ಸುರತ್ಕಲ್ ಬಂಟರ ಸಂಘದಿಂದ ಸೇವಾ ಭಾಗ್ಯ ಯೋಜನೆಗೆ ಚಾಲನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುರತ್ಕಲ್ ಬಂಟರ ಸಂಘದಿಂದ ಸೇವಾ ಭಾಗ್ಯ ಯೋಜನೆಗೆ ಚಾಲನೆ

Share This
ಬಂಟ್ಸ್ ನ್ಯೂಸ್, ಸುರತ್ಕಲ್ : ಬಂಟರ ಸಂಘ (ರಿ), ಸುರತ್ಕಲ್ ಇದರ ಆಶ್ರಯದಲ್ಲಿ ಸೇವಾ ಭಾಗ್ಯ ಯೋಜನೆಯಡಿಯಲ್ಲಿ 7 ಸಮಿತಿಗಳನ್ನು ರಚಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಸುರತ್ಕಲ್ ಬಂಟರ ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಸುಧಾಕರ ಎಸ್ ಪೂಂಜಾ ಮಾಹಿತಿ ನೀಡಿದರು. ಕಳೆದ 25 ವರ್ಷಗಳಿಂದ ಸುರತ್ಕಲ್ ಬಂಟರ ಸಂಘವು ತನ್ನ ವ್ಯಾಪಿಯಲ್ಲಿರುವ 19 ಗ್ರಾಮಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಅದಕ್ಕೆ ಪೂರಕವಾಗಿ ಇದೀಗ ಏಳು ಸಮಿತಿಗಳನ್ನು ರಚಿಸಿ ಸೇವಾ ಭಾಗ್ಯ ಯೋಜನೆಯಡಿಯಲ್ಲಿ ಕಾರ್ಯ ಪ್ರವೃತ್ತರಾಗಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

1.ವಸತಿ ಯೋಜನೆ : ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯಲ್ಲಿ ಈ ಹಿಂದೆ 4 ಮನೆಗಳನ್ನು ಸಂಘದ ವತಿಯಿಂದ ನಿರ್ಮಿಸಿಕೊಡಲಾಗಿದೆ. ಇದೀಗ ವಸತಿ ಯೋಜನೆಯ ಮೊದಲ ಹಂತದ ಕಾರ್ಯಕ್ರಮವಾಗಿ ತೋಕೂರಿನಲ್ಲಿ ಚಂದ್ರಶೇಖರ ಶೆಟ್ಟಿ ಅವರ ಮನೆ ನಿರ್ಮಾಣಕ್ಕೆ ಪೂಜೆಯ ಮೂಲಕ ಇಂದು ಚಾಲನೆ ನೀಡಲಾಯಿತು. ಬಡ ಕುಟುಂಬದಿಂದ ಸಂಘಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ವರ್ಷ ಸದ್ಯ ಮೂರು ಮನೆಗಳನ್ನು ಕಟ್ಟಿ ಕೊಡುವ ಯೋಜನೆ ಇದೆ.

2. ಕ್ರೀಡಾ ಸಮಿತಿ : ದಿನಾಂಕ 09-01-2022 ರಂದು ಆದಿತ್ಯವಾರ ಕ್ರೀಡಾ ಸಮಿತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಗೋವಿಂದದಾಸ ಕಾಲೇಜ್ ಮೈದಾನದಲ್ಲಿ ಗ್ರಾಮವಾರು ಕ್ರೀಡಾಕೂಟ ಜರಗಲಿದೆ. 2. ಗ್ರಾಮಾಂತರ ಪ್ರದೇಶಗಳಲ್ಲಿರುವ ಯುವ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಗಳನ್ನು ಸಂಘವು ನಿರಂತರವಾಗಿ ನೀಡುತ್ತಿದೆ. 3.ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಕ್ರೀಡಾಪಟುಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿದ್ದೇವೆ.

3. ವೈದ್ಯಕೀಯ / ತುರ್ತು ಸೇವೆ : ವೈದ್ಯಕೀಯ ಸಮಿತಿಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಅಲ್ಲದೆ 1. ಗ್ರಾಮವ್ಯಾಪ್ತಿಯಲ್ಲಿ ಯಾರಾದರೂ ನಿಧನ ಹೊಂದಿದರೆ, ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಸಮಾಜ ಭಾಂದವರ ಅಂತಿಮ ಶವ ಸಂಸ್ಕಾರವನ್ನು ಸಂಘದ ತುರ್ತು ಸೇವೆಯ ಮೂಲಕ ಕೈಗೊಳ್ಳಲಾಗುವುದು. 2. ವೈದ್ಯಕೀಯ ಶಿಬಿರ 3. ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ 4. ದಂತ ಚಿಕಿತ್ಸಾ ಶಿಬಿರ 5. ರಕ್ತದಾನ ಶಿಬಿರ 6. ಆರೋಗ್ಯ ಕಾರ್ಡ್ 7. ಕೃತಕ ಅವಯವ ಜೋಡಣಾ ಶಿಬಿರ 8. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಅರಿವಿನ ಮಾಹಿತಿ ಶಿಬಿರಗಳನ್ನು ನಡೆಸಲು ತೀರ್ಮಾನಿಸಲಾಗಿದೆ. 

4. ಶಿಕ್ಷಣ ಸಮಿತಿ: 1. ನಮ್ಮ ಸಂಘದ ವಿಧ್ಯಾನಿಧಿ ಯೋಜನೆಯಡಿಯಲ್ಲಿ ನಿರಂತರವಾಗಿ ಪದವಿ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು ಈ ವರ್ಷದ ವಿದ್ಯಾರ್ಥಿ ವೇತನವನ್ನು ಮುಂದಿನ ಜನವರಿ ತಿಂಗಳಲ್ಲಿ ವಿತರಿಸಲಾಗುವುದು. 2. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಅವಶ್ಯಕತೆಯಿದ್ದಲ್ಲಿ ನಮ್ಮ ಸಂಘದ ಮಿತಿಯೊಳಗೆ ಹಾಗೂ ದಾನಿಗಳನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಡಲಾಗುವುದು. 3. 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ಆಯ್ಕೆಯ ಬಗ್ಗೆ ಮಾರ್ಗದರ್ಶನ ಶಿಬಿರ. 4. ಪೂರ್ವ ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು. 5. ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಶಿಬಿರ 6. ತೀರಾ ಬಡತನದಲ್ಲಿರುವ ಕುಟುಂಬದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲಾಗುವುದು.  

5. ಕೃಷಿ ಸಮಿತಿ : ಬಂಟರ ಸಂಘದ 25ನೇ ವರ್ಷ ಆಚರಣೆ ಪ್ರಯುಕ್ತ ಪ್ರತಿಯೊಂದು ಮನೆಗೆ ಗಿಡ ನೀಡುವ ಕಾರ್ಯಕ್ರಮ- ಮನೆಗೊಂದು ಮರವನ್ನು ಹಮ್ಮಿಕೊಳ್ಳಲಾಗಿದೆ. 1. ಸಾವಯವ ಕೃಷಿ ಮಾಡುವವರನ್ನು ಗುರುತಿಸುವುದು. 2. ಕೃಷಿಕರಿಗೆ ಸರಕಾರದ ಸವಲತ್ತುಗಳನ್ನು ಪಡೆಯಲು ಶ್ರಮಿಸುವುದು. 3. ಸರಕಾರದ ವಿವಿಧ ಸವಲತ್ತುಗಳ ಮಾಹಿತಿಯನ್ನು ರೈತರಿಗೆ ನೀಡುವುದು. 4. ಕೃಷಿ ಮಾಡಲು ಉತ್ಸಾಹ ಉಳ್ಳವರಿಗೆ ತರಕಾರಿ, ಹೈನುಗಾರಿಕೆ, ಕೃಷಿ ಬಗ್ಗೆ ತರಬೇತಿ ನೀಡಲಾಗುವುದು. 5. ಕೃಷಿ ಚಟುವಟಿಕೆಯ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವುದು. 6. ಕೃಷಿಕರಿಗೆ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಆರ್‌ಟಿಸಿ ಸಮಸ್ಯೆ ಇದ್ದು ಅದರ ಬಗ್ಗೆ ಸರಕಾರದ ಗಮನಕ್ಕೆ ತರುವುದು. 7. ಹೈನುಗಾರಿಕೆ ಮಾಡುವವರನ್ನು ಪ್ರೋತ್ಸಾಹಿಸುವುದು ಮತ್ತು ಗುರುತಿಸುವುದು. 8. ಕೃಷಿ ಮತ್ತು ಹೈನುಗಾರಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು. 9. ಕಡಿಮೆ ಜಾಗದಲ್ಲಿ ಕೃಷಿ ಅಥವಾ ತರಕಾರಿ ಮಾಡುವ ಮೂಲಕ ಲಾಭ ಗಳಿಸುವ ಬಗ್ಗೆ ತರಬೇತಿ ನೀಡುವುದು. 10. ಎರೆಹುಳು ಗೊಬ್ಬರ ಮತ್ತು ಜೇನುಕೃಷಿ ಬಗ್ಗೆ ಮಾಹಿತಿ ನೀಡುವುದು. 11. ಕೃಷಿ ಮಾಡದೆ ಹಡೀಲು ಬಿದ್ದ ಗದ್ದೆಗಳಲ್ಲಿ ಕೃಷಿ ಮಾಡುವಂತೆ ಸಹಾಯ ಮಾಡುವುದು ಮತ್ತು ಪ್ರೋತ್ಸಾಹ ನೀಡುವುದು.

6. ಸಾಂಸ್ಕ್ರತಿಕ ಸಮಿತಿ : ಸಾಂಸ್ಕ್ರತಿಕ ಸಮಿತಿಯ ಆಶ್ರಯದಲ್ಲಿ ಯಕ್ಷಗಾನ, ನೃತ್ಯ, ಸಂಗೀತ, ಭಜನಾ ಕಮ್ಮಟ, ಪ್ರಸಾದನ  ಭರತನಾಟ್ಯ, ಅಭಿನಯ ತರಬೇತಿ ಸಹಿತ ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು.

ರಾಷ್ಟ್ರೀಯ ಬಂಟರ ಸಾಂಸ್ಕೃತಿಕ ಸ್ಪರ್ಧೆ :
2022 ರ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಬಂಟರ ಸಾಂಸ್ಕ್ರತಿಕ ಸ್ಪರ್ಧೆಯನ್ನು ಎರಡು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.

7. ವಿವಾಹ ವೇದಿಕೆ : ಮಹಿಳಾ ವೇದಿಕೆಯಿಂದ ವಿವಾಹ ವೇದಿಕೆ ರಚನೆಗೊಂಡು ವಧೂವರರ ಮಾಹಿತಿಯನ್ನು ಪಡೆದು ವಿವಾಹಕ್ಕೆ ಸಹಕರಿಸುವುದು.

ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ, ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಪ್ರವೀಣ್ ಪಿ ಶೆಟ್ಟಿ ಇಡ್ಯಾ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಸುರತ್ಕಲ್, ಸಹ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ವಸತಿ ಯೋಜನಾ ಸಮಿತಿಯ ಸಂಚಾಲಕರು ದೇವೇಂದ್ರ ಕೆ ಶೆಟ್ಟಿ ಇಡ್ಯಾ, ಕ್ರೀಡಾ ಸಮಿತಿಯ ಸಂಚಾಲಕ ಹರೀಶ್ ಕೆ ಶೆಟ್ಟಿ ಕಾಟಿಪಳ್ಳ, ವೈದ್ಯಕೀಯ ಸಮಿತಿಯ ಸಂಚಾಲಕರು ವಿಶ್ವನಾಥ ಶೆಟ್ಟಿ ಸುರತ್ಕಲ್, ಶಿಕ್ಷಣ ಸಮಿತಿಯ ಸಂಚಾಲಕ ಕಿರಣ್ ಪ್ರಸಾದ್ ರೈ ಕುಳಾಯಿ, ಕೃಷಿ ಸಮಿತಿಯ ಸಂಚಾಲಕರು ಪುಷ್ಪರಾಜ್ ಶೆಟ್ಟಿ ಮಧ್ಯ, ಸಾಂಸ್ಕ್ರತಿಕ ಸಮಿತಿಯ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ವಿವಾಹ ವೇದಿಕೆಯ ಸಂಚಾಲಕಿ ಚಿತ್ರಾ ಜೆ ಶೆಟ್ಟಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.

Pages