯ ಫಲಿತಾಂಶ ಪ್ರಕಟಿಸಲು ರಾಜ್ಯ ಹೈಕೋರ್ಟ್ ಇಂದು (ಎ.11) ಆದೇಶ ಹೊರಡಿಸಿದೆ.
ಅದರಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಫಲಿತಾಂಶ ಇಂತಿದೆ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗನ್ನಾಥ್ ಶೆಟ್ಟಿ ಬಾಳ ಅವಿರೋಧವಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟಾ, ರಾಜೇಶ್ ಕೆ ಪೂಜಾರಿ ಹಾಗೂ ಅನ್ಸಾರ್ ಇನೋಳಿ ಆಯ್ಕೆಯಾಗಿರುತ್ತಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಜಿತೇಂದ್ರ ಕುಂದೇಶ್ವರ ಆಯ್ಕೆಯಾಗಿದ್ದು, ಜಿಲ್ಲಾ ಕಾರ್ಯದರ್ಶಿಗಳಾಗಿ ವಿಜಯ್ ಕೋಟ್ಯಾನ್, ಗಂಗಾಧರ್ ಕಲ್ಲಪಳ್ಳಿ, ಭುವನೇಶ್ವರ ಗೇರುಕಟ್ಟೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಖಜಾಂಜಿಯಾಗಿ ಪುಷ್ಪರಾಜ್ ಬಿ.ಎನ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸತೀಶ್ ಇರಾ, ಸುಖ್ ಪಾಲ್ ಪೊಳಲಿ, ಕೆ.ವಿಲ್ಪ್ರಡ್ ಡಿ'ಸೋಜ, ಸತ್ಯವತಿ, ರಾಜೇಶ್ ಶೆಟ್ಟಿ, ಭರತ್ ರಾಜ್, ಮೋಹನ್ ಕುತ್ತಾರ್, ಹರೀಶ್ ಕುಲ್ಕುಂದ, ಮಹಮ್ಮದ್ ಆರೀಫ್, ರಾಜೇಶ್ ಕುಮಾರ್ ದಡ್ಡಂಗಡಿ, ಶ್ರವಣ್ ಕುಮಾರ್ ಕೆ, ನಿಶಾಂತ್ ಶೆಟ್ಟಿ ಕಿಲೆಂಜೂರು, ಸಂದೇಶ್ ಜಾರ, ಹಿಲರಿ ಕ್ರಾಸ್ತಾ ಪಿ ಹಾಗೂ ಅಶೋಕ್ ಶೆಟ್ಟಿ ಬಿ.ಎನ್ ಆಯ್ಕೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿ ರವಿರಾಜ್ ಎಚ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.