ಮುಂಬಯಿ : ಮಲಾಡ್ ಪೂರ್ವ ಕುರಾರ್ ವಿಲೇಜಿನ ಕೈವಲ್ಯ ಶ್ರೀ ಪ್ರೇಮಾನಂದ ಸ್ವಾಮೀಜಿ ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಚೈತ್ರ-ಮಾಸ ನವರಾತ್ರಿ ಪ್ರತಿಷ್ಠ ಉತ್ಸವ 2022 ಎ. 2ರಿಂದ ಪ್ರಾರಂಭವಾಗಿದ್ದು ಎ. 10ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪ್ರತಿದಿನ ಮುಂಜಾನೆ ಗಣಪತಿ ಹೋಮ, ಪೂಜೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಏ. 9ರಂದು ಬೆಳಿಗ್ಗೆ ಗಣಪತಿ ಹೋಮ ನಂತರ ದೇವಿ ಪೂಜೆ ಹಾಗೂ ಇತರ ಪೂಜಾ ವಿಧಿ ವಿಧಾನಗಳು ನಂತರ ಅನ್ನಸಂತರ್ಪಣೆ, ಸಂಜೆ 6.30ಕ್ಕೆ ದೀಪಾರಾದನೆ, ರಾತ್ರಿ ಮಹಾಮಂಗಳಾರತಿ ನಡೆಯಲಿದೆ.
ಎಪ್ರಿಲ್ 10 ರಂದು ಬೆಳಿಗ್ಗೆ ಗಣಪತಿಹೋಮ, ಉಷಾ ಪೂಜೆ, ಕಲಶಪೂಜೆ, ನವಕ ಪಂಚಗವ್ಯ ಸಂಜೆ 6:30 ಕ್ಕೆ ದೀಪಾರಾಧನೆ, ದೇವಿ ಪ್ರಿತ್ಯರ್ಥವಾಗಿ ಉತ್ಸವ ಪೂಜೆ, 7ರಿಂದ 8ರ ತನಕ ಉತ್ಸವ ಬಲಿ ಪೂಜೆ, ರಾತ್ರಿ 10ಕ್ಕೆ ರಕ್ತ ಪುಷ್ಪಾಂಜಲಿ ಗುರೂಜಿ ಪೂಜೆ ಆನಂತರ ಅನ್ನಸಂತರ್ಪಣೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಂದು ಸಾಯಂಕಾಲ ಸಂಸದ ಗೋಪಾಲ್ ಶೆಟ್ಟಿ ಹಾಗೂ ಶಾಸಕ ಪ್ರಭು ಅವರು ಉಪಸ್ಥಿತರಿರುವರು. ಭಕ್ತಾಭಿಮಾನಿಗಳಿಂದ ತುಳು ಕನ್ನಡ ಹಾಗೂ ಮರಾಠಿ ಭಜನಾ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೇ ಪ್ರತಿದಿನ ರಾತ್ರಿ ಅನ್ನದಾನ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶ್ರೀ ಮೂಕಾಂಬಿಕ ಮಂದಿರದ ಧರ್ಮದರ್ಶಿ ವೇದಾನಂದ ಸ್ವಾಮೀಜಿ, ಅಧ್ಯಕ್ಷರಾದ ದೀಪಕ್ ಶ್ಯಾನುಭಾಗ್ ಹಾಗೂ ಸೇವಾ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.