ಶಕ್ತಿನಗರ ಶಕ್ತಿ ವಸತಿ ಶಾಲೆ : ಶಕ್ತಿ ಕ್ಯಾನ್ ಕ್ರಿಯೇಟ್ - 2022 - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಕ್ತಿನಗರ ಶಕ್ತಿ ವಸತಿ ಶಾಲೆ : ಶಕ್ತಿ ಕ್ಯಾನ್ ಕ್ರಿಯೇಟ್ - 2022

Share This
ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ 'ಶಕ್ತಿ ಕ್ಯಾನ್ ಕ್ರಿಯೇಟ್' ಎಂಬ ಶೀರ್ಷಿಕೆಯಲ್ಲಿ ಈಜು ಶಿಬಿರ, ಬೇಸಿಗೆ ಶಿಬಿರ ಹಾಗೂ ಕ್ರಿಕೇಟ್ ಶಿಬಿರವನ್ನು ಏಪ್ರಿಲ್ 01 ರಿಂದ ಏಪ್ರಿಲ್ 30ರ ತನಕ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ.
ಈಜು ಶಿಬಿರ: ಶಕ್ತಿ ವಸತಿ ಶಾಲೆಯ ಈಜುಕೊಳದಲ್ಲಿ ಏಪ್ರಿಲ್ 01 ರಿಂದ ಏಪ್ರಿಲ್ 21ರ ತನಕ ಸುಮಾರು 20 ದಿನಗಳ ವರೆಗೆ ಈಜು ಶಿಬಿರ ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ಮೂರು ವರ್ಷಗಳ ಮೇಲ್ಪಟ್ಟ ಬಾಲಕ, ಬಾಲಕೀಯರು, ಗಂಡಸರು ಹಾಗೂ ಹೆಂಗಸರಿಗೆ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಶುಲ್ಕ 2800/- ನಿಗದಿಪಡಿಸಲಾಗಿದೆ. ಈ ಶಿಬಿರವನ್ನು ಮಂಗಳಾ ಈಜು ತರಬೇತುದಾರರು ನಡೆಸಿಕೊಡಲಿದ್ದಾರೆ. ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯ ಈಜು ತರಬೇತುದಾರರಾದ ಶ್ರೀ ರಾಜೇಶ್ ಖಾರ್ವಿ ಇರುತ್ತಾರೆ. ಇವರನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ: 9980437225.

ಬೇಸಿಗೆ ಶಿಬಿರ: ಶಕ್ತಿ ವಸತಿ ಶಾಲೆಯಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 23ರ ತನಕ ಮಂಗಳೂರಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಎಲ್.ಕೆ.ಜಿ ಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದ ಶುಲ್ಕ ರೂ 3000/- ನಿಗದಿಪಡಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯುತ್ತದೆ. ಊಟ, ತಿಂಡಿ ಮತ್ತು ವಾಹನ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.

ಈ ಶಿಬಿರದಲ್ಲಿ ಯೋಗ, ಚಿತ್ರಕಲೆ, ಕರಕುಶಲ ಕಲೆ, ವ್ಯಂಗ್ಯ ಚಿತ್ರ, ಮುಖವಾಡ ರಚನೆ, ಫೋಮ್ ಆರ್ಟ್, ವರ್ಲಿ ಆರ್ಟ್, ಕಾವಿ ಕಲೆ, ಗ್ರೀಟಿಂಗ್ ಕಾರ್ಡ್, ಗಾಳಿಪಟ ರಚನೆ, ರಂಗೋಲಿ, ವೇದಗಣಿತ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ, ಭಾಷಣ ಕಲೆ, ಸುಂದರ ಕೈ ಬರಹ, ಪೇಪರ್ ಕಟ್ಟಿಂಗ್, ಲೋಹದ ಉಬ್ಬು ಶಿಲ್ಪ, ಜಾನಪದ ಹಾಡು, ಕುಣಿತ, ಕಿರುನಾಟಕ, ಕಥೆ ಕೇಳು - ಹೇಳು, ವನ - ವನ್ಯಜೀವಿಗಳು, ರೇಡಿಯೊ ಸಾರಂಗ್ ಪ್ರಾತ್ಯಕ್ಷಿಕೆ, ಗಾಳಿಪಟ ಹಾರಿಸುವುದು, ಪ್ರವಾಸ ಇತ್ಯಾದಿ ಚಟುವಟಿಕೆಗಳು ನಡೆಯಲಿದೆ.

ನಾಡಿನ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾಗಿರುವ, ದಯಾ, ಜಾನ ಚಂದ್ರನ್, ವೀಣಾ ಶ್ರೀನಿವಾಸ್, ಸುಧೀರ್ ಕಾವೂರು, ರತ್ನಾವತಿ ಜೆ. ಬೈಕಾಡಿ, ಅರುಣ್ ಕುಮಾರ್ ಕುಳಾಯಿ, ಪ್ರೇಮನಾಥ ಮರ್ಣೆ, ರಚನಾ ಕಾಮತ್, ಮುರಳೀಧರ್ ಕಾಮತ್, ನಾದಶ್ರೀ, ಸಪ್ನಾ, ರಚನಾ ಸೂರಜ್, ಸಿಪಾಲಿ ಕರ್ಕೇರ, ಪ್ರಥ್ವಿರಾಜ್, ವಿದ್ಯಾ ಕಾಮತ್, ರಾಜೇಶ್ವರಿ, ಪ್ರಶಾಂತ್, ಆಶ್ಲೆ, ಸುಂದರ್ ತೋಡಾರ್, ಸಹನಾ ತೋಡಾರ್ ಮೊದಲಾದವರು ತರಬೇತಿ ನೀಡಲಿದ್ದಾರೆ.

ಈ ಶಿಬಿರದ ನಿರ್ದೇಶಕರಾಗಿ ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್.ಜಿ. ಹಾಗೂ ಸಂಯೋಜಕರಾಗಿ ಚಿತ್ರಕಲಾ ಅಧ್ಯಾಪಕರಾದ ಪೂರ್ಣೇಶ್ ಇರುತ್ತಾರೆ. ಇವರ ಮೊಬೈಲ್ ಸಂಖ್ಯೆ – 9980437223.

ಕ್ರಿಕೆಟ್ ಶಿಬಿರ: ಶಕ್ತಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಏಪ್ರಿಲ್ 01 ರಿಂದ ಏಪ್ರಿಲ್ 30ರ ತನಕ ಸಂಜೆ 4 ಗಂಟೆಯಿಂದ 6 ಗಂಟೆಯ ವರೆಗೆ 22 ಯಾಡ್ರ್ಸ್ ಸ್ಕೂಲ್ ಆಫ್ ಕ್ರಿಕೆಟ್ ಮಂಗಳೂರು ಇವರ ತರಭೇತುದಾರರಾದ ಸಾಮ್ಯುಯಲ್ ಜಯರಾಜ್ ಮತ್ತು ರಾಜೇಶ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 6 ವರ್ಷ ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಶಿಬಿರದ ಶುಲ್ಕ ರೂ.2500/- ಆಗಿರುತ್ತದೆ. ಈ ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯ ಅಧ್ಯಾಪಕರಾದ ನಿರ್ಮಿತ್ ಸಾಲ್ಯಾನ್ ಇರುತ್ತಾರೆ. ಅವರ ಸಂಪರ್ಕ ಮೊಬೈಲ್ ಸಂಖ್ಯೆ :8867408483.

ಈ ಶಿಬಿರದ ನೋಂದಾವಣಿಯನ್ನು ಆನ್‍ಲೈನ್ ವೆಬ್‍ಸೈಟ್ www.shakthi.edu.in ಮೂಲಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ನೋಂದಾಣಿ ಮಾಡಲು ಮಾರ್ಚ್ 30 ಕೊನೆಯ ದಿನಾಂಕವಾಗಿರುತ್ತದೆ. ಈ ಶಿಬಿರದ ಯಶಸ್ವಿಗಾಗಿ ಮಾಧ್ಯಮ ಮಿತ್ರರು ಹೆಚ್ಚಿನ ಪ್ರಚಾರ ನೀಡಿ ಸಹಕರಿಸಬೇಕಾಗಿ ಸಂಸ್ಥೆಯ ವತಿಯಿಂದ ವಿನಂತಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ಮೂರು ಶಿಬಿರದ ಸಮಗ್ರ ಮಾಹಿತಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಎಜ್ಯಕೇಶನ್ ಟ್ರಸ್ಟ್‍ನ ಪ್ರಧಾನ ಸಲಹೆಗಾರ ರಮೇಶ್.ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್, ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್.ಜಿ ಉಪಸ್ಥಿತರಿದ್ದರು.

Pages