ಮುಂಬೈ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಮುಂಬೈ ಉದ್ಯಮಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಎಂ.ಡಿ ರಘುರಾಮ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವುದನ್ನು ಗಮನಿಸಿದ ಮುಂಬೈನ ಖ್ಯಾತ ಉದ್ಯಮಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಎಂ.ಡಿ ರಘುರಾಮ ಶೆಟ್ಟಿಯವರು ಈಗಾಗಲೇ ಒಕ್ಕೂಟದ ಮಹಾಪೋಷಕರಾಗಿದ್ದು ಇನ್ನು ಮುಂದೆ ಒಕ್ಕೂಟದ ನಿರ್ದೇಶಕರಾಗಿರುತ್ತಾರೆ.
ಇವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಹಾರ್ದಿಕ ಅಭಿನಂದನೆಗಳು. ಶ್ರೀ ದೇವಿ ಕಟೀಲಮ್ಮನ ದಯೆ ನಿಮ್ಮ ಮೇಲೆ ಸದಾ ಇರಲಿ ಎಂದು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳು, ನಿರ್ದೇಶಕರು, ಮಹಾಪೋಷಕರು, ಪೋಷಕರು ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಹಾರೈಸಿದ್ದಾರೆ.