ಮಾ.13-14: ಬಂಟ್ವಾಳದಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಅಭಿಮಾನಿ ಬಳಗದ "GST ಟ್ರೋಪಿ 2022" ಕ್ರಿಕೆಟ್ ಪಂದ್ಯಾಟ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಾ.13-14: ಬಂಟ್ವಾಳದಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಅಭಿಮಾನಿ ಬಳಗದ "GST ಟ್ರೋಪಿ 2022" ಕ್ರಿಕೆಟ್ ಪಂದ್ಯಾಟ

Share This
ಬಂಟ್ವಾಳ: ಬಂಟರ ಸಂಘ ಮುಂಬಯಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್ ಈಗಾಗಲೇ ಒರ್ವ ಸಮರ್ಥ ಸಂಘಟಕ ರಾಗಿ ಹಾಗೂ ಸಮಾಜ ಸೇವಕರಾಗಿ ಜನಪ್ರಿಯರಾಗಿದ್ದು, ಕೋರೋನಾ ಸಮಯದಲ್ಲಿ ಮುಂಬಯಿ ಮಾತ್ರವಲ್ಲದೆ ನಾಡಿನ ಜನ ಸಾಮಾನ್ಯರಿಗೂ ಲಕ್ಷಾಂತರ ರೂಪಾಯಿಯನ್ನು ಕಡು ಬಡತನದ ಕುಟುಂಬಗಳಿಗೆ ಸಹಾಯವನ್ನು ನೀಡಿರುವರು. ಅದಲ್ಲದೆ ಕಳೆದ ಸುಮಾರು ಎರಡು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನಲ್ಲಿ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದ್ದು ಅದೆಷ್ಟೋ ನಿರಾಶ್ರಿತರಿಗೆ ಸಹಾಯ ಮಾಡಿದ ಮುಂಬಯಿಯ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್ ಇವರ ಸಮಾಜ ಸೇವೆಯನ್ನು ಗುರುತಿಸಿ ಇವರ ಅಭಿಮಾನಿಗಳು ಬಂಟ್ವಾಳದಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಅಭಿಮಾನಿ ಬಳಗ ವನ್ನು ಸ್ಥಾಪಿಸಿದ್ದಾರೆ.
ಯುವ ಸಂಘಟಕರು ಸ್ಥಾಪಿಸಿರುವ ಗಿರೀಶ್ ಶೆಟ್ಟಿ ತೆಳ್ಳಾರ್ ಅಭಿಮಾನಿ ಬಳಗ ಬಂಟ್ವಾಳದಿಂದ ಮಾರ್ಚ್ 13 ಮತ್ತು 14 ರಂದು ಕರ್ಬೆಟ್ಟು ಅಪ್ಪೆಯ ಮಜಲು ಕ್ರೀಡಾಂಗಣದಲ್ಲಿ ಜಿ ಎಸ್ ಟಿ ಗಿರೀಶ್ ಶೆಟ್ಟಿ ತೆಲ್ಲಾರ್ ಟ್ರೋಫಿ ನಡೆಯಲಿದೆ.

ಅದ್ದೂರಿಯಾಗಿ ನಡೆಯಲಿರುವ ಜಿ.ಎಸ್.ಟಿ. ಟ್ರೋಪಿ 2022, ಎನ್ ಪಿ ಎಲ್ ಕ್ರಿಕೆಟ್ ಪಂದ್ಯಾಟದಲ್ಲಿ 8 ತಂಡಗಳು ಮತ್ತು 8 ಮಾಲಕರ ಜಿ.ಎಸ್.ಟಿ. (ಗಿರೀಶ್ ಶೆಟ್ಟಿ ತೆಲ್ಲಾರ್) ಟ್ರೋಪಿ 2022, ಎನ್ ಪಿ ಎಲ್ ಕ್ರಿಕೆಟ್ ಪಂದ್ಯಾಟ ಕ್ಯಾನ್ಸರ್ ನಿಂದ ಬಳಲುತಿರುವ ತಾಯಿ ತಂದೆಯನ್ನು ಕಳೆದುಕೊಂಡು ಅತೀ ಬಡತನದಿಂದ ಜೀವನ ಸಾಗಿಸುವ ಕುಟುಂಬದಲ್ಲಿ ಇರುವ ಹೆಣ್ಣು ಮಗಳ ಮದುವೆಗೆ ಹಣ ಸಹಾಯದ ಮುಖ್ಯ ಉದ್ದೇಶವಾಗಿದೆ. ಕಡುಬಡತನದ ಕುಟುಂಬಕ್ಕೆ NPL ಪ್ರಿಮಿಯರ್ ಲಿಗ್ ಕ್ರಿಕೆಟ್ ಮೂಲಕ ಸಹಾಯ ಮಾಡಲು ಮುಂದಾಗಿದೆ ಗಿರೀಶ್ ಶೆಟ್ಟಿ ಅಭಿಮಾನಿ ಬಲಗ ಬಂಟ್ವಾಲ ನರಿಕೊಂಬು.

ನಾಡಿನ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಗಿರೀಶ್ ಶೆಟ್ಟಿ ತೆಳ್ಳಾರ್ ಅಭಿಮಾನಿ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ವಿನಂತಿಸಿದ್ದಾರೆ.

Pages