ಸುರತ್ಕಲ್: ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಸಭೆಯಲ್ಲಿ 2022 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೈಲಾಸ್ ತಡಂಬೈಲ್ ಅವಿರೋಧವಾಗಿ ಆಯ್ಕೆಗೊಂಡರು.
ಸಂಚಾಲಕರಾಗಿ ಮಹಾಬಲ ಪೂಜಾರಿ ಕಡಂಬೋಡಿ, ಗೌರವಾಧ್ಯಕ್ಷರಾಗಿ ಸುಧಾಕರ ಸುರತ್ಕಲ್, ಉಪಾಧ್ಯಕ್ಷರಾಗಿ ಎಸ್. ಮಹಮ್ಮದ್, ಜಯರಾಮ ಆಳ್ವ, ಜಯ ದೇವಾಡಿಗ, ಸುಕುಮಾರ್ ತಡಂಬೈಲ್ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ರಾಮಚಂದ್ರ ಶೆಟ್ಟಿ, ಕಿರಣ್ ಕುಮಾರ್, ಕೋಶಾಧಿಕಾರಿಯಾಗಿ ಹರೀಶ್ ಎನ್. ಸಾಲ್ಯಾನ್. ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ತಡಂಬೈಲ್, ಕ್ರೀಡಾ ಕಾರ್ಯದರ್ಶಿಯಾಗಿ ಸುನಿಲ್ ಶೆಟ್ಟಿ, ರವಿರಾಜ್ ದೇವಾಡಿಗ ಆಯ್ಕೆಯಾದರು.
'ಅಧ್ಯೆಕ್ಷೆರ್' ನಾಟಕ ಪ್ರದರ್ಶನ: ವೀರ ಕೇಸರಿ (ರಿ) ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ವೀರ ಕೇಸರಿ ಸಂಸ್ಥೆಯಿಂದ ಮಾರಿಪೂಜಾ ಮಹೋತ್ಸವದ ಅಂಗವಾಗಿ ಮಾಚ್೯ 29 ರಂದು ಮಂಗಳವಾರ ಸಂಜೆ 7 ಗಂಟೆಗೆ ಶ್ರೀ ಮಹಮ್ಮಾಯೀ ದೇವಸ್ಥಾನದ ವಠಾರದಲ್ಲಿ ಕಾಪು ರಂಗತರಂಗ ಕಲಾವಿದರ ತಂಡದಿಂದ ಪ್ರಸಣ್ಣ ಶೆಟ್ಟಿ ಬೈಲೂರು ರಚನೆಯ ಶರತ್ ಉಚ್ಚಿಲ ನಿರ್ದೇಶನದಲ್ಲಿ "ಅಧ್ಯೆಕ್ಷೆರ್". ನಾಟಕ ಪ್ರದರ್ಶನ ಗೊಳ್ಳಲಿದೆ.