ಮುಂಬಯಿ : ಇಲ್ಲಿನ ಕಾರ್ಯಕ್ರಮವನ್ನು ನೋಡಿದಾಗ ನನಗೆ ನಾನೇನೋ ಊರಲ್ಲಿ ಇದ್ದೇನೆ ಅಂತ ತಿಳಿದುಕೊಂಡೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ನಮ್ಮ ಸಮಯದಲ್ಲಿ ಇಂತಹ ಸಂಘಟನೆಗಳು ಇರಲಿಲ್ಲ. ತುಳುಕೂಟ ಫೌಂಡೇಶನ್ ಮೂಲಕ ಈಗಿನ ಮಕ್ಕಳಿಗೆ ಉತ್ತಮ ಫೌಂಡೇಶನನ್ನು ನೀಡುತ್ತಿದ್ದೀರಿ. ನಮ್ಮ ಭವಿಷ್ಯ ಕೇವಲ ಡಿಗ್ರಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಗೋರೆಗಾಂವ್ ವಿವೇಕ್ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿಜೇತಾ ಎಸ್. ಶೆಟ್ಟಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಾ. 13ರಂದು ನಲಾಸೋಪಾರ ಪಶ್ಚಿಮದ ಗ್ಯಾಲೇಕ್ಷಿ ಸಭಾಗೃಹದಲ್ಲಿ ತುಳು ಕೂಟ ಫೌಂಡೇಶನ್ ನಲಾಸೋಪಾರ ಮಹಿಳಾವಿಭಾಗದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಪದವಿ ಜತೆ ನಮ್ಮ ಸಂಸ್ಕೃತಿ ತಿಳಿದು ಕಾಪಾಡುವುದು ಕೂಡಾ ಮುಖ್ಯ. ನನ್ನ ಯಶಸ್ವಿನ ಹಿಂದೆ ನನ್ನ ತಂದೆ ಹಾಗೂ ಪತಿಯ ಪ್ರೋತ್ಸಾಹವಿದೆ. ಯಾರೇ ಆಗಲಿ ಏನು ಸಾಧನೆಯನ್ನು ಮಾಡಬಹುದು ನಾವು ನಮ್ಮನ್ನು ಯಾವಾಗಲೂ ಕೀಳು ಮಟ್ಟದಲ್ಲಿ ನೋಡುವುದು ಸರಿಯಲ್ಲ. ಮಹಿಳೆಯೊಬ್ಬಳು ಶೈಕ್ಷಣಿಕವಾಗಿ ಶ್ರೀಮಂತವಾದಲ್ಲಿ ಕೇವಲ ಆಕೆಯ ಪರಿವಾರ ಮಾತ್ರವಲ್ಲ ದೇಶವೇ ಶೈಕ್ಷಣಿಕವಾಗಿ ಶ್ರೀಮಂತವಾದಂತೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತುಳು ಕೂಟ ಫೌಂಡೇಶನ್ ನಲಾಸೋಪಾರ ಇದರ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರು ಡಾ| ವಿಜೇತಾ ಎಸ್. ಶೆಟ್ಟಿ ಯಂತವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇಲ್ಲಿನ ಯುವ ಜನಾಂಗಕ್ಕೆ ಪ್ರೇರಣೆಯಾಗಲಿ. ಸ್ಥಳೀಯ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದು ಇದರಿಂದ ಸ್ಥಳೀಯ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ದೊರಕಲಿ. ತುಳು ಕೂಟವು ಇದೀಗ ಕೇವಲ ಐದು ವರ್ಷ ಪೂರೈಸುತ್ತಿದ್ದು ಈ ಅಲ್ಪಾವಧಿಯಲ್ಲಿ ನಮ್ಮ ತುಳುಕೂಟವು ಮಾಡಿದ ಸಾಧನೆ ಅಪಾರ ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಉಪಾಧ್ಯಕ್ಷೆ ಜಯಂತಿ ಉಳ್ಳಾಲ್, ಮಾತನಾಡುತ್ತಾ ಇಷ್ಟು ದೊಡ್ಡ ಸಂಖ್ಯೆಯಲ್ಲಿ ತುಳು ಮಾತನಾಡುತ್ತಿರುವ ಮಹಿಳೆಯರನ್ನು ನೋಡುವಾಗ ನಾವು ಊರಲ್ಲಿ ಇದ್ದ ಅನುಭವವಾಗುತ್ತಿದೆ. ಯಾವುದೇ ಜಾತಿ ಭೇದ ಇಲ್ಲದೆ ಎಲ್ಲಾ ಸಮುದಾಯವನ್ನು ಒಂದೆಡೆ ಸೇರಿಸಿದ ತುಳು ಕೂಟದ ಪ್ರಮುಖರಾದ ಶಶಿಧರ ಶೆಟ್ಟಿ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಎಲ್ಲಾ ಮಹಿಳೆಯಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಗಿದೆ. ಮಹಿಳೆಯರಿಗೆ ಕರುಣೆ ಹಾಗೂ ದುಖ ಬೇಗನೆ ಬರುತ್ತದೆ. ಮಹಿಳೆಯರನ್ನು ಗೌರವಿಸಿ. ತಾಯಿಯ ಪಾದದಲ್ಲಿ ದೇವರು, ದೇವಸ್ಥಾನವಿದೆ ಎಂದ ಅವರು ಮಕ್ಕಳ ಮೇಲೆ ಹೆಚ್ಚಿನ ಭರವಸೆಯನ್ನು ಇಡುವ ಬದಲು ಮಹಿಳೆಯರು ತನ್ನಲ್ಲಿರುವ ಸಂಪತ್ತನ್ನು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಮುಂದಕ್ಕೆ ಪ್ರಯೋಜನಕಾರಿ ಎಂದರು.
ರಜಕ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರವೀಣಾ ಪಿ. ಕುಂದರ್ ಮಾತಾನಾಡಿ, ಅರಸಿನ ಕುಂಕುಮವು ಮಹಿಳೆಯರ ಸೌಭಾಗ್ಯದ ಸಂಕೇತ. ಅರಸಿನ ಕುಂಕುಮವನ್ನು ಅಚರಿಸುದರೊಂದಿಗೆ ನಾವು ಸನಾತನ ಧರ್ಮವನ್ನು ಉಳಿಸೋಣ. ಇಂದು ತೊಟ್ಟಿಲು ತೂಗುವ ಕೈ ದೇಶವನ್ನೇ ಆಳುತ್ತಿದ್ದು ಮಹಿಳೆಯರು ಯಾವುದರಲ್ಲೂ ಹಿಂದಿಲ್ಲ ಎಂದರು.
ತುಳು ಕೂಟ ಫೌಂಡೇಶನ್ ನಲಾಸೋಪಾರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿಯವರು ಮಾತನಾಡುತ್ತಾ ಅರಸಿನ ಕುಂಕುಮ ನಮ್ಮ ಸಂಸ್ಕೃತಿ ಅಲ್ಲದಿದ್ದರೂ ನಮ್ಮೆಲ್ಲರ ಕರ್ಮಭೂಮಿಯಾಗಿರುವ ಮಹಾರಾಷ್ಟ್ರದಲ್ಲಿ ನಡೆದುಕೊಂಡು ಬರುತ್ತಿರುವ ಕಟ್ಟುಕಟ್ಟಳೆ. ಕರ್ಮಭೂಮಿಯಲ್ಲಿ ನಾವು ಕೂಡ ಅದನ್ನು ಆಚರಿಸುತ್ತಿದ್ದೇವೆ. ಹಳದಿ ಕುಂಕುಮದ ಆಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಸೌಭಾಗ್ಯ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಕಾರ್ಯಕ್ರಮವನ್ನು ನಡೆಸಲು ಸಹಕರಿಸಿದ ಮುಖ್ಯವಾಗಿ ಶಶಿಧರ ಶೆಟ್ಟಿ ಮತ್ತು ಶಶಿಕಲಾ ಶೆಟ್ಟಿ ದಂಪತಿ ಹಾಗೂ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಸಾಯಿ-ವಿರಾರ್ ಮಹಾ ನಗರ ಪಾಲಿಕೆಯ ಅಸಿಸ್ಟಂಟ್ ಕಮಿಷನರ್ ರೂಪಾಲಿ ರಾಜೇಂದ್ರ ಶಂಖೆ, ಲೇಖಕಿ ಸುರೇಖಾ ಶೆಟ್ಟಿ ವಸಯಿ, ಕ್ರೀಡಾಪಟು ಕ್ರಿತಿ ತೇಜ್ಪಾಲ್ ಕರ್ಕೇರ ಅವರ ತಂದೆಯವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ತುಳು ಕೂಟ ಫೌಂಡೇಶನ್ ಅಧ್ಯಕ್ಷರಾದ ಶಶಿಧರ ಕೆ ಶೆಟ್ಟಿ, ಎಲ್ಲಾ ಅತಿಥಿಗಳು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು. ಸನ್ಮಾನ ಪತ್ರವನ್ನು ಶೋಭಾ ಸುವರ್ಣ, ಸತ್ಯಭಾಮ ಕರ್ಕೇರ ಮತ್ತು ಮಲ್ಲಿಕಾ ಆರ್ ಪೂಜಾರಿ ವಾಚಿಸಿದರು.
ಕೊರೋನಾ ಸಮಯದಲ್ಲಿ ವಿಶೇಷ ರೀತಿಯಲ್ಲಿ ಸಹಕರಿಸಿದ ತುಳು ಕೂಟ ಫೌಂಡೇಶನ್ ಸದಸ್ಯರಾದ ರತ್ನ ಶೆಟ್ಟಿ, ಕುಶಲ ಶೆಟ್ಟಿ, ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಗೌರವಿಸಿದರು.
ಮನೋರಂಜನೆಯ ಅಂಗವಾಗಿ ವಿವಿಧ ಸಾಂಸ್ಕೃತಿಕಕಾರ್ಯಕ್ರಮ, ಭಜನೆ, ನೃತ್ಯ ಕಾರ್ಯಕ್ರಮ ಮತ್ತು ಮಹಿಳಾ ಸದಸ್ಯರಿಂದ ನಾರಾಯಣ ಶೆಟ್ಟಿ ನಂದಳಿಗೆ ರಚಿಸಿದ, ಚಿತ್ರ ನಟ ಚಂದ್ರಕಾಂತ್ ಸಾಲ್ಯಾನ್ ಸಶಿಹಿತ್ತ್ಲು ನಿರ್ದೇಶನದ "ಮಗಲಾಲ್ ಮರ್ಮಾಲತ್ತ್" ತುಳು ನಾಟಕ ಪ್ರದರ್ಶನವಿತ್ತು.
ವೇದಿಕೆಯಲ್ಲಿ ಉಷಾ ಕರ್ನಿರೆ ಶ್ರೀಧರ ಶೆಟ್ಟಿ, ಮಲ್ಲಿಕಾ ಆರ್ ಪೂಜಾರಿ, ಅರುಣಾ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳೂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತುಳು ಕೂಟ ಫೌಂಡೇಶನ್ ನಲಾಸೋಪಾರದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಯಶೋದಾ ಎಸ್ ಕೋಟ್ಯಾನ್, ಕೋಶಾಧಿಕಾರಿ ನಳಿನಿ ಎಸ್ ಪೂಜಾರಿ, ಕನ್ವೀನರ್ ಜಯಾ ಅಶೋಕ ಶೆಟ್ಟಿ, ಜೊತೆ ಕಾರ್ಯದರ್ಶಿ ಸುರೇಖಾ ಆರ್ ಬಂಗೇರ, ಜೊತೆ ಕೋಶಾಧಿಕಾರಿ ಶೋಭಾ ಆರ್ ಸುವರ್ಣ, ಸಲಹೆಗಾರರಾದ ಶಶಿಕಲಾ ಎಸ್ ಶೆಟ್ಟಿ, ಉಷಾ ಎಸ್ ಶೆಟ್ಟಿ, ಶ್ಯಾಮಲಾ ಡಿ. ಶೆಟ್ಟಿ, ಶಕುಂತಳಾ ವಿ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಅರುಣಾ ಎ. ಶೆಟ್ಟಿ ಹಾಗೂ ತುಳು ಕೂಟ ಫೌಂಡೇಶನ್ ನಲಾಸೋಪಾರದ ಕಾರ್ಯಕಾರಿ ಸಮಿತಿಯ ಪರವಾಗಿ ಗೌರವ ಅಧ್ಯಕ್ಷರುಗಳಾದ ರಮೇಶ್ ವಿ ಶೆಟ್ಟಿ ಕಾಪು, ಓ. ಪಿ. ಪೂಜಾರಿ ಪಾದೆಬೆಟ್ಟು, ಉಪಾಧ್ಯಕ್ಷ ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಎ. ಹೆಗ್ಡೆ, ಗೌರವ ಕೋಶಾಧಿಕಾರಿ ಜಗನ್ನಾಥ್ ಡಿ ಶೆಟ್ಟಿ ಪಲ್ಲಿ, ಜೊತೆ ಕಾರ್ಯದರ್ಶಿ ನಾರ್ಯಾಯಣ ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ರಾಜೇಶ್ ಕರ್ಕೇರ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ದಿ. ಶ್ರೀಮತಿ ಪದ್ಮಾವತಿ ಶೆಟ್ಟಿ ವೇದಿಕೆಯಲ್ಲಿ ನಡೆದ ಈ ಸಭಾ ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿ ಕಣಂಜಾರ್ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಆರ್ ಪೂಜಾರಿಯವರು ವಂದಿಸಿದರು.