ಬಂಟ್ಸ್ ನ್ಯೂಸ್, ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಎರಡನೇ ಬಾರಿ ಸದಸ್ಯರಾಗಿ ಆಯ್ಕೆಯಾದ ನ್ಯಾ.ಎಂ.ದಾಮೋದರ ಶೆಟ್ಟಿಯವರು ಈಗ ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿಯ ಸದಸ್ಯರಾಗಿ ಅಯ್ಕೆಯಾಗಿದ್ದಾರೆ. ಇದು ಕಾಸರಗೋಡು ಜಿಲ್ಲೆಗೆ ತುಂಬ ಮಾನ್ಯತೆ ಕೊಟ್ಟಂತಹ ಸ್ಥಾನವಾಗಿದೆ.
ವೃತ್ತಿಯಲ್ಲಿ ನ್ಯಾಯವಾದಿಯಾಗಿ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಶೆಟ್ಟರು ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿದ್ದ ಇವರು ಕಾಲೇಜು ದಿವಸಗಳಲ್ಲಿ ಯಕ್ಷಗಾನದ ಪ್ರೌಢ ಕಲಾವಿದರಾಗಿ ಗುರಿತಿಸಿಕೊಂಡಿದ್ದಾರೆ. ಉಪ್ಪಳ ದಿ. ಕೃಷ್ಣ ಮಾಸ್ಟರವರಿಂದ ಯಕ್ಷಗಾನದ ನಾಟ್ಯವನ್ನು, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಬೆಳಿಂಜ ವೆಂಕಪ್ಪ ರೈಯವರಿಂದ ಭಾಗವತಿಕೆಯನ್ನು ಹಾಗೂ ಪೆರುವಾಯಿ ನಾರಾಯಣ ಶೆಟ್ಟಿಯವರಿಂದ ಬಣ್ಣಗಾರಿಕೆಯನ್ನು ಕಲಿತರು.
ಮುಮ್ಮೇಳ- ಹಿಮ್ಮೇಳ ಪ್ರಾವೀಣ್ಯತೆಯನ್ನು ಪಡೆದು ರಾವಣ, ಅತಿಕಾಯ, ಅರ್ಜುನ, ದೇವೇಂದ್ರ, ಶುಂಭ, ಕಂಸ, ದಶರಥ, ರಕ್ತಬೀಜ, ಇಂದ್ರಜಿತ್, ಕರ್ಣ ಹೀಗೆ ಹತ್ತು ಹಲಾವರು ವೇಷಗಳಿಗೆ ಜೀವ ತುಂಬಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಹಲವಾರು ಅಭಿಮಾನಿಗಳ ತಂಡವನ್ನೆ ರೂಪಿಸಿಕೊಂಡಿದ್ದರೆ. ಉತ್ತಮವಾದ ವಾಕ್ತಚುರ್ಯವನ್ನು ಹೊಂದಿದ್ದ ಶೆಟ್ಟರು ತಾಳಮದ್ದಳೆಯ ಅರ್ಥದಾರಿಯಾಗಿ ಅತಿಕಾಯ, ಕರ್ಣ, ಭೀಷ್ಮ, ರಕ್ತಬೀಜನ ಪಾತ್ರದಲ್ಲಿ ಮಿಂಚಿ ಕಲಾರಸಿಕರ ಮನಗೆದ್ದಿದ್ದಾರೆ. ಹಲವಾರು ಶಿಷ್ಯವೃಂದದವರನ್ನು ಸಂಪಾದಿಸಿದ್ದಾರೆ.
ಇತಿಹಾಸ ಪ್ರಸಿದ್ಧವಾದ ಮಂಜೇಶ್ವರದ ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಮಾಜಿ ಅದ್ಯಕ್ಷರಾಗಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ರಾಮಕೃಷ್ಣ ವಿದ್ಯಾಲಯದ ಮಾಜಿ ಕಾರ್ಯದರ್ಶಿ, ಬಂಟ್ಸ್ ಮಜಿಬೈಲ್ ಹಾಗೂ ಗೆಳೆಯರ ಬಳಗ (ರಿ)ಬಲ್ಲಂಗುಡೇಲಿನ ಗೌರವ ಮಾರ್ಗದರ್ಶಕರಾಗಿ ಸೇವೆಸಲ್ಲಿಸಿದರೆ. ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತ ಕ್ಷೇತ್ರದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಳೆದ 46 ವರ್ಷಗಳಿಂದ ಯಕ್ಷಗಾನ, ತಾಳಮದ್ದಳೆ ಕೂಟಗಳನ್ನು ಸೇವಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.