ಬಂಟರ ಸಮಾಜ ಎಲ್ಲರಿಗೂ ಮಾದರಿ: ಕರ್ನಿರೆ ವಿಶ್ವನಾಥ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಮಾಜ ಎಲ್ಲರಿಗೂ ಮಾದರಿ: ಕರ್ನಿರೆ ವಿಶ್ವನಾಥ ಶೆಟ್ಟಿ

Share This
ಬಂಟ್ಸ್ ನ್ಯೂಸ್, ಮುಲ್ಕಿ: ಬಂಟರ ಸಮಾಜ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ ಬಂಟರ ಕೊಡುಗೆ ಬಂಟ ಸಮಾಜ ಎಲ್ಲರಿಗೂ ಒಂದು ಮಾದರಿ ಸಮಾಜ. ಇತರ ಸಮಾಜದ ಜನರೊಂದಿಗೆ ಮುಲ್ಕಿ ಬಂಟರ ಸಂಘದ ಮೂಲಕ ಸಮಾಜದ ಕಣೀರೊರೆಸುವ ಕೆಲಸ ಆಗುತ್ತಿದೆ ಎಂದು ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ಕಾರ್ನಾಡು ಹರಿಹರ ಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಮುಲ್ಕಿ ಬಂಟರ ಸಂಘದ ವ್ಯಾಪ್ತಿಗೆ ಬರುವ 32 ಗ್ರಾಮಗಳಲ್ಲಿರುವ ಬಂಟ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ನಾಡು, ಬಪ್ಪನಾಡು ಹಾಗೂ ಚಿತ್ರಾಪು ಗ್ರಾಮಗಳ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಬಂಟ ಸಮಾಜದಲ್ಲಿ ಸರಿಯಾದ ಸೂರಿನ ವ್ಯವಸ್ಥೆ, ವೈದ್ಯಾಕೀಯ ಚಿಕಿತ್ಸೆ, ಶಿಕ್ಷಣ ಮತ್ತಿತರ ಅಗತ್ಯ ಸಂದರ್ಭಗಳಿಗೆ ಜಾಗತಿಕ ಬಂಟರ ಸಂಘದ ಮೂಲಕ ಸಹಾಯ ಮಾಡುತ್ತಿದ್ದೇವೆ. ಬಂಟ ಸಮಾಜ ಮಾತ್ರವಲ್ಲದೆ ಇತರ ಸಮಾಜದವರಿಗೂ ಸಹಾಯ ಹಸ್ತ ನೀಡಿದ್ದೇವೆ. ನಮ್ಮ ಸಂಘಟನೆ ಗಟ್ಟಿಯಾಗಿ ಮಾದರಿಯಾಗಿರಲಿ ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು. 

ಈ ಸಂದರ್ಭ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಪ್ಪನಾಡು ಗ್ರಾಮದ ಪಾಂಡುರಂಗ ಶೆಟ್ಟಿ, ಕಾರ್ನಾಡು ಗ್ರಾಮದ ಸುಧಾಕರ್ ಶೆಟ್ಟಿ ಹಾಗೂ ಚಿತ್ರಾಮ ಗ್ರಾಮದ ಶಂಕರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಗ್ರಾಮಸ್ಥರ ಮನವಿಗಳನ್ನು ಸ್ವೀಕರಿಸಲಾಯಿತು, ಆರೋಗ್ಯ ವಿಮೆಯ ಬಗ್ಗೆ ಮಾಹಿತಿ ನೀಡಲಾಯಿತು.

ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಂಗಾಧರ್ ವಿ ಶೆಟ್ಟಿ, ಜತೆ ಕಾರ್ಯದರ್ಶಿ ಸಾಯಿನಾಥ್ ಶೆಟ್ಟಿ, ಯುವ ವಿಭಾಗದ ಸಂಚಾಲಕ ದಾಮೋದರ್ ಶೆಟ್ಟಿ, ಮಹಿಳಾ ವಿಭಾಗದ ಚಂದ್ರಕಲಾ ಶೆಟ್ಟಿ, ರವಿರಾಜ್ ಶೆಟ್ಟಿ, ಕಿಶೋರ್ ಶೆಟ್ಟಿ ಬಪ್ಪನಾಡು, ಕೃಷ್ಣ ಶೆಟ್ಟಿ ಕಾರ್ನಾಡು, ಹರ್ಷರಾಜ್ ಶೆಟ್ಟಿ, ರಘುನಾಥ್ ಶೆಟ್ಟಿ ಕಾರ್ನಾಡು, ಕಿಶೋರ್ ಶೆಟ್ಟಿ ಸುಲೋಟ್ಟು, ರವೀಂದ್ರ ಶೆಟ್ಟಿ ಗುಂಡಾಲು, ಗೀತಾ ಜೆ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿಯ ಸದಸ್ಯ ಜೀವನ್ ಕೆ.ಶೆಟ್ಟಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಮಹೀಮ್ ಹೆಗ್ಡೆ ವಂದಿಸಿದರು.

Pages