ಸಯನ ಗೋಕುಲಕೃಷ್ಣ ಮಂದಿರದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಯನ ಗೋಕುಲಕೃಷ್ಣ ಮಂದಿರದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Share This
ಮುಂಬೈ : ಸಯನ ಗೋಕುಲಕೃಷ್ಣ ಭವ್ಯ ಸಭಾಂಗಣದಲ್ಲಿ ಶ್ರೀಕೃಷ್ಣ ಮಂದಿರವನ್ನು ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಕೃಷ್ಣ ಪರಮಾತ್ಮನ ದೇಗುಲದ ಪುನರ್ ನಿರ್ಮಾಣ ಕಾರ್ಯವು ಪ್ರಸ್ತುತ ಅಧ್ಯಕ್ಷರಾಗಿರುವ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಡಾ ಸುರೇಶ್ ರಾವ್ ಇವರ ನೇತೃತ್ವದಲ್ಲಿ ಆರಂಭಗೊಂಡಿದ್ದು, ಇದೇ ಬರುವ ಮೇ8 ರಿಂದ 15ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಅತೀ ವಿಜ್ರಂಭಣೆಯಿಂದ ಜರುಗಲಿದೆ.
ಬ್ರಹ್ಮಕಲಶೋತ್ಸವದ ಸಂದರ್ಭ ಶ್ರೀ ದೇವರ ಪ್ರಸಾದ ರೂಪವಾಗಿ ಜರುಗುವ ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಮುಂಬಯಿಯ ಸರ್ವ ತುಳು ಕನ್ನಡಿಗ ಜಾತೀಯ ಹಾಗೂ ಜಾತ್ಯಾತೀತ ಸಂಘಗಳ ಮತ್ತು ಎಲ್ಲಾ ಧಾರ್ಮಿಕ ಕ್ಷೇತ್ರಗಳ ಸಹಕಾರದಲ್ಲಿ ಹೊರೆಕಾಣಿಕೆಯನ್ನು ಏರ್ಪಡಿಸಲಾಗಿದ್ದು ಇದರ ಪೂರ್ವಭಾವಿ ಸಭೆಯು ಬಿ ಎಸ್ ಕೆ ಬಿ ಮುಂಬಯಿ ಅಧ್ಯಕ್ಷ ಡಾ ಸುರೇಶ್ ರಾವ್ ಅವರ ಅಧ್ಯಕ್ಷತೆಯಲ್ಲಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮತ್ತು ತುಳುಕೂಟ ಫೌಂಡೇಶನ್ ನಾಲಾಸೋಪಾರ ಇದರ ಅಧ್ಯಕ್ಷರಾದ ಶಶಿಧರ ಕೆ ಶೆಟ್ಟಿ ಇನ್ನಂಜೆಯವರ ನೇತೃತ್ವದಲ್ಲಿ ಮುಂಬಯಿ ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಿಂಗ್ಸ್ ಹೋಟೆಲಿನಲ್ಲಿ ಮಾರ್ಚ್ 18ರಂದು ಜರುಗಿತು.

ಬಿ. ಎಸ್. ಕೆ.ಬಿ ಅಧ್ಯಕ್ಷರಾದ ಡಾ ಸುರೇಶ್ ರಾವ್ ಹಾಗೂ ಕೊಡುಗೈದಾನಿ ಅಶೋಕ್ ಶೆಟ್ಟಿ ಪೆರ್ಮುದೆಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರನ್ನು ಮುಂಬಯಿಯ ಸರ್ವ ತುಳುಕನ್ನಡಿಗರ ಪರವಾಗಿ ಹೊರೆಕಾಣಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಡಾ ಸುರೇಶ್ ರಾವ್ ಅವರು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವಿವರ ನೀಡುತ್ತಾ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲು ಮುಂಬಯಿಯ ಸರ್ವ ತುಳುಕನ್ನಡಿಗರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾತನಾಡಿ ತುಳು-ಕನ್ನಡಿಗರ ಗೌರವದ ಜ್ಯೋತಕ ವಾಗಲಿರುವ ಗೋಕುಲ ಭವ್ಯ ಮಂದಿರ ಇದರ ಬ್ರಹ್ಮಕಲಶೋತ್ಸವ ದಲ್ಲಿ ಸಮಸ್ತ ತುಳು-ಕನ್ನಡಿಗರು ಪಾಲ್ಗೊಳ್ಳುಬೇಕು. ಬ್ರಹ್ಮಕಲಶ ಅಭೂತಪೂರ್ವ ನಡೆಯುವಲ್ಲಿ ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜೀವದಾನಿ ಯಕ್ಷಕಲಾ ವೇದಿಕೆ ವಸಯಿ ಇದರ ಅಧ್ಯಕ್ಷ ಮಂಜುನಾಥ್ ಎನ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ನಾಲಾಸೋಪಾರ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, ಅಶೋಕ್ ಇಂಡಸ್ಟ್ರೀಸ್ ವಸಯಿ ಇದರ ಆಡಳಿತ ನಿರ್ದೇಶಕ ಅಶೋಕ್ ಶೆಟ್ಟಿ ಪೆರ್ಮುದೆ, ಫ್ರೆಂಡ್ಸ್ ಸರ್ಕಲ್ ಕಣಂಜಾರು ಇದರ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಹೆಗ್ಡೆ ಅಡಂದಾಲು, ತುಳುಕೂಟ ಫೌಂಡೇಶನ್ ನಾಲಾಸೋಪಾರದ ಕೋಶಾಧಿಕಾರಿ ಜಗನ್ನಾಥ್ ಶೆಟ್ಟಿ ಪಳ್ಳಿ, ಬಂಟರ ಸಂಘ ಮುಂಬಯಿ ವಸಯಿ ಡಹಣು ಪ್ರಾದೇಶಿಕ ಸಮಿತಿಯ ಸಾಂಸ್ಕೃತಿಕ ವಿಭಾಗ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ ನೀರೆ, ಬಿಲ್ಲವ ಸಮಾಜದ ಆನಂದ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು ಸಲಹೆ ಸೂಚನೆಗಳನ್ನು ನೀಡಿದರು.

Pages