ಬಂಟ್ಸ್ ನ್ಯೂಸ್, ಪುತ್ತೂರು : ಜನಪರ ಕೆಲಸಗಳ ಮೂಲಕ ಪುತ್ತೂರಿನ ಜನರ ಅಭಿಮಾನಕ್ಕೆ ಪಾತ್ರರಾಗಿದ್ದ ಪುತ್ತೂರಿನ ಮಾಜಿ ತಹಶೀಲ್ದಾರ್ ಚಿಲ್ಮೆತ್ತಾರ್ ಕೋಚಣ್ಣ ರೈ (84) ಮಾ. 27ರಂದು ಮಂಗಳೂರಿನಲ್ಲಿ ನಿಧನರಾದರು.
ಮತೃರು ಪುತ್ರ ಡಾ. ಮಂಜುನಾಥ್, ಪುತ್ರಿಯರಾದ ವಿಜಯ, ಸುಜಯ, ಬಂಧು ಮಿತ್ರರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಕೋಚಣ್ಣ ರೈ ಅವರು ತಮ್ಮ ಸೇವಾವಧಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಿರುಮಲೆ ಗುಡ್ಡ, ಬೈಪಾಸ್ ರಸ್ತೆ ಅಭಿವೃದ್ಧಿ ಹೀಗೆ ಹಲವು ಜನಪರ ಕೆಲಸಗಳ ಮೂಲಕ ಗಮನ ಸೆಳೆದಿದ್ದರು. ಇವರ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿದೆ.