ತುಳು ಪಾಡ್ದನ ಸಾಹಿತ್ಯ ಪರಂಪರೆ ಸಂರಕ್ಷಿಸಬೇಕು : ಪುರುಷೋತ್ತಮ ಭಂಡಾರಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳು ಪಾಡ್ದನ ಸಾಹಿತ್ಯ ಪರಂಪರೆ ಸಂರಕ್ಷಿಸಬೇಕು : ಪುರುಷೋತ್ತಮ ಭಂಡಾರಿ

Share This
ಮಂಗಳೂರು: ತುಳುನಾಡಿನ ಪ್ರಾಚೀನ ಪರಂಪರೆಯನ್ನು ಪ್ರಸಾರ, ಪ್ರಚಾರ ನೀಡಿರುವ ಪಾಡ್ದನ ಸಾಹಿತ್ಯ ಮುಂದಿನ ತಲೆಮಾರಿಗೂ ತಲುಪಬೇಕು, ಇದನ್ನು ಸಂರಕ್ಷಿಸುವ ಕಾರ್ಯ ಪ್ರಶಂಸನೀಯ, ತುಳು ಅಕಾಡೆಮಿಯ ಜವಬ್ದಾರಿಯನ್ನು ಇತರ ಅಕಾಡೆಮಿಯೂ ನಡೆಸಿದಲ್ಲಿ ಈ ನಾಡಿನ ಭವ್ಯ ಪರಂಪರೆಯನ್ನು ಭವಿಷ್ಯದಲ್ಲಿಯೂ ಪ್ರಚಲಿತದಲ್ಲಿರಲು ಸಾಧ್ಯವಾಗುತ್ತದೆ ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಹೇಳಿದರು.
ಅವರು ದಕ್ಷಿಣ ಕನ್ನಡ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಂಸ್ಕಾರ ಭಾರತಿ ಮಂಗಳೂರು, ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್‌ನ ಜಂಟಿ ಸಂಯೋಜನೆಯಲ್ಲಿ ನಡೆದ ಪಾಡ್ದನ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆಯನ್ನು ವಹಿಸಿ, ತುಳು ಅಕಾಡೆಮಿಯು ಬೆಳ್ಳಿ ವರ್ಷದ ಸಂಭ್ರಮದಲ್ಲಿದ್ದು, ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಅಕಾಡೆಮಿಯ ಮೂಲಕ ಪಾಡ್ದನಕ್ಕೆ ವಿಶೇಷ ಆದ್ಯತೆ ನೀಡಿ ಅದರ ದಾಖಲೀಕರಣ ಮಾಡುವುದರಿಂದ ಇದರ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ಹೆಚ್ಚಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಪಾಡ್ದನ ಕಮ್ಮಟದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಅನುದಾನದಲ್ಲಿ ಕಾರ್ಯಾಗಾರ ಸಂಪನ್ನಗೊಂಡಿತು. ಸಂಸ್ಕಾರ ಭಾರತಿ ಇದರ ಪ್ರಾಂತ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪಡುಪೆರಾರ ಗ್ರಾಮ ಪಂಚಾಯತಿನ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪುರುಷೋತ್ತಮ ಗೋಳಿಪಲ್ಕೆ ಸ್ವಾಗತಿಸಿದರು. ಕಾರ್ತಿಕ್ ಪ್ರಾರ್ಥಿಸಿದರು. ಗೋಪಾಲ ಗೋಳಿಪಲ್ಕೆ ವಂದಿಸಿದರು.

Pages