ಸುರತ್ಕಲ್ : ಮಂಗಳೂರು, ಮಣಿಪಾಲಕ್ಕೆ ಮಾತ್ರ ಸೀಮಿತವಾಗಿದ್ದ ಮಲ್ಟಿಫ್ಲೆಕ್ಸ್ ಸಿನಿಮಾ ಥಿಯೇಟರ್ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂರು ಸಿನಿಮಾ ಹಾಲ್ ಗಳೊಂದಿಗೆ ಮಾಚ್೯ 25 ಶುಕ್ರವಾರದಿಂದ ಸುರತ್ಕಲ್ ಹೃದಯಭಾಗದಲ್ಲಿರುವ ಅಭಿಷ್ ಮಾಲ್ ನಲ್ಲಿ ಶುಭಾರಂಭಗೊಳ್ಳಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾಲಕ ಶಶಿಧರ್ ಕೋಡಿಕಲ್ ಅವರು, ಸುರತ್ಕಲ್, ಪಡುಬಿದ್ರೆ, ಮೂಲ್ಕಿ, ಬಜಪೆ ಕಾಟಿಪಳ್ಳ ಕೃಷ್ಣಾಪುರ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಜನರಿಗೆ ಮಲ್ಟಿ ಫ್ಲೆಕ್ಸ್ ನಲ್ಲಿ ಕೂತು ಕುಟುಂಬ ಸಮೇತ ಸಿನಿಮಾ ನೋಡುವ ಕನಸನ್ನು ಸುರತ್ಕಲ್ ಸಿನಿ ಗ್ಯಾಲಕ್ಸಿ ಚಿತ್ರಮಂದಿರ ನನಸು ಮಾಡಲಿದೆ.
ಸಿನಿಗ್ಯಾಲಕ್ಸಿಯಲ್ಲಿ ಹವಾನಿಯಂತ್ರಿತ ಮೂರು ಪರದೆಗಳಿವೆ. ಉತ್ತಮ ತಂತ್ರಜ್ಞಾನ, ಸೌಂಡ್, ವಿಡಿಯೋ ಗುಣಮಟ್ಟ ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ಮೂರು ಪ್ರತ್ಯೇಕ ಸಿನಿಮಾ ಹಾಲ್ ಗಳನ್ನು ನಿರ್ಮಿಸಿದ್ದು ಒಟ್ಟು 417 ಆಸನ ಸಾಮರ್ಥ್ಯ ಹೊಂದಿದೆ ಎಂದು ಶಶಿಧರ್ ಕೋಡಿಕಲ್ ಹೇಳಿದರು.
ಯು ಎಫ್ ಒ ತಂತ್ರಜ್ಞಾನದೊಂದಿಗೆ ಸಿನಿಮಾ ಹಾಲ್ ತಯಾರಾಗಿದ್ದು ರಾಕರ್, ಗೋಲ್ಡ್ ಸೋಫಾ ಸೀಟ್ಸ್, ಕುಟುಂಬಕ್ಕಾಗಿ ಖಾಸಗಿ ಕ್ಲಬ್ ಕ್ಲಾಸ್ ಸೀಟ್ಸ್ ಮಾತ್ರವಲ್ಲದೆ ಲೈವ್ ಕಿಚನ್ ಕೂಡಾ ಒಳಗೊಂಡಿದೆ. ಗ್ಯಾಲಕ್ಸಿ ಎಂಟರ್ಟೈನ್ಮೆಂಟ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಚಿತ್ರಪ್ರೇಮಿಗಳಿಗೆ ಕಡಿಮೆ ಬಜೆಟ್ ನಲ್ಲಿ ಸಿನಿಮಾ ತೋರಿಸಲು ಮುಂದಾಗಿದ್ದು ಹಲವಾರು ಆಫರ್'ಗಳು ಸಿನಿಮಾ ಟಿಕೆಟ್ ಹಾಗೂ ಫುಡ್ ಕೋರ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರೊಜೆಕ್ಟ್ ಹೆಡ್ ಸುದರ್ಶನ ಕೋಟೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ಪ್ರಜ್ವಲಾ ಶಶಿಧರ್, ರೇಣುಕಾ, ವಿದ್ಯಾ, ಸಂಸ್ಥೆಯ ಮೇಲ್ವಿಚಾರಕರಾದ ದೀಪಕ್, ಗಂಗಾಧರ್ , ಉಪಸ್ಥಿತರಿದ್ದರು.
ಮಾಚ್೯25 ರಿಂದ ಚಿತ್ರಮಂದಿರ ಸಾರ್ವಜನಿಕರಿಗೆ ಲಭ್ಯವಿದ್ದು ದಿನದಲ್ಲಿ ಒಟ್ಟು 15 ಪ್ರದರ್ಶನಗಳಿವೆ. ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಕೋಸ್ಟಲ್ ವುಡ್ ನ ತಾರೆಯರಿಂದ ಸಿನಿಗ್ಯಾಲಕ್ಸಿ ಚಿತ್ರಮಂದಿರ ಉದ್ಘಾಟನೆ ಗೊಳ್ಳಲಿದೆ.