ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ದ ಕ್ಷೇತ್ರವಾಗಿರುವ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ದಾರ ಕಾರ್ಯಕ್ರಮ ನಡೆಯುತ್ತಿದ್ದು ಇದರ ಅಂಗವಾಗಿ ಮಾರ್ಚ್ 27ರಂದು, ರವಿವಾರ ಬೆಳಿಗ್ಗೆ ಶ್ರೀ ವೀರನಾರಾಯಣ ದೇವರ ನೂತನ ಶಿಲಾಮಯ ಗರ್ಭಗ್ರಹದ ನಿಧಿ ಕುಂಭ ಸ್ಥಾಪನೆ ಹಾಗೂ ಷಡಾಧಾರ ಪ್ರತಿಷ್ಠೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನ ಧರ್ಮದರ್ಶಿ ರವಿ ಎನ್. ನಡುಬೊಟ್ಟು ಆಗಮಿಸಲಿದ್ದಾರೆ.
ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯ ವಾಮಂಜೂರು ಅವರ ಪೌರೋಹಿತ್ಯದಲ್ಲಿ ರಮೇಶ್ ಕಾರಂತ ಬೆದ್ರಡ್ಕ ಇವರ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ರಮ ನಡೆಯುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.