ಬಂಟ್ಸ್ ನ್ಯೂಸ್, ಶಿವಮೊಗ್ಗ : ತೀರ್ಥಹಳ್ಳಿ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಮುಖ್ಯಸ್ಥರು ಮತ್ತು ಬಾರ್ಕೂರು ಮಠದ ಸ್ವಾಮಿಗಳಾದ ಡಾ. ಸಂತೋಷ್ ಗುರೂಜಿ ಇವರ ಧರ್ಮಪತ್ನಿ ಶಿಲ್ಪಾ ಶೆಟ್ಟಿ (45) ಹೃದಯಾಘಾತದಿಂದ ಎ.16ರ ಬೆಳಿಗ್ಗೆ ನಿಧನರಾದರು.
ತೀರ್ಥಹಳ್ಳಿ ಪಟ್ಟಣದ ವಿಜಯಾ ಹೋಟೆಲ್ ಮಾಲೀಕರಾಗಿದ್ದ ದಿವಂಗತ ಸದಾಶಿವ ಶೆಟ್ಟರ ಮಗಳು ತೀರ್ಥಹಳ್ಳಿ ಜಯರಾಮ್ ಶೆಟ್ಟಿ ಸಹೋದರಿ ಶಿಲ್ಪಾ ಶೆಟ್ಟಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೆಜ್ಜವಳ್ಳಿಗೆ ತರಲಾಗುತ್ತಿದ್ದು ಇಂದು ರಾತ್ರಿ ಸುಮಾರು 8 ಗಂಟೆಗೆ ತಲುಪುವ ಸಾಧ್ಯತೆಯಿದೆ. ನಾಳೆ ಎ.17ರಂದು ಬೆಳಿಗ್ಗೆ 9 ಗಂಟೆಗೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಸ್ವಗೃಹದ ಹತ್ತಿರ ಅಂತ್ಯಸಂಸ್ಕಾರವನ್ನು ಮಾಡಲು ಗುರುಹಿರಿಯರು ನಿಶ್ಚಯಿಸಿರುತ್ತಾರೆ ಎಂದು ತಿಳಿದು ಬಂದಿರುತ್ತದೆ.