ಬಂಟ್ಸ್ ನ್ಯೂಸ್, ಕಾರ್ಕಳ : ಕಂಬಳ ಕ್ರೀಡೆಯ ಓಟದಲ್ಲಿ ಈಗಾಗಲೇ ವಿಶ್ವ ಮಟ್ಟದ ದಾಖಲೆ ಮಾಡಿರುವ ಬಜಗೋಳಿಯ ನಿಶಾಂತ್ ಶೆಟ್ಟಿ ಅವರು ವೇಣೂರು ಪೆರ್ಮುಡ ಕಂಬಳದಲ್ಲಿ 100 ಮೀ. ಓಟವನ್ನು 8.36 ಸೆಕೆಂಡ್ ಕ್ರಮಿಸುವ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾರೆ.
ಕಾನಡ್ಕ ಪ್ಲೇವಿ ಡಿಸೋಜಾ ಅವರ ಕೋಣವನ್ನು ಓಡಿಸಿದ ನಿಶಾಂತ್ ಅವರು 125ಮೀ. ದೂರವನ್ನು 10.44 ಸೆಕೆಂಡ್'ಗಳಲ್ಲಿ ಕ್ರಮಿಸಿದ್ದರು. ಈ ಓಟ 100ಮೀ. ಸರಾಸರಿಗೆ 8.36 ಸೆಕೆಂಡ್ ತೆಗೆದುಕೊಳ್ಳುವ ಮೂಲಕ ನಿಶಾಂತ್ ಅವರು ಓಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಮೂಲತಃ ಕಾರ್ಕಳ ತಾಲೂಕು
ಬಜಗೋಳಿ ನಿವಾಸಿ ನಿಶಾಂತ್ ಶೆಟ್ಟಿ ಅವರು ಈ ಹಿಂದೆ ವಿಶ್ವದ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನು ಕಂಬಳ ಗದ್ದೆ ಓಟಗಾರ ನಿಶಾಂತ್ ಶೆಟ್ಟಿ ಮುರಿಯುವ ಮೂಲಕ ಮತ್ತೆ ತುಳುನಾಡಿನ ಕಂಬಳ ಕ್ರೀಡೆ ಸುದ್ದಿಯಾಗಿದ್ದರು.
ಈ ಹಿಂದೆ ವೇಣೂರಿನಲ್ಲಿ ನಡೆದ ಕಂಬಳದಲ್ಲಿ 143 ಮೀ. ಓಟವನ್ನು
13.61 ಸೆಕೆಂಡಿನಲ್ಲಿ ಕ್ರಮಿಸಿ ಹೊಸ ದಾಖಲೆ ಬರೆಯುವ ಮೂಲಕ ವಿಶ್ವ ಮಟ್ಟದ ಸುದ್ದಿಯಾಗಿದ್ದರು. ( ಸುದ್ದಿ ಕೃಪೆ : ವಿಕ)