ಮಂಗಳೂರು : 'ಒಂದು ಮೊಟ್ಟೆಯ ಕಥೆ' ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಪ್ರಿಕ್ಸ್ ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್ ಸಹಭಾಗಿತ್ವದಲ್ಲಿ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ತುಳು ಚಿತ್ರ ನಿರ್ಮಾಣಗೊಂಡಿದ್ದು, ಮೇ 20 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ಈ ಚಿತ್ರವು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು, ಚಿತ್ರದ ಟೀಸರ್ ಕೆಲವೇ ದಿನಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ತುಳು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಚಿತ್ರ ತಂಡವು ಕಟೀಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಚಿತ್ರದ ತುಳು ಗೀತೆ ಟೈಟಲ್ ಟ್ರ್ಯಾಕ್ ಬಿಡುಗಡೆಗೊಳಿಸಿತ್ತು. ಅದ್ದೂರಿಯಾಗಿ ಮೂಡಿಬಂದ ಚಿತ್ರದ ಗೀತೆಯು ಕರಾವಳಿಯಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತುಳು ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಚಿತ್ರದಲ್ಲಿ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಕಥಾ ಹಂದರವನ್ನು ಹೊಂದಿದ್ದು, ನೈಜತೆಗೆ ಒತ್ತುಕೊಟ್ಟು ಸುಂದರವಾಗಿ ಸೆರೆಹಿಡಿಯಲಾಗಿದೆ. ಕೌಟುಂಬಿಕ ಮನೋರಂಜನೆಯ ಜತೆಗೆ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಈ ಚಿತ್ರವನ್ನು ಯುವನಟ ರಾಹುಲ್ ಅಮೀನ್ ನಿರ್ದೇಶಿಸಿದ್ದು, ಆನಂದ್ ಎನ್ ಕುಂಪಲ ನಿರ್ಮಾಪಕರಾಗಿದ್ದಾರೆ.
ಸಿನೆಮಾದ ಕಥೆಯನ್ನು ವಿನೀತ್ ಕುಮಾರ್ ಹಾಗೂ ಸಂಭಾಷನೆಯನ್ನು ಗಿರಿಗಿಟ್ ಚಿತ್ರ ಖ್ಯಾತಿಯ ಪ್ರಸನ್ನ ಶೆಟ್ಪಿ ಬೈಲೂರು ಬರೆದಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಡ್ಡಾಯಿ ಚಿತ್ರ ಖ್ಯಾತಿಯ ಕ್ಯಾಮರಾಮೆನ್ ವಿಷ್ಣುಪ್ರಸಾದ್ ಅವರು ಚಿತ್ರೀಕರಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಸೃಜನ್ ಕುಮಾರ್ ತೋನ್ಸೆ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕಥೆಯನ್ನು ವಿನೀತ್ ಕುಮಾರ್ ಹಾಗೂ ರಾಹುಲ್ ಅಮೀನ್ ಬರೆದಿದ್ದಾರೆ.
ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ (ಹೊಸ ಪರಿಚಯ) ಯಶ ಶಿವಕುಮಾರ್ ಹಾಗೂ ನಾಯಕಿ ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮರ್ವಿನ್ ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ (ಚಿಂಪು) ಹಾಗೂ ಇನ್ನಿತರ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿ ಅಶೋಕ್ ಕುಮಾರ್, ಸುಹಾನ್ ಪ್ರಸಾದ್ ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗ, ಸೀತಾರಾಮ ಶೆಟ್ಟಿ ಇವರು ಸಹ ನಿರ್ಮಾಪಕರಾಗಿದ್ದಾರೆ.