ನಾವು ಬಂಟರು, ಬಂಟ ಸಮಾಜದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಾವು ಬಂಟರು, ಬಂಟ ಸಮಾಜದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು : ಐಕಳ ಹರೀಶ್ ಶೆಟ್ಟಿ

Share This

ಮೀಂಜ ಬಂಟರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ 

ಕಾಸರಗೋಡು : ಮಿಂಜ ಬಂಟರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಬಂಟ ಸಮುದಾಯಕ್ಕೆ ಕಲಶಪ್ರಾಯವಾಗಿ ದೇವರ ರೂಪದಲ್ಲಿ ಊರಿನ ಮಣ್ಣಿನ ಮಗನಾಗಿ ಕೊಡುಗೈ ದಾನಿಗಳು ಆದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನರಂತಹ ವ್ಯಕ್ತಿಗಳು ಸಮಾಜದಲ್ಲಿ ಹುಟ್ಟಿ ಬಂದಾಗ ನಮ್ಮ ಊರು ಸಮೃದ್ಧಿಯ ನಾಡು ಆಗುವುದು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಂಟ ಸಮುದಾಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಪಡೆಯುವ ಕ್ರೀಡಾಳುಗಳು ಕೋಟಿ ರೂಪಾಯಿಗಳ ಬಹುಮಾನವನ್ನು ನೀಡುವುದಾಗಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಘೋಷಣೆ ಮಾಡಿರುವುದು ನಮ್ಮ ಸಮುದಾಯದಲ್ಲಿ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಎತ್ತಿ ತೋರಿಸಿದಂತಾಗಿದೆ. ಎಲ್ಲಾ ವಿಷಯಗಳಲ್ಲಿ ಕಷ್ಟ-ಸುಖಗಳನ್ನು ಹಂಚಿಕೊಂಡು ಕೆಲಸ ಮಾಡೋಣ ನಾನು ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿ ಇರುವವರೆಗೆ ಮತ್ತು ನಿಮ್ಮ ಜೊತೆ ಸಮಾಜದಲ್ಲಿ ಇರುವವರೆಗೆ ಶಕ್ತಿ ಮೀರಿ ಕೆಲಸವನ್ನು ಮಾಡುತ್ತೇನೆ. ಮೀಂಜಾ ಬಂಟರ ಸಂಘ ಒಳ್ಳೆಯ ಕೆಲಸ ಮಾಡುವಂತಾಗಲಿ ಒಗ್ಗಟ್ಟಿನಿಂದ ನೀವೆಲ್ಲ ಇರಬೇಕು ಎಂದು ನುಡಿದರು.

ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ ಸದಾಶಿವ ಶೆಟ್ಟಿಯವರು, ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಪಡೆದು ಮುಂಬೈಯಲ್ಲಿ ಉನ್ನತ ಸ್ಥಿತಿಯಲ್ಲಿದ್ದು ತನ್ನವರನ್ನು ತನ್ನ ಸಮಾಜವನ್ನು ಅಭಿವೃದ್ಧಿಗೊಳಿಸುವ ನನ್ನ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ. ಸಮಾಜದ ಋಣ ತೀರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಬಂಟರ ಸಮಾಜದಲ್ಲಿ ಶ್ರೀಮಂತ ಬಡವ ಎನ್ನುವ ಭೇದ ಇಲ್ಲದೆ ಎಲ್ಲರೂ ಒಗ್ಗಟ್ಟಾಗಿ ನಿಂತು ನಮ್ಮಬಂಟರ ಸಂಘ ಒಳ್ಳೆಯ ಕೆಲಸ ಮಾಡಬೇಕು ಎಂದು ಆಶಯ ನುಡಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರನ್ನು ಅವರ ಸಾಧನೆಗಾಗಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಐಕಳ ಹರೀಶ್ ಶೆಟ್ಟಿ ಅವರ ಸಮಾಜದ ಅನನ್ಯ ಪ್ರೀತಿಗಾಗಿ ಆದರದಿಂದ ಮೀಂಜಾ ವಲಯ ಬಂಟರು ಸೇರಿ ಗೌರವ ಸನ್ಮಾನವನ್ನು ಮಾಡಲಾಯಿತು.

ನಂತರ ಸದಾಶಿವ ಶೆಟ್ಟಿ ಮತ್ತು ಅವರ ಮಾತೃಶ್ರೀ ಯವರಾದ ಶ್ರೀಮತಿ ಶೀಲಾ ಶೆಟ್ಟಿಯವರನ್ನು ಸಮಾರಂಭದಲ್ಲಿ ಜೊತೆಯಾಗಿ ಮಾತೃ ಋಣ ಸಮರ್ಪಣೆಗಾಗಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹಿರಿಯರಾದ ಕೂಳೂರುಬೀಡು ಕೆ. ದಾಸಣ್ಣ ಆಳ್ವ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಧರ್ಮೆಮಾರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಸಂಕಬೈಲ್ ಸತೀಶ್ ಅಡಪ್ಪ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ, ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಬೆಂಗಳೂರು ಉದ್ಯಮಿ ಸ್ಥಳೀಯರಾದ ಮಾಣೂರು ಸೀತಾರಾಮ ಶೆಟ್ಟಿ,ಮುಂಬೈ ಉದ್ಯಮಿ ಸ್ಥಳೀಯವರಾದ ಜಯರಾಮ ರೈ ಬೆಜ್ಜಂಗಳಗುತ್ತು, ಮೋಹನ ಶೆಟ್ಟಿ ಮಜ್ಜಾರು, ಕೌಡುರು ಬೀಡು ಮಾರಪ್ಪ ಭಂಡಾರಿ, ಪಳ್ಳತ್ತಡ್ಕ ಚಂದ್ರಶೇಖರ ಶೆಟ್ಟಿ ಕಟ್ಟಡ ಸಮಿತಿ ಸಂಚಾಲಕರಾದ ನಡುಹಿತ್ಲು ನಾರಾಯಣ ನಾಯ್ಕ್, ತಲೆಕಳ ಸದಾನಂದ ಶೆಟ್ಟಿ, ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕಾರ್ತಿಕ್ ಶೆಟ್ಟಿ ಮಜಿಬೈಲ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಒಕ್ಕೂಟದ ಆಹ್ವಾನಿತ ಸದಸ್ಯ ಹೇಮಂತ್ ಶೆಟ್ಟಿ, ಜತ್ತಬೆಟ್ಟು ರವಿ ಶೆಟ್ಟಿ ಸಾಲೆತ್ತೂರು ಬಂಟರ ಸಂಘದ ಜೊತೆ ಕಾರ್ಯದರ್ಶಿ ಅಮರೇಶ ಶೆಟ್ಟಿ ತಿರುವಾಜೆ ಉಪಸ್ಥಿತರಿದ್ದರು.

Pages