ಮುನಿಯಾಲು ಉದಯ ಶೆಟ್ಟಿ ಅವರ ಸಮಾಜಮುಖಿ ಚಿಂತನೆ ಶ್ಲಾಘನೀಯ : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುನಿಯಾಲು ಉದಯ ಶೆಟ್ಟಿ ಅವರ ಸಮಾಜಮುಖಿ ಚಿಂತನೆ ಶ್ಲಾಘನೀಯ : ಐಕಳ ಹರೀಶ್ ಶೆಟ್ಟಿ

Share This
ಬಂಟ್ಸ್ ನ್ಯೂಸ್, ಹೆಬ್ರಿ : ಗ್ರಾಮೀಣ ಪ್ರದೇಶದಲ್ಲಿರುವ ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ಚುಕ್ಕಾಣಿ ಹಿಡಿದ ಮುನಿಯಾಲು ಉದಯ ಶೆಟ್ಟಿ ಅವರು ಬಂಟ ಸಮಾಜ ಭಾಂದವರನ್ನು ಒಟ್ಟು ಗೂಡಿಸುವುದರ ಜತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ ಮಾದರಿಯಾಗಿದ್ದಾರೆ. ಬಡವರ ಬಂಧುವಾಗಿ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವುದರ ಜತೆ ಪ್ರತಿ ತಿಂಗಳು ತನ್ನ ಟ್ರಸ್ಟ್ ಮೂಲಕ 50ಸಾವಿರಕ್ಕೂ ಮಿಕ್ಕಿ ಸಹಾಯಧನ ನೀಡುತ್ತಿರುವುದು ಶ್ಲಾಘನೀಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಡಿ.5ರಂದು ಪ್ರತಿಷ್ಠಿತ ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಹೆಬ್ರಿಯ ಶ್ರೀಮತಿ ಶೀಲಾ ಸುಬೋದ್ ಬಲ್ಲಾಳ್ ಬಂಟರ ಭವನದಲ್ಲಿ ನಡೆದ ಬಂಟರ ಸಮಾವೇಶವನ್ನು ಉದ್ಧಾಟಿಸಿ ಸಂಘದ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜ ಭಾಂದದವರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ರೀತಿಯ ಸಮಾವೇಶವನ್ನು ಮಾಡಲಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬ ಬಂಟ ಸಮಾಜ ಭಾಂದವರು ಪಾಲ್ಗೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುವುದರ ಜತೆಗೆ ಪರಸ್ಪರ ಭಾಂದವ್ಯಹೆಚ್ಚಲು ಸಾಧ್ಯ .ಈ ನಿಟ್ಟಿನಲ್ಲಿ ಪ್ರತಿತಿಂಗಳು ಸತ್ಯನಾರಾಯಣ ಪೂಜೆ ಮಾಡಲಾಗುತ್ತಿದ್ದು ಪ್ರತಿಯೊಬ್ಬರು ಪಾಲ್ಗೊಳ್ಳಿ ಎಂದರು. 

ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಬಂಟ ಮುಖಂಡರಿಂದ ಆಗಬೇಕು.ಇದಕ್ಕೆ ಎಲ್ಲಾ ಬಂಟ ಮುಖಂಡರು ಒಗ್ಗೂಡಿದಾಗ ಸಾಧ್ಯ ಎಂದರು.

ಪ್ರಧಾನ ಸಂಪದಾಕರಾಗಿ ಮುನಿಯಾಲು ಉದಯ ಶೆಟ್ಟಿ ಅವರ ನೇತೃತ್ವದಲ್ಲಿ ಪತ್ರಕರ್ತ ಹೆಬ್ರಿ ಉದಯಕುಮಾರ್ ಶೆಟ್ಟಿ ಸಂಪಾದಕತ್ವದ ಪ್ರಕಾಶ್ ಶೆಟ್ಟಿ ಹಾಗೂ ನವೀನ ಅಡ್ಯಂತಾಯ ಅವರ ಸಹಸಂಪಾದಕತ್ವದಲಿ ಹೆಬ್ರಿ ಅಜೆಕಾರು ವಲಯದ ಬಂಟರ ಸಮಾಜದ ಮಾಹಿತಿಯನ್ನು ಒಳಗೊಂಡ ಬಂಟರ ಮಾಹಿತಿ ಕೈಪಿಡಿ ಬಿಡುಗಡೆ ನಡೆಯಿತು. ಸಮಾರಂಭದಲ್ಲಿ ಬಂಟ ಸಮಾಜದ ಸಾಧಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ದೇಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. 

ಈ ಸಂದರ್ಭದಲ್ಲಿ ಉದ್ಯಮಿ ಶಿವಪುರ ನವೀನ್ ಶೆಟ್ಟಿ, ಸಹನಾ ಸುರೇಂದ್ರ ಶೆಟ್ಟಿ,ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ. ಬಲ್ಲಾಳ್, ಗೌರವಾಧ್ಯಕ್ಷ ರಮಾನಂದ ಹೆಗ್ಡೆ, ಉಪಾಧ್ಯಕ್ಷ ವಾದಿರಾಜ್ ಶೆಟ್ಟಿ, ಹರ್ಷ ಶೆಟ್ಟಿ ಬೇಳಂಜೆ, ಶಂಕರ ಶೆಟ್ಟಿ ಮುನಿಯಾಲು ಯಶೋದಾ ಶೆಟ್ಟಿ, ನಿರ್ಮಾಲ ಎಸ್.ಹೆಗ್ಡೆ, ಮಾತೃ ಸಂಘದ ನಿರ್ದೇಶಕರಾದ ಭೂತುಗುಂಡಿ ಕರುಣಾಕರ ಶೆಟ್ಟಿ, ಪ್ರಮೋದ ಆರ್ ಶೆಟ್ಟಿ, ಸಮಾವೇಶದ ಸಂಚಾಲಕ ಸುಕೇಶ್ ಶೆಟ್ಟಿ, ಸಹ ಸಂಚಾಲಕಿ ವಿಜೇತಾ ಶೆಟ್ಟಿ, ಯುವ ಬಂಟರ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಸಹಕಾರ್ಯದರ್ಶಿ ಸಂತೋಷ ಶೆಟ್ಟಿ, ಸಂಪತ್ ಶೆಟ್ಟಿ, ಜ್ಯೋತಿ ಕೆ.ಶೆಟ್ಟಿ, ಕೈಪಿಡಿ ಸಂಪಾದಕ ಹೆಬ್ರಿ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠಲ ಶೆಟ್ಟಿ, ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ಹಾಗೂ ಚಾರ ದೀಪಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ನವೀನ್ ಕೆ.ಅಡ್ಯಂತಾಯ ವಂದಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ, ಬಂಟ ಸಮಾಜದ ಪ್ರಸಿದ್ಧ ಯಕ್ಷಗಾನ ಭಾಗವತರಿಂದ ಯಕ್ಷಗಾನ ವೈಭವ, ಬಂಟರ ಸಂಘದ ಮಹಾಸಭೆ ನಡೆಯಿತು.

ಭಾರತವನ್ನು ಪ್ರತಿನಿಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ : ಅಂತರಾಷ್ಟಿಯ ಮಟ್ಟದಲ್ಲಿ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದು ಭಾರತವನ್ನು ಪ್ರತಿನಿಧಿಸಿದ ರೋಹಿತ್ ಕುಮಾರ್ ಕಟೀಲ್ ಅವರಿಗೆ ಈ ಭಾರಿ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಲಭಿಸಿದ್ದು ಈ ಹಿನ್ನಲೆಯಲ್ಲಿ ಅವರನ್ನು ಸಂಘದ ವತಿಯಿಂದ ಸಮ್ಮಾನಿಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಕಟೀಲ್ ನಿರಂತರ ಪರಿಶ್ರಮ ಹಾಗೂ ಸಾಧಿಸಬೇಕು ಎಂಬ ಛಲವಿದ್ದಾಗ ವಿದ್ದಾಗ ಯಶಸ್ಸು ಖಂಡಿತ.ಚಿಕ್ಕ ವಯಸ್ಸಿನಿಂದ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಇದ್ದ ನನಗೆ 1982ರಲ್ಲಿ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದು ನಿರಂತರ ಪರಿಶ್ರಮದಿಂದ ಭಾರತವನ್ನು ಪ್ರತಿನಿಧಿಸಿದ ಮೊದಲ ಭಾರತಿಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದೇನೆ. ಇದೇ ರೀತಿ ಬಂಟ ಸಮಾಜದಲ್ಲಿ ಹಲವಾರು ಪ್ರತಿಭೆಗಳಿದ್ದಾರೆ ಅಂತವರನ್ನು ನಮ್ಮ ಬಂಟ ಸಮಾಜದವರು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದರು.

Pages