ಬಂಟ್ಸ್ ನ್ಯೂಸ್, ಕಾಸರಗೋಡು : ಬೈಕ್ ಅಪಘಾತದಿಂದ ಕಾಲಿನ ಶಕ್ತಿ ಕಳೆದುಕೊಂಡು 6 ತಿಂಗಳಿನಿಂದ ಹಾಸಿಗೆಯಲ್ಲಿರುವ ಕಾಸರಗೋಡು ಕಣ್ಣೂರಿನ ತಿಲಕರಾಜ್ ಬಗ್ಗೆ ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಅವರ ಮಾಹಿತಿಯಂತೆ ಸಹಾಯಹಸ್ತ ಕೋರಿ ಬಂಟ್ಸ್ ನ್ಯೂಸ್ ಸುದ್ದಿ ಪ್ರಕಟಿಸಿತ್ತು. ತಕ್ಷಣ ಈ ಸುದ್ದಿಗೆ ಸ್ಪಂದಿಸಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಆರ್ಥಿಕ ಧನ ಸಹಾಯ ಮಾಡಿದ್ದಾರೆ.
ಅನುಷಾ ಗಾಂಭೀರ ಮಾಡೂರ್ ಮೂಲತಃ ತಾಯಿ ಮನೆ ಕುಂಬಳೆಯ ಹತ್ತಿರದ ರೋಗಿಯ ವಿಚಾರ ತಿಳಿದು ಬೇಸರವಾಗಿ, ಸತತ 20 ವರ್ಷಗಳಿಂದ ಸಾಮಾಜಿಕವಾಗಿ ಮತ್ತು ಉಳ್ಳಾಲ ಪರಿಸರದ ಬಂಟ ಸಮಾಜದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದ ನಿಸ್ವಾರ್ಥಿ ಸಾಮಾಜಿಕ ಕಾರ್ಯಕರ್ತ ಯಶುಪಕ್ಕಳ ಇವರಿಗೆ ಮಾಹಿತಿ ನೀಡಿದ್ದರು.
ಯಶು ಪಕ್ಕಳ ಅವರು ಮರುದಿನವೇ ಅಪಘಾತದಲ್ಲಿ ನಡೆಯಲು ಆಗದ ತಿಲಕರಾಜ್ ಮನೆಗೆ ತೆರಳಿ ಮಾಹಿತಿ ಪಡೆದು ಸಹಾಯ ಕೋರಿ ಬಂಟ್ಸ್ ನ್ಯೂಸಿನಲ್ಲಿ ಪ್ರಕಟಿಸಿದ್ದರು. ಅಲ್ಲದೆ ಈ ವಿಚಾರವನ್ನು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಐಕಳ ಅವರು ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ 25 ಸಾವಿರ ರೂ. ಆರ್ಥಿಕ ಸಹಾಯ ಮಾಡಿದ್ದಾರೆ.
ಸುದ್ದಿ ಹಿನ್ನೆಲೆ : ಮನೆಯ ಆಧಾರ ಸ್ತಂಭವಾಗಿದ್ದ ತಿಲಕರಾಜ್ ಅವರ ಬಲಗಾಲು ಅಪಘಾತದಿಂದ ಬಲ ಕಳೆದುಕೊಂಡಿದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ತಾಯಿ ವಾರಿಜ ಅವರು ತಿಲಕರಾಜ್ ಅವರ ಚಿಕಿತ್ಸೆಗಾಗಿ ಈಗಾಗಲೇ 1.50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು ಯಾವುದೇ ಪ್ರಯೋಜನವಾಗಿಲ್ಲ.
ಸರಿ ಸುಮಾರು 50 ಸಾವಿರದಷ್ಟು ಕೈಸಾಲ ಮಾಡಿಕೊಂಡಿದ್ದು ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಗಂಡನನ್ನು ಕಳೆದುಕೊಂಡಿರುವ ವಾರಿಜ ಅವರ ಕುಟುಂಬಕ್ಕೆ ತಿಲಕರಾಜ್ ಆಧಾರ ಸ್ತಂಭವಾಗಿ ಮನೆಯ ಜವಾಬ್ದಾರಿ ನೋಡಿಕೊಂಡಿದ್ದ. ತಿಲಕರಾಜ್ ಅಪಘಾತವಾದ ನಂತರ ಮನೆಯ ನಿರ್ವಹಣೆಗೆ ದಿಕ್ಕಿಲ್ಲದೆ ಕುಟುಂಬ ತೀರ ಕಷ್ಟದಲ್ಲಿದೆ. ಮನೆ ನಿರ್ಮಾಣದ ಕಾರ್ಯವು ಅರ್ಧಕ್ಕೆ ನಿಂತಿದ್ದು ಅರೆಬರೆ ಪೂರ್ಣವಾದ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಸ್ವಾಭಿಮಾನಿ ಯುವಕನಾಗಿದ್ದ ತಿಲಕರಾಜ್ ತನಾಗದ ಪರಿಸ್ಥಿತಿ ಹಾಗೂ ಕುಟುಂಬ ನಿರ್ವಹಣೆಗೆ ತಾಯಿ ವಾರಿಜ ಪಡುತ್ತಿರುವ ಕಷ್ಟ ನೋಡಲಾಗದೆ ಆತ್ಮಹತ್ಯೆಯ ಪ್ರಯತ್ನ ಪಟ್ಟಿದ್ದ ಎನ್ನಾಲಾಗಿದೆ. ಇಂತಹ ತೀರ ಕಷ್ಟದಲ್ಲಿರುವ ವಾರಿಜ ಅವರ ಕುಟುಂಬಕ್ಕೆ ಸಹೃದಯಿ ದಾನಿಗಳ ನೆರವಿನ ಅಗತ್ಯವಿದೆ.
ವಾರಿಜ ಅವರ ಕುಟುಂಬಕ್ಕೆ ಹಾಗೂ ತಿಲಕರಾಜ್ ಅವರ ಚಿಕಿತ್ಸೆಗೆ ನೆರವಾಗ ಬಯಸುವ ದಾನಿಗಳು ಈ ಬ್ಯಾಂಕ್ ಅಕೌಂಟಿಗೆ ತಮ್ಮ ಸಹಾಯ ಧನವನ್ನು ಕಳುಹಿಸಬಹುದು. Name :Varija, Bank Name : Kerala Gramin Bank, A/c No: 40417100900001, IFSC Code : KLGB0040417.