ಗೋವಾದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಶಿವಾನಿ ಶೆಟ್ಟಿಗೆ ಪ್ರಥಮ ಸ್ಥಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಗೋವಾದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಶಿವಾನಿ ಶೆಟ್ಟಿಗೆ ಪ್ರಥಮ ಸ್ಥಾನ

Share This
ಬಂಟ್ಸ್ ನ್ಯೂಸ್, ಮಂಗಳೂರು : ಗೋವಾದ ಕಲನ್'ಘಾಟಲ್ಲಿ ನಡೆಯುತ್ತಿರುವ 8ನೇ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಉಡುಪಿಯ ಶಿವಾನಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂಟರ್ನ್ಯಾಷನಲ್ ಯೂತ್ ಯೋಗಿಕ್ ಸೈನ್ಸ್, ವರ್ಷಿಣಿ ಯೋಗ ಎಜುಕೇಷನ್ ಆ್ಯಂಡ್ ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ (ರಿ), ಹಾಗೂ ಸರ್ಕಾರದ ಆಯುಷ್ ಆ್ಯಂಡ್ ಯೂತ್ ಸ್ಪೋರ್ಟ್ಸ್ ಸರ್ವಿಸ್ ಸಹಯೋಗದೊಂದಿಗೆ ಎ.14-17ರ ವರೆಗೆ ಗೋವಾದ ಕಲಘಾಟಲ್ಲಿ 8ನೇ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ 2021-22 ನಡೆಯುತ್ತಿದೆ.

ಈ ಯೋಗಾಸನ ಸ್ಪರ್ಧೆಯ 8-10 ವರ್ಷದ ವಿಭಾಗದಲ್ಲಿ ಶಿವಾನಿ ಶೆಟ್ಟಿಗೆ ಪ್ರಥಮ ಸ್ಥಾನ ಲಭಿಸಿದೆ. ಶಿವಾನಿ ಶೆಟ್ಟಿ ಈ ಹಿಂದೆಯೂ ಹಲವಾರು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು. 

ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಯೋಗಾಸನ ಸ್ಫರ್ಧೆಯಲ್ಲಿ ಉಡುಪಿಯ ನಿರಂತರ ಯೋಗ ಕೇಂದ್ರದ ಶಿವಾನಿ ಶೆಟ್ಟಿ, ತನುಶ್ರೀ ಪಿತ್ರೋಡಿ, ಅರ್ಚನಾ, ಕವನ, ಕೆ ನರೇಂದ್ರ ಕಾಮತ್, ಅನ್ವಿ ಎಚ್ ಅಂಚನ್ ಭಾಗವಹಿಸಿದ್ದಾರೆ.

Pages