ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖ : ಸುಜಾತ ಆರ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖ : ಸುಜಾತ ಆರ್ ಶೆಟ್ಟಿ

Share This
ಮುಂಬಯಿ : ಇಂದು ಹಳದಿ ಕುಂಕುಮ ಮಹಿಳಾ ದಿನಾಚರಣೆ ಸಮಾರಂಭವು ನಡೆಯುತ್ತಿದ್ದು ಮಹಿಳೆಯರನ್ನು ಸಮಾಜದಲ್ಲಿ ಬಲಿಷ್ಠಗೊಳಿಸುವ ಉದ್ದೇಶ ನಮ್ಮದಾಗಿದೆ. ಸಮಾಜ ನಿರ್ಮಾಣದಲ್ಲಿ ಮಹಿಳೆಯರು ಪ್ರಮುಖ ಪಾತ್ರ ಎನ್ನುದರಲ್ಲಿ ಸಂದೇಹವಿಲ್ಲ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷರಾದ ಸುಜಾತ ಆರ್ ಶೆಟ್ಟಿ ನುಡಿದರು.
ಅವರು ಮಾ. 11ರಂದು ಸಾಂತಾಕ್ರೂಜ್ ಪೂರ್ವ ಪೇಜಾವರ ಮಠದಲ್ಲಿ ಜರಗಿದ ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ಹಳದಿ ಕುಂಕುಮ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಂಘ ಸಾಂತಾಕ್ರೂಜ್ ಸರ್ವರ ಬೆಂಬಲದಿಂದ ಅಧ್ಯಕ್ಷ ಸ್ಥಾನದ ದೊಡ್ಡ ಜವಾಬ್ಧಾರಿಯನ್ನು ನೀವೆಲ್ಲರೂ ನೀಡಿದ್ದು, ಈ ಜವಾಬ್ಧಾರಿಯನ್ನು ನಿರ್ವಹಿಸಲು ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಶ್ರಮ ಪಟ್ಟು ದುಡಿಯುವೆನು. ಸಂಘದ ಅಭಿವೃದ್ದಿಗಾಗಿ ನನ್ನಿಂದ ಸಾಧ್ಯವಾದ ಪ್ರಯತ್ನವನ್ನು ಮಾಡುವೆನು. ಎಂದಿನಂತೆ ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುವೆನು ಎಂದರು. 

ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಮಾತನಾಡಿ, ನಮ್ಮೆಲ್ಲರ ಆತ್ಮೀಯರಾಗಿದ್ದ ಸಮಾಜ ಕಟ್ಟುವಲ್ಲಿ ತಮ್ಮ ವಹಿಸಿದ್ದ ಸುಜಾತ ಶೆಟ್ಟಿ ಮಹಿಳೆಯೊಬ್ಬರು ಕನ್ನಡ ಸಂಘ ಸಾಂತಾಕ್ರೂಜ್ ನ ಅಧ್ಯಕ್ಷರಾಗಿರುವುದು ಸಂತೋಷದ ಸಂಗತಿ. ಇದು ಅವರ ಸಾಮಾಜಿಕ ಸೇವೆಗೆ ನೀಡಿದ ಗೌರವಾಗಿದೆ. ಇಲ್ಲಿ ಇಂದು ಭಜನೆ ಕಾರ್ಯಕ್ರಮವಿದ್ದು ಭಜನೆಯಿದ್ದಲ್ಲಿ ದೇವರು ಇದ್ದಾರೆ. ಭಜನೆಯು ಆರೋಗ್ಯಕ್ಕೆ ಓಳ್ಳೆಯದು. ಹಳದಿ ವಿಷ್ಣುವಿನ ಸಂಕೇತ ಹಾಗೂ ಕುಂಕುಮ ಲಕ್ಷಿಯ ಸಂಕೇತ. ಯವುದೇ ಉತ್ತಮ ಕೆಲಸಕ್ಕೆ ನಮಗೆ ಹಳದಿ ಕುಂಕುಮ ಬೇಕು ಎಂದರು.
ಮುಖ್ಯ ಅತಿಥಿ ದೀಪ್ತಿ ಸುವರ್ಣ ಮಾತನಾಡಿ, ಹಳದಿ ಕುಂಕುಮ ಕಾರ್ಯಕ್ರಮದ ಬಗ್ಗೆ ನನಗೆ ಅರಿತಿಲ್ಲ, ಆದರೆ ಹಳದಿ ಮತ್ತು ಕುಂಕುಮದ ಬಗ್ಗೆ ಮಾತ್ರ ನನಗೆ ತಿಳಿದಿತ್ತು ಇಂದಿನ ಕಾಲಘಟ್ಟದಲ್ಲಿ ಹಳದಿ ಕುಂಕುಮ ಕಾರ್ಯಕ್ರಮಗಳ ಅಗತ್ಯಅಗತ್ಯ. ಪ್ರತಿ ಮಹಿಳೆಯು ತನ್ನ ಆರೋಗ್ಯದ ಬಗ್ಗೆ ಗಮನಹರಿಸಿ, ಎಂದು ನುಡಿದರು. 

ಮತ್ತೋರ್ವ ಮುಖ್ಯ ಅತಿಥಿ ಕ್ಷಮ ಕಾಪು ನನ್ನ ಅಭಿಪ್ರಾಯವನ್ನು ತಿಳಿಸಿ, ಕೊರೋನಾ ಎಂಬ ಮಹಾಮಾರಿ ನಮ್ಮೆಲ್ಲರನ್ನು ದೂರ ದೂರ ಮಾಡಿದೆ ಆದರೆ ಸಂಘ-ಸಂಸ್ಥೆಗಳು ಮಾಡುವ ಇಂತಹ ಕಾರ್ಯಕ್ರಮಗಳು ವಿಶ್ವ ಈಗ ನಮ್ಮನ್ನು ಮತ್ತೆ ಒಗ್ಗಟ್ಟು ಮಾಡುತ್ತಿದೆ ನಾವೆಲ್ಲರೂ ಮಕ್ಕಳನ್ನು ಕಾರ್ಯಕ್ರಮಗಳಿಗೆ ಕರೆತರಬೇಕು ಮತ್ತು ಅವರಿಗೆ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರವನ್ನು ತಿಳಿ ಹೇಳಬೇಕಾಗುತ್ತದೆ, ಮದುವೆ ಮೊದಲು ಹಳದಿ ಮುಖ್ಯವಾಗಿರುತ್ತದೆ, ಬಳಿಕ ಕುಂಕುಮ ಅವಳಿಗೆ ಪ್ರಾಮುಖ್ಯ ಶುಭಕಾರ್ಯಗಳಿಗೂ ಹಳದಿ ಕುಂಕುಮ ಮುಖ್ಯವಾಗಿರುತ್ತದೆ ಎಂದರು.

ಸಂಘದ ಗೌರವ ಅಧ್ಯಕ್ಷರಾದ ಎಲ್. ವಿ. ಅಮೀನ್, ಸಂಘದ ಅಧ್ಯಕ್ಷೆ ಸುಜಾತ ಆರ್ ಶೆಟ್ಟಿ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಕಾರ್ಯಕ್ರಮವನ್ನು ದೀಪ ಬೆಳಗಿಸಿದರು. ವೇದಿಕೆಯಲ್ಲಿ ಬಂಟರ ಸಂಘದ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ರತ್ನ ಪ್ರಭಾಕರ್ ಶೆಟ್ಟಿ ಹಾಗೂ ಪ್ರಮೋದ ಶೆಟ್ಟಿ ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಷನ್ ಉಪ ಅಧ್ಯಕ್ಷೆ ಜಯಂತಿ ಉಲ್ಲಾಲ್ ತನ್ನ ಅಭಿಪ್ರಾಯವನ್ನು ತಿಳಿಸಿದರು.

ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ, ವನಿತಾ ವೈ ನೊಂಡಾ ಪ್ರಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಲಕ್ಷ್ಮಿ ಎಂ ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾ ಎಮ್ ಪೂಜಾರಿ ಮತ್ತು ಸುಮಿತ್ರ ದೇವಾಡಿಗ ಪ್ರಾರ್ಥನೆ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಭುಜಂಗ ಆರ್. ಶೆಟ್ಟಿ ಗೌ. ಪ್ರಧಾನ ಕಾರ್ಯದರ್ಶಿ ಜಯ ವಿ. ಪೂಜಾರಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಕೋಟ್ಯಾನ್, ಕೋಶಾಧಿಕಾರಿ ಸುಧಾಕರ ಉಚ್ಚಿಲ್, ಜೊತೆ ಕೋಶಾಧಿಕಾರಿ ಬಿ. ರವೀಂದ್ರ ಅಮೀನ್, ಸದಸ್ಯರಾದ, ಶಕಿಲಾ ಪದ್ಮನಾಭ ಶೆಟ್ಟಿ, ಶಾಲಿನಿ ಜಿ ಶೆಟ್ಟಿ, ಪ್ರಕಾಶ್ ಸಿ ಶೆಟ್ಟಿ, ಸುಮಾ ಎಂ ಪೂಜಾರಿ, ಲಿಂಗಪ್ಪ ಬಿ ಅಮೀನ್, ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷರಾದ ವಿಜಯ ಕುಮಾರ್ ಕೆ. ಕೋಟ್ಯಾನ್, ಕಾರ್ಯದರ್ಶಿ ಶಕೀಲಾ ಪದ್ಮನಾಭ ಶೆಟ್ಟಿ, ವಿಶೇಷ ಅಹ್ವಾನಿತರಾದ , ಸಂಪಾ ಎಲ್, ಶಶಿ ಶೆಟ್ಟಿ, ಲೀಲಾ ಸಾಲ್ಯಾನ್, ಶಾಲಿನಿ ಶೆಟ್ಟಿ, ಸುಜಾತಾ ಎಸ್ ಉಚ್ಚಿಲ್ ಹಾಗೂ ದಿನೇಶ್ ಅಮೀನ್ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು.

Pages