ಯೋಗಿಶ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ "ಹರೀಶ ವಯಸ್ಸು 36" ಮಾರ್ಚ್ 11ಕ್ಕೆ ರಾಜ್ಯದಾದ್ಯಂತ ಬಿಡುಗಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯೋಗಿಶ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ "ಹರೀಶ ವಯಸ್ಸು 36" ಮಾರ್ಚ್ 11ಕ್ಕೆ ರಾಜ್ಯದಾದ್ಯಂತ ಬಿಡುಗಡೆ

Share This
ಮಂಗಳೂರು: ಶಿರಡಿ ಸಾಯಿ ಬಾಲಜಿ ಫಿಲಂಸ್ ನಿರ್ಮಾಣದ "ಹರೀಶ ವಯಸ್ಸು 36" ಮಾರ್ಚ್ 11ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.
ವಿಭಿನ್ನ ಕಥಾ ಹಂದರವನ್ನು ಮನೋಜ್ಞವಾದ ಹಾಸ್ಯ ಸ್ಪರ್ಶದೊಂದಿಗೆ, ವಿಭಿನ್ನ ಟೈಟಲ್ ಮೂಲಕವೇ ಜನರ ಗಮನ ಸೆಳೆದಿರುವ “ಹರೀಶ ವಯಸ್ಸು 36”ಬಗ್ಗೆ ಬಿಡುಗಡೆಗೊಂಡ ಟ್ರೈಲರ್ ನೋಡಿಯೇ ಫಿಧಾ ಆದ ಸಿನಿಮಾ ಪ್ರೇಮಿಗಳಲ್ಲಿ ಭರವಸೆ ಮೂಡಿಸಿದೆ. ತಿಳಿ ಹಾಸ್ಯದ ಹೃದಯಸ್ಪರ್ಶಿ ಸಂಭಾಷಣೆ, ನಟನೆ, ಹಾಡು ಎಲ್ಲವೂ ಟ್ರೈಲರ್ ನೋಡಿದ ಜನಕ್ಕೆ ಕಾತರದಿಂದ ಕಾಯುವಂತಾಗಿಸಿದ್ದು ಇದರ ಬಿಡುಗಡೆಗೆ ಬಹು ಚಿತ್ರ ಪ್ರೇಮಿಗಳ ಬೇಡಿಕೆ ಬಂದಿದ್ದು ಎಲ್ಲರೂ ನೋಡುವಂತಾಗಿಸಲು ಪ್ರತಿ ನಗರದ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕರಾದ ಲಕ್ಷ್ಮೀಕಾಂತ್ ಹೆಚ್.ವಿ.ರಾವ್, ತ್ರಿಲೋಕ್ ಕುಮಾರ್ ಝಾ, ಚಿಂತಕುಂಟ ಶ್ರೀದೇವಿ, ವಿ. ರಜನಿ ಜಂಟಿಯಾಗಿ ತಿಳಿಸಿದ್ದಾರೆ.

ತಾರಾಗಣದಲ್ಲಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿ ಚಿತ್ರದ ಜೋಸೆಫ್ ಪಾತ್ರಧಾರಿ, ಮೂಲತಃ ಮಂಜೇಶ್ವರದ ಯೋಗಿಶ್ ಶೆಟ್ಟಿ ಕಡಂಬಾರ್ ಅವರು ಸಂಪೂರ್ಣವಾಗಿ ನಾಯಕ ನಟನಾಗಿ ಅಭಿನಯಿಸಿರುವ ಮಂಗಳೂರು ಮೂಲದ ಗುರುರಾಜ್ ಜೇಷ್ಠ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಚಿತ್ರಕ್ಕೆ ಸ್ವತಃ ನಿರ್ದೇಶಕರೇ ಸಂಗೀತ ಸಂಯೋಜಿಸಿ ನಿರ್ದೇಶಿಸಿ ನಟಿಸಿರುವುದು ಸಿನಿಮಾದ ಇನ್ನೊಂದು ವಿಶೇಷತೆಯಾಗಿದೆ.

ಕನ್ನಡ,ತುಳು,‌ ಮಲೆಯಾಳ ಹೀಗೆ ತ್ರಿಭಾಷಾ ಚಿತ್ರೊದ್ಯಮದಲ್ಲಿ ಪಳಗಿದ ಮೋಹನ್ ಪಡ್ರೆ ಅವರ ಕೈಚಳಕದ ಕ್ಯಾಮರಾ ಛಾಯಾಗ್ರಹಣವಿದೆ. "ಸೈಮಾ ಪ್ರಶಸ್ತಿ" ವಿಜೇತ ಪ್ರಕಾಶ್ ತೂಮಿನಾಡು, ಹಿರಿಯ ಚಿತ್ರನಟ ಉಮೇಶ್, ಶ್ವೇತಾ ಅರೆಹೊಳೆ, ಉಮೇಶ್ ಮಿಜಾರ್, ಶೋಭಾ ಶೆಟ್ಟಿ, ಮಂಜುಳಾ ಜನಾರ್ಧನ್, ರಮೇಶ್ ರೈ ಕುಕ್ಕುವಳ್ಳಿ, ರಾಜೇಶ್ ಸ್ಕೈಲಾರ್ಕ್, ರಕ್ಷಣ್ ಮಾಡೂರ್ ಸೇರಿದಂತೆ ಅನೇಕರ ತಾರಾಬಳಗವಿದೆ.

ದಿಪಿನ್ ದಿವಾಕರ್ ಸಂಕಲನ,ರಾಜೇಶ್ ಬಂದ್ಯೋಡ್ - ಕಲೆ,ಸ್ಟಾರ್ ಗಿರಿ - ನೃತ್ಯ,ಮೋಹನ್ ರಂಗಕಹಳೆ-ಡಿ .ಐ, ದೇವಿ ರೈ - ಪ್ರಚಾರ ಕಲೆ,ರಾಜೇಶ್ ಕುಡ್ಲ- ಪ್ರೋಡಕ್ಷನ್ ಮೆನೇಜರ್, ಅಕ್ಷತ್ ವಿಟ್ಲ - ಸಹಾಯಕ ನಿರ್ದೇಶನಗೈದಿದ್ದಾರೆ.

ಹರೀಶ ವಯಸ್ಸು 36 ಚಿತ್ರದ ಟೈಟಲ್ ಸಾಂಗ ನ್ನು ದಿ.ಪುನೀತ್ ರಾಜಕುಮಾರ್ ಹಾಡಿರುವುದು ಅವರ ಮರಣಾ ನಂತರ ತಮ್ಮ ಪ್ರೀತಿಯ ಅಪ್ಪು ಅವರ ಸ್ವರ ಆನಂದಿಸುವ ಭಾಗ್ಯ ಈ ಸಿನಿಮಾದ ಮೂಲಕ ಕಲಾಭಿಮಾನಿಗಳದ್ದಾಗಿದೆ.

Pages