ಉಳ್ಳಾಲ : ಹರೇಕಳ ಗ್ರಾಮದ ಸಂಪಿಗೆದಡಿ ಆಂಬ್ಲಮೊಗರು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಪ್ರತಿಷ್ಠೆ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಭಾಗವಾಗಿ ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷಧಾರಿ ನಗ್ರಿ ಮಹಾಬಲ ರೈ, ಪುಂಡು ವೇಷಧಾರಿ ಮಾಡಾವು ಕೊರಗಪ್ಪ ರೈ ಮತ್ತು ಪ್ರಸಿದ್ಧ ವೇಷಧಾರಿ, ಅರ್ಥದಾರಿ ಕನ್ನಡಿಕಟ್ಟೆ ಗಣೇಶ್ ಶೆಟ್ಟಿ ಅವರಿಗೆ ಪ್ರಥಮ ವರ್ಷದ 'ಭಂಡಸಾಲೆ ರತ್ನ ಪ್ರಶಸ್ತಿ 2022' ನೀಡಿ ಗೌರವಿಸಲಾಯಿತು.
ಕೇಸರಿ ಎಸ್. ಶೆಟ್ಟಿ ದೋಣಿಂಜೆಗುತ್ತು ಮತ್ತು ಬಿ. ಸಂಕಪ್ಪ ಶೆಟ್ಟಿ ಭಂಡಾರಪಾದೆ ಮತ್ತು ಮಕ್ಕಳಿಂದ ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆಯ ಸಂದರ್ಭದಲ್ಲಿ ‘ಭಂಡಸಾಲೆ ರತ್ನ ಪ್ರಶಸ್ತಿ 2022” ಅನ್ನು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರು ಪ್ರದಾನ ಮಾಡಿದರು.
ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಮೋಹನ್‍ದಾಸ್ ರೈ ದೆಬ್ಬೇಲಿಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಘಟಕರಾದ ಭಂಡಾರಪಾದೆ ಮಹೇಶ್ ಶೆಟ್ಟಿ, ಭಂಡಾರಪಾದೆ ಮಧುಸೂದನ್ ಶೆಟ್ಟಿ, ಪ್ರದೀಪ್ ಆಳ್ವ ಉಪಸ್ಥಿತರಿದ್ದರು.
ಮಾರ್ಗದರ್ಶಕ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಪ್ರಶಸ್ತಿ ಪತ್ರ ವಾಚಿಸಿದರು.