ಶಿವಮೊಗ್ಗ ಬಂಟರ ಸಂಘದಿಂದ ಸಮಾಜದ ನೊಂದವರಿಗೆ ಆರ್ಥಿಕ ಸಹಕಾರ ನೀಡುವ ಕಾರ್ಯಕ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಿವಮೊಗ್ಗ ಬಂಟರ ಸಂಘದಿಂದ ಸಮಾಜದ ನೊಂದವರಿಗೆ ಆರ್ಥಿಕ ಸಹಕಾರ ನೀಡುವ ಕಾರ್ಯಕ್ರಮ

Share This
ಬಂಟ್ಸ್ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜದ ನೊಂದವರಿಗೆ ಆರ್ಥಿಕ ಸಹಕಾರ ನೀಡುವ ಕಾರ್ಯಕ್ರಮವು ಮಾ. 27ರ ಭಾನುವಾರ ಶಿವಮೊಗ್ಗ ಬಂಟರ ಭವನ ಕಟ್ಟಡದಲ್ಲಿ ಜರುಗಿತು.
ಅತ್ಯಂತ ಹೃದಯಸ್ಪರ್ಶಿಯಾಗಿ ನಡೆದ ಕಾರ್ಯಕ್ರಮದಲ್ಲಿ ದಿವಂಗತ ವಿಶ್ವನಾಥ ಶೆಟ್ಟಿ ಅವರ ಮಗನಾದ ಚಿರಂಜೀವಿ ಯಶಸ್ ವಿ. ಶೆಟ್ಟಿ ಅವರಿಗೆ 1 ಲಕ್ಷ ರೂ.ಗಳನ್ನು ನಿಶ್ಚಿತ ಠೇವಣಿ ರೂಪದಲ್ಲಿ ಮತ್ತು ತಾಯಿ ಶ್ರೀಮತಿ ಮೀನಾಕ್ಷಮ್ಮ ಇವರಿಗೆ 25,000 ರೂ.ಗಳನ್ನು ನಗದು ರೂಪದಲ್ಲಿ ನೀಡಿ ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಲಾಯಿತು.

'ತಾನು ಎಲ್ಲರಿಗಾಗಿ ಮತ್ತು ಎಲ್ಲರೂ ತನಗಾಗಿ' ಎಂಬ ಮಾತಿನಂತೆ ಇಂತಹ ಅರ್ಥಪೂರ್ಣ ಮತ್ತು ಮಾನವೀಯತೆಯ ಕೆಲಸಕ್ಕೆ ತುಂಬು ಹೃದಯದಿಂದ ದೇಣಿಗೆ ನೀಡಿದ ಸಮಸ್ತ ಸಮಾಜ ಬಾಂಧವರಿಗೆ ಮತ್ತೊಮ್ಮೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದಿಂದ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಿತು.

ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಸಮಾಜ ಬಾಂಧವರು ಮತ್ತಿತರು ಉಪಸ್ಥಿತರಿದ್ದರು.

Pages