ಮಂಗಳೂರು : ಉತ್ತಮವಾದ ಗುರಿಯನ್ನು ಹೊಂದುವುದರಿಂದ ಮಕ್ಕಳು ಜೀವನದಲ್ಲಿ ಉತ್ತಮ ಮತ್ತು ಶ್ರೇಷ್ಠತೆಯನ್ನು ಹಾದಿಯನ್ನು ತಲುಪಬಹುದು ಎಂದು ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್.ಕೆ ಹೇಳಿದರು.
ಅವರು ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಮಂಗಳ ಸ್ವಿಮ್ಮಿಂಗ್ ಕ್ಲಬ್‍ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 21 ದಿನಗಳ ಸ್ವಿಮ್ಮಿಂಗ್ ಶಿಬಿರವನ್ನು ಅವರು ದೀಪ ಬೆಳಗಿಸಿ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ತಂದ ಪವಿತ್ರ ತೀರ್ಥವನ್ನು ಈಜು ಕೊಳಕ್ಕೆ ಸಿಂಪಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೊಡ್ಡದಾದ ಯಶಸ್ಸು ಸುಲಭವಾಗಿ ಎಂದಿಗೂ ಲಭಿಸುವುದಿಲ್ಲ. ಈಜುವುದರಲ್ಲಿ ಮಾತ್ರವಲ್ಲ ಜೀವನದಲ್ಲಿಯೂ ನಿಮ್ಮನ್ನು ನಂಬಿರಿ. ನೀವು ಮುಕ್ತ ಮನಸ್ಸು ಹೊಂದಿರಬೇಕು. ಈ 21 ದಿನಗಳ ತರಬೇತಿಯಿಂದ ಗರಿಷ್ಠತೆಯನ್ನು ಹೊರತೆಗೆಯುವ ಮೂಲಕ ನಿಮಗೆ ಮತ್ತು ನಿಮ್ಮ ಹೆತ್ತವರಿಗೆ, ಶಾಲೆಗೆ ದೊಡ್ಡ ಹೆಸರು ತಂದು ಕೊಡಿ ಎಂದು ಶಿಬಿರಕ್ಕೆ ಶುಭ ಹಾರೈಸಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಮಾತನಾಡಿ, ಚಿಕ್ಕ ಮಕ್ಕಳ ಉತ್ಸಾಹವು ಗಮನಾರ್ಹವಾಗಿದೆ ಮತ್ತು ಅವರು ಅದೇ ಉತ್ಸಾಹದಿಂದ ಸಾಧನೆಯ ಮೈಲಿಗಲ್ಲನ್ನು ತಲುಪಬೇಕು. ಪ್ರತಿ ಕ್ಷಣವನ್ನು ಬಳಸಿಕೊಳ್ಳಿ ಮತ್ತು ಕೌಶಲ್ಯಗಳನ್ನು ಸುಧಾರಿಸಿ ಸಮಾಜಕ್ಕೆ ಪ್ರಯೋಜನಕಾರಿಯಾಗಿರಿ ಎಂದು ಶುಭ ಹಾರೈಸಿದರು.
ಮಂಗಳ ಸ್ವಿಮ್ಮಿಂಗ್ ಕ್ಲಬ್‍ನ ಕಾರ್ಯದರ್ಶಿ ಶಿವಾನಂದ ಗಟ್ಟಿಯವರು, ಶಿಬಿರಾರ್ಥಿಗಳಿಗೆ ನಿರೀಕ್ಷಿತ ನಿಯಮಗಳು ಮತ್ತು ಅಭ್ಯಾಸ ಸೂಚನೆಗಳನ್ನು ನೀಡಿದರು. ಸಂಸ್ಥೆಯ ಈಜು ತರಬೇತುದಾರರಾದ ರಾಜೇಶ್ ಖಾರ್ವಿ, ಕೀರ್ತನ್ ಮತ್ತು ನಯನ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ನಿರೂಪಿಸಿ ವಂದಿಸಿದರು.