ಸುರತ್ಕಲ್ : ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಮಹಿಳಾ ವೇದಿಕೆಯಿಂದ ಬಂಟರ ಭವನದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗ್ರಾಮವಾರು ಸಮಿತಿಯ ಸಂಘಟನೆಗೆ ವಲಯ ಸಂಘಟಕರು ಜೊತೆಯಾಗಿ ಮಹಿಳಾ ವೇದಿಕೆಯ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಮಾಜೀ ಅಧ್ಯಕ್ಷರಾದ ಅಂಜನಾ ಎಂ ಶೆಟ್ಟಿ, ಆಶಾ ಆರ್ ಶೆಟ್ಟಿ, ಬೇಬಿ ಎನ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಭಾರತಿ ಜಿ ಶೆಟ್ಟಿ ದೀಪ ಬೆಳಗಿಸಿ ಸಂಘಟನೆಗೆ ಚಾಲನೆ ನೀಡಿದರು. ಪ್ರತೀ ಗ್ರಾಮದಲ್ಲೂ ಮಹಿಳೆಯರನ್ನು ಸಂಘಟಿಸಿ ಸಮಾಜಪರ ಕೆಲಸಗಳಿಗೆ ಒತ್ತು ನೀಡಲಾಗುವುದು ಎಂದು ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ ತಿಳಿಸಿದರು.
ಶಿಕ್ಷಣದಲ್ಲಿ ಸಾಧನೆಗೈದ ಶ್ರಾವ್ಯ ಶೆಟ್ಟಿ, ಪೂರ್ವಿ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ರಾಷ್ಟ್ರ ಮಟ್ಟದ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿಯನ್ನು ರಾಷ್ಟ್ರ ಪತಿಯವರಿಂದ ಪಡೆದ ಬಿಂದಿಯಾ ಶೆಟ್ಟಿ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಸಾತ್ವಿ ಶೆಟ್ಟಿ ಮತ್ತು ಶ್ರೇಯ ಶೆಟ್ಟಿ ಸನ್ಮಾನ ಸ್ವೀಕರಿಸಿದರು. ಕಿತ್ತೂರು ರಾಣಿ ಪ್ರಶಸ್ತಿ ಪುರಸ್ಕೃತ ದೀಕ್ಷಾ ಶೆಟ್ಟಿಯ ಪರವಾಗಿ ಆಕೆಯ ತಾಯಿ ಮೀರಾ ಶೆಟ್ಟಿ ಗೌರವ ಸ್ವೀಕರಿಸಿದರು.
ಸಮಾರಂಭದಲ್ಲಿ ಉಪಾಧ್ಯೆಕ್ಷೆ ಭವ್ಯಾ ಎ ಶೆಟ್ಟಿ, ಕಾರ್ಯದರ್ಶಿ ಸರೋಜ ಟಿ ಶೆಟ್ಟಿ, ಕೋಶಾಧಿಕಾರಿ ಶೈಲಾ ಎಸ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಕ್ಷತಾ ಜಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಕೇಸರಿ ಎಸ್ ಪೂಂಜ ಮೊದಲಾದವರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.