ನಮ್ಮ ನಿಮ್ಮೆಲ್ಲರ ಉಳಿವಿಗೆ ಪಶ್ಚಿಮ ಘಟ್ಟಗಳೇ ಕಾರಣ : ಉದಯ ಕುಮಾರ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಮ್ಮ ನಿಮ್ಮೆಲ್ಲರ ಉಳಿವಿಗೆ ಪಶ್ಚಿಮ ಘಟ್ಟಗಳೇ ಕಾರಣ : ಉದಯ ಕುಮಾರ್ ಶೆಟ್ಟಿ

Share This
ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಎರಡನೇ ದಿನದಂದು ಸಂಜೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಪಶ್ಚಿಮ ಘಟ್ಟಗಳು ಮತ್ತು ಜೀವ ವೈವಿಧ್ಯ ಕುರಿತು ವಿಚಾರಗೋಷ್ಠಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪಿಲಿಕುಲ ನಿಸರ್ಗಧಾಮದ ವಿಜ್ಞಾನಿ ಉದಯ ಕುಮಾರ್ ಶೆಟ್ಟಿ ಅವರು ನಾಡು ಉಳಿಯಲು ಕಾಡು ಮೂಲ ಕಾರಣ ಎಂದು ಒತ್ತಿ ಹೇಳಿದರು.

ಪಶ್ಚಿಮ ಘಟ್ಟಗಳು ಕಾಡು ಮತ್ತು ನಾಡಿನ ಜೀವ ವೈವಿಧ್ಯ ಉಳಿವಿಗೆ ಪ್ರಮುಖ ಕಾರಣ. ನದಿ, ಸಮುದ್ರ ನೀರ ಸೆಲೆಗೆ ಪಶ್ಚಿಮ ಘಟ್ಟಗಳೇ ಮೂಲ. ಪಶ್ಚಿಮ ಘಟ್ಟಗಳು ಬರಿದಾದರೆ ನಾವು ಬದುಕುವುದು ಕಷ್ಟ. ಪಶ್ಚಿಮ ಘಟ್ಟದಲ್ಲಿ ಅಳಿವಿನಂಚಿನ ಗಿಡಮರಗಳು ಇದ್ದು ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಯುವ ಪೀಳಿಗೆಯಿಂದ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ್ರಶಾಂತ್ ರೈ, ಮೋಹನ್ ದಾಸ್, ಜ್ಯೋತಿ ಕುಲಾಲ್ ಉಪಸ್ಥಿತರಿದ್ದರು.

Pages